ವಿವಾಹಕ್ಕೂ ಮೊದಲೇ ಗರ್ಭಿಣಿಯಾದ ಕಿಚ್ಚನ ಹುಡುಗಿ: ಸಾಮಾಜಿಕ ಜಾಲತಾಣದಲ್ಲಿ ಆಕೆ ಬರೆದುಕೊಂಡಿದ್ದೇನು..?

ದಕ್ಷಿಣ ಭಾರತದ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಆ್ಯಮಿ ವಿವಾಹಕ್ಕೂ ಮೊದಲೇ ಗರ್ಭಿಣಿಯಾಗಿದ್ದಾರೆ. ಈ ವಿಷಯವನ್ನು ಖುದ್ದು ಆ್ಯಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗರ್ಭಿಣಿಯಾದ ಕಿಚ್ಚನ ಹುಡುಗಿ ಆ್ಯಮಿ

ಗರ್ಭಿಣಿಯಾದ ಕಿಚ್ಚನ ಹುಡುಗಿ ಆ್ಯಮಿ

  • News18
  • Last Updated :
  • Share this:
ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ನಟಿ ಆ್ಯಮಿ ಜಾಕ್ಸನ್​. ಇತ್ತೀಚೆಗಷ್ಟೆ ತೆರೆಕಂಡ 'ದಿ ವಿಲನ್​' ಸಿನಿಮಾದಲ್ಲಿ ಕಿಚ್ಚನಿಗೆ ಜೋಡಿಯಾಗಿ ಆ್ಯಮಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಇಲ್ಲ ಇಲ್ಲ ಎನ್ನುತ್ತಲೇ ಮದುವೆಗೆ ಸಿದ್ಧರಾದ ರೌಡಿ ಬೇಬಿ ಸಾಯಿ ಪಲ್ಲವಿ..!

ದಕ್ಷಿಣ ಭಾರತದ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಆ್ಯಮಿ ವಿವಾಹಕ್ಕೂ ಮೊದಲೇ ಗರ್ಭಿಣಿಯಾಗಿದ್ದಾರೆ. ಈ ವಿಷಯವನ್ನು ಖುದ್ದು ಆ್ಯಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆ್ಯಮಿ ಜಾಕ್ಸನ್​


ಹೌದು, ಕಳೆದ ಜನವರಿಯಲ್ಲಿ ಜಾರ್ಜ್​ ಪನಯೌಟ್​ ಎಂಬ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆ್ಯಮಿ. ಈಗ ಆ್ಯಮಿ ಸಾಮಾಜಿಕ ಜಾಲತಾಣದ ಮೂಲಕ ತಾನು ತಾಯಿಯಾಗುತ್ತಿರುವ ಸುದ್ದಿ ಕೊಡುವ ಮೂಲಕ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದ್ದಾರೆ.

 
ಬ್ರಿಟನ್​ನಲ್ಲಿ ಮಾರ್ಚ್​ ತಿಂಗಳ ಕೊನೆಯ ಭಾನುವಾರದಂದು ತಾಯಂದಿರ ದಿನವಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ತಾನು ತಾಯಿಯಾಗುತ್ತಿರುವ ವಿಷಯವನ್ನು ಆ್ಯಮಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Rowdy Baby: ಮತ್ತೊಂದು ದಾಖಲೆ ಬರೆದ 'ರೌಡಿ ಬೇಬಿ' ಸಾಯಿ ಪಲ್ಲವಿ..!

ಮಾಡೆಲಿಂಗ್​ನಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಆ್ಯಮಿಗೆ ಇನ್ನೂ 26 ವರ್ಷ. ಇತ್ತೀಚೆಗೆ ತಮಿಳಿನಲ್ಲಿ ರಜಿನಿ ಕಾಂತ್​ ಅವರೊಂದಿಗೆ 'ರೊಬೊ 2.0' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಾಯಿಯಾಗುತ್ತಿರುವ ಆ್ಯಮಿಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ

PHOTOS: ಮಿಯಾಮಿಯಲ್ಲಿ ರಜೆಯ ಮಜದಲ್ಲಿ ಗಂಡ ನಿಕ್​ ಜತೆ ಪ್ರಿಯಾಂಕಾ ಚೋಪ್ರಾ..!
First published: