ನಟ ನಟಿಯರು (Actor And Actress) ಎಂದರೆ ಜನರಿಗೆ ಬಹಳ ಕ್ರೇಜ್. ಅವರನ್ನು ನೋಡಲು, ಮಾತನಾಡಲು ಅಭಿಮಾನಿಗಳು (Fans) ಹಪಹಪಿಸುತ್ತಾರೆ. ಕೆಲವರಂತೂ ಅತಿರೇಕದ ವರ್ತನೆ ಮಾಡಿರುವುದು ಇದೆ. ಅದರಲ್ಲೂ ಹೀರೋಗಳೆಂದರೆ (Hero) ಅದೇನೋ ಪ್ರೀತಿ ಅಭಿಮಾನ. ಸ್ಯಾಂಡಲ್ವುಡ್ನಿಂದ (Sandalwood) ಹಿಡಿದು ಬಾಲಿವುಡ್ವರೆಗೆ (Bollywood) ಅಭಿಮಾನಿಗಳು ನೆಚ್ಚಿನ ನಟ ಅಥವಾ ನಟಿಯನ್ನು ನೋಡಲು ಹರಹಾಸ ಮಾಡಿರುವ ಅದೆಷ್ಟೋ ಉದಾಹರಣೆಗಳಿವೆ. ಅವರ ಮನೆಯ ಬಳಿ ಹೋಗುವುದು, ಶೂಟಿಂಗ್ (Shooting) ಮಾಡುತ್ತಿರುವ ಜಾಗಕ್ಕೆ ಹೋಗುವುದು ಹೀಗೆ. ಆದರೆ ಇಲ್ಲೊಂದು ವಿಭಿನ್ನ ಘಟನೆ ನಡೆದಿದೆ. ನೆಚ್ಚಿನ ನಟನನ್ನ ನೋಡಲು ವಧು ಒಬ್ಬಳು ಮಂಟಪದಿಂದ ಎದ್ದು ಬಂದಿದ್ದು, ನಂತರ ನಿರಾಸೆ ಅನುಭವಿಸಿದ್ದಾರೆ.
ವಿಕ್ಕಿ ನೋಡಲು ಮಂಟಪ ಬಿಟ್ಟು ಬಂದ ವಧು
ಹೌದು, ಬಾಲಿವುಡ್ ನಟ ವಿಕ್ಕಿ ಕೌಶಲ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ. ಅದರಲ್ಲೂ ಅವರಿಗೆ ಸ್ವಲ್ಪ ಹುಡುಗಿಯರೇ ಫ್ಯಾನ್ಸ್ ಹೆಚ್ಚು ಇರುವುದು. ವಿಕ್ಕಿ ಹುಡುಗಿಯರ ಹಾಟ್ ಫೇವರೇಟ್ ಎಂದರೆ ತಪ್ಪಲ್ಲ. ಇಲ್ಲೊಬ್ಬ ಅಭಿಮಾನಿ ಹಸೆಮಣೆ ಬಿಟ್ಟು ವಿಕ್ಕಿ ನೋಡಲು ಕಾಯುತ್ತಿದ್ದು, ಸದ್ಯ ಈ ವಿಡಿಯೋ ಬಹಳ ಫೇಮಸ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ ವಧು ವಿಕ್ಕಿ ಕೌಶಲ್ ನೋಡಲು ಕಾಯುತ್ತಿರುವುದನ್ನು ಕಾಣಬಹುದು.
ನಟ ವಿಕ್ಕಿ ಕೌಶಲ್ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ತನ್ನ ಮದುವೆ ನಡೆಯುತ್ತಿರುವುದು ಎಂದು ತಿಳಿದ ಮೇಲೆ ವಧು ಮಂಟಪಕ್ಕೆ ಹೋಗಲು ನಿರಾಕರಿಸಿದ್ದು, ನಟನನ್ನ ನೋಡಲೇ ಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ಇದು ವರನನ್ನ ಪೇಚಿಗೆ ಸಿಲುಕಿಸಿದೆ. ವಧು ವಿಕ್ಕಿ ಕೌಶಲ್ ಅಪ್ಪಟ ಅಭಿಮಾನಿಯಂತೆ, ಹಾಗಾಗಿ ಮೊದಲು ವಿಕ್ಕಿ ನೋಡಬೇಕು ನಂತರ ಮಂಟಪಕ್ಕೆ ಬರುತ್ತೇನೆ ಎಂದು ಹಠ ಮಾಡಿದ್ದಾರೆ. ಅಲ್ಲದೇ, ವಿಕ್ಕಿ ಇದ್ದ ರೂಂ ಬಳಿ ಸಹ ಹೋಗಿದ್ದು, ಅಲ್ಲಿ ವಿಕ್ಕಿ ತಂಡದ ಜೊತೆ ಮಾತನಾಡಿದ್ದಾರೆ. ವಿಕ್ಕಿ ಭೇಟಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ ವಧುವಿನ ಪ್ರಯತ್ನ ವ್ಯರ್ಥವಾಗಿದೆ.
ಇದನ್ನೂ ಓದಿ: 777 Charlie ಕಲೆಕ್ಷನ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ರಕ್ಷಿತ್ ಶೆಟ್ಟಿ, ಲಾಭದಲ್ಲಿ ಚಾರ್ಲಿಗೂ ಪಾಲಿದೆಯಂತೆ
ವಿಕ್ಕಿ ಸಿಗದೇ ನಿರಾಸೆಗೊಂಡ ಫ್ಯಾನ್
ವಧು ವಿಕ್ಕಿ ರೂಂ ಬಳಿ ಹೋಗುವ ಆ ವೇಳೆಗಾಗಲೇ ವಿಕ್ಕಿ ಸಿನಿಮಾ ಶೂಟಿಂಗ್ ಗಾಗಿ ಲೊಕೇಶನ್ಗೆ ಹೋಗಿಯಾಗಿತ್ತು. ಹಾಗಾಗಿ ವಧುವಿಗೆ ವಿಕ್ಕಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದು ವಧುವಿನ ನಿರಾಸೆಗೆ ಕಾರಣವಾಗಿದೆ. ವಿಕ್ಕಿ ಇಲ್ಲ ಎಂದು ತಿಳಿದ ವಧು ಬೇಸರದಿಂದ ಮರಳಿ ಹೋಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ: ಬ್ಯಾಂಕಾಕ್ನಲ್ಲಿ ಮೋಹಕ ತಾರೆ ರಮ್ಯಾ, ಫೋಟೋ ನೋಡಿ ದೃಷ್ಟಿ ತೆಗೆಸಿಕೊಳ್ಳಿ ಅಂದ್ರು ಫ್ಯಾನ್ಸ್
ಎಲ್ಲೆಡೆ ನೆಟ್ಟಿಗರು ಇದನ್ನು ಶೇರ್ ಮಾಡಿಕೊಂಡಿದ್ದು, ವೆರೈಟಿ, ವೆರೈಟಿ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಗಳು ನಟ, ನಟಿಯರು ನೋಡಲು ವಿಚಿತ್ರ ಆಟಗಳನ್ನು ಮಾಡುತ್ತಾರೆ. ಇದು ಕೆಲವೊಮ್ಮೆ ಸೆಲೆಬ್ರಿಟಿಗಳನ್ನು ಪೇಚಿಗೆ ಸಿಲುಕಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ