• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Breaking News: 18 ವರ್ಷದ ದಾಂಪತ್ಯ ಅಂತ್ಯಗೊಳಿಸಿದ Dhanush ಮತ್ತು ಐಶ್ವರ್ಯಾ ರಜನಿಕಾಂತ್, ಅಭಿಮಾನಿಗಳಿಗೆ ಆಘಾತ!

Breaking News: 18 ವರ್ಷದ ದಾಂಪತ್ಯ ಅಂತ್ಯಗೊಳಿಸಿದ Dhanush ಮತ್ತು ಐಶ್ವರ್ಯಾ ರಜನಿಕಾಂತ್, ಅಭಿಮಾನಿಗಳಿಗೆ ಆಘಾತ!

ಧನುಷ್-ಐಶ್ಚರ್ಯಾ

ಧನುಷ್-ಐಶ್ಚರ್ಯಾ

2022ರ ಇಸವಿಯ ಮೊದಲನೇ ಸ್ಟಾರ್ ವಿಚ್ಛೇದನ ಇದಾಗಿದ್ದು, ಅಭಿಮಾನಿಗಳಿಗೆ ಆಘಾತವಾಗಿದೆ. ಇದೆಲ್ಲಾ ಸುಳ್ಳು, ನಂಬಲು ಸಾಧ್ಯವಿಲ್ಲ ಎಂದೇ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

  • Share this:

    ತಮಿಳಿನ ಖ್ಯಾತ ನಟ ಧನುಷ್ ಕೆ ರಾಜ (Dhanush K Raja) ಮತ್ತು ಸೂಪರ್​ ಸ್ಟಾರ್ ರಜನಿಕಾಂತ್ (Superstar Rajinikanth) ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. 18 ವರ್ಷಗಳವರಗೆ ಜೊತೆಯಾಗಿ ಬಾಳಿದ ಈ ಜೋಡಿ ಇದೀಗ ತಮ್ಮ ಬದುಕಿನ ಪಥ ಬದಲಿಸಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಐಶ್ಚರ್ಯಾ ಬರೆದುಕೊಂಡಿದ್ದಾರೆ. ಐಶ್ವರ್ಯಾ ಪೋಸ್ಟ್ ನೋಡಿ ಅಭಿಮಾನಿಗಳು ತಮ್ಮ ಆಘಾತ ವ್ಯಕ್ತಪಡಿಸುತ್ತಿದ್ದಾರೆ. 2004 ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಬೇರೆಯಾಗಿರುವುದಾಗಿ ತಿಳಿಸಿದೆ.  ಧನುಷ್ ಕೂಡಾ ಇದೇ ವಿಚಾರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ


    ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಐಶ್ವರ್ಯಾ ತಮ್ಮ ಹೆಸರನ್ನು ಐಶ್ವರ್ಯಾ ಆರ್ ಧನುಷ್ ಎಂದೇ ಮುಂದುವರೆಸಿದ್ದಾರೆ. ಆದರೆ ತಮ್ಮ ಬದುಕಿನ ಈ ಹಂತದಲ್ಲಿ ಜನ ತಮ್ಮಿಬ್ಬರನ್ನೂ ಅರ್ಥ ಮಾಡಿಕೊಳ್ಳುವಂತೆ, ಆ ಮೂಲಕ ತಮ್ಮ ಖಾಸಗಿ ಬದುಕಿಗೆ ಅಗತ್ಯವಿರುವ ಪ್ರೈವೆಸಿ ನೀಡುವಂತೆ ಕೋರಿಕೊಂಡಿದ್ದಾರೆ.




    ಇದೇ ಮಾತನ್ನು ಧನುಷ್ ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.  ತಮಿಳು ಚಿತ್ರರಂಗ ವಲಯದಲ್ಲಿ ಧನುಷ್ ಮತ್ತು ಐಶ್ವರ್ಯಾ ಇದುವರೆಗೆ ಆದರ್ಶ ದಂಪತಿಗಳಾಗಿಯೇ ಬಾಳಿದವರು. ಅನೇಕ ಕಡೆ ಬೇರೆ ಕಲಾವಿದರು ಕೂಡಾ ಈ ಮಾತನ್ನು ಹೇಳಿದ್ದಾರೆ. ಧನುಷ್​ದು ಥೇಟ್ ತನ್ನ ತಂದೆ ರಜನಿಕಾಂತ್​ರಂಥಾ ವ್ಯಕ್ತಿತ್ವ, ಹಾಗಾಗಿ ತನ್ನ ಅಕ್ಕನಿಗೆ ಅವರೊಂದಿಗೆ ಹೊಂದಿಕೊಳ್ಳೋದು ಕಷ್ಟವಾಗಲಿಲ್ಲ ಎಂದು ರಜನಿಕಾಂತ್ ಎರಡನೇ ಮಗಳು ಸೌಂದರ್ಯಾ ಹಿಂದೊಮ್ಮೆ ಈ ಜೋಡಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.


    ಇದನ್ನೂ ಓದಿ: Dhanush costume: ಧನುಷ್ ಅವರ ಉಡುಪುಗಳ ವೆಚ್ಚ ನೋಡಿ, ತೆಲುಗು ನಿರ್ಮಾಪಕರಿಗೆ ಅಚ್ಚರಿಯೋ ಅಚ್ಚರಿ!


    ಈಗ ಈ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೋಸ್ಟ್​ ನಲ್ಲಿ 18 ವರ್ಷಗಳಲ್ಲಿ ಸ್ನೇಹಿತರಾಗಿ, ಜೋಡಿಯಾಗಿ, ಪೋಷಕರಾಗಿ ಮತ್ತು ಹಿತೈಷಿಗಳಾಗಿ ನಾವಿಬ್ಬರೂ ಒಬ್ಬರಿಗೊಬ್ಬರು ಜೊತೆಯಾಗಿದ್ದೇವೆ. ಇದು ಬೆಳವಣಿಗೆಯ, ಅರ್ಥೈಸಿಕೊಳ್ಳುವಿಕೆಯ ಮತ್ತು ಹೊಂದಾಣಿಕೆಯ ಮಾರ್ಗವಾಗಿತ್ತು. ಆದರೆ ಇಂದು ನಮ್ಮ ಮಾರ್ಗಗಳು ಬದಲಾಗುವ ಸ್ಥಳದಲ್ಲಿ ನಾವು ಬಂದು ನಿಂತಿದ್ದೇವೆ.


    ನಾವಿಬ್ಬರೂ ಬೇರೆಯಾಗಿ ನಮ್ಮನ್ನು ನಾವು ಸ್ವತಂತ್ರ ವ್ಯಕ್ತಿಗಳಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನಲ್ಲಿದ್ದೇವೆ. ದಯವಿಟ್ಟು ನಮಗೆ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಖಾಸಗಿತನವನ್ನು ನೀಡಿ, ನಮ್ಮನ್ನು ಅರ್ಥಮಾಡಿಕೊಳ್ಳಿ ಎಂದು ಇಬ್ಬರೂ ತಂತಮ್ಮ ಪತ್ರಗಳಲ್ಲಿ ತಿಳಿಸಿದ್ದಾರೆ.



    2022ರ ಇಸವಿಯ ಮೊದಲನೇ ಸ್ಟಾರ್ ವಿಚ್ಛೇದನ ಇದಾಗಿದ್ದು, ಅಭಿಮಾನಿಗಳಿಗೆ ಆಘಾತವಾಗಿದೆ. ಇದೆಲ್ಲಾ ಸುಳ್ಳು, ನಂಬಲು ಸಾಧ್ಯವಿಲ್ಲ ಎಂದೇ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಳೆದ ವರ್ಷವಷ್ಟೇ ಚೆನ್ನೈನ ಪೊಯೆಸ್ ಗಾರ್ಡನ್​ನಲ್ಲಿ ರಜನಿಕಾಂತ್ ಮನೆಯ ಬಳಿಯೇ ಈ ಜೋಡಿ ಹೊಸಾ ಸೈಟ್ ಖರೀದಿಸಿ ಮನೆ ಕಟ್ಟಲು ಗುದ್ದಲಿ ಪೂಜೆ ಕೂಡಾ ನೆರವೇರಿಸಿದ್ದರು.


    ಇದನ್ನೂ ಓದಿ: Atrangi re Review: ಅಕ್ಷಯ್​ ಎದುರು ನಟಿಸಿ ಫುರ್ಲ್ ಮಾರ್ಕ್ಸ್​ ಪಡೆದ ಧನುಷ್: ಅಬ್ಬಬ್ಬಾ.. ಅತರಂಗಿ ರೇ ಸೂಪರ್​!


    ಐಶ್ವರ್ಯಾ 3 ಎನ್ನುವ ಸಿನಿಮಾ ನಿರ್ದೇಶಕಿಯೂ ಹೌದು. 'ಕೊಲವೆರಿ ಡಿ' ಎನ್ನುವ ಸೂಪರ್ ಹಿಟ್ ಹಾಡು ಇದೇ ಚಿತ್ರದ್ದು. ರಜನಿಕಾಂತ್ ಎರಡನೇ ಮಗಳು ಸೌಂದರ್ಯ ಕೂಡಾ ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾಗಿದ್ದಾರೆ. ಧನುಷ್ ಮತ್ತು ಐಶ್ವರ್ಯಾಗೆ ಲಿಂಗ ಮತ್ತು ಯಾತ್ರಾ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ.

    Published by:Soumya KN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು