Breaking: ಸುಚೇಂದ್ರ ಪ್ರಸಾದ್​ಗೆ ಅನ್ಯಾಯ ಮಾಡಿಲ್ಲ, ನರೇಶ್ ಕೆಟ್ಟವರಲ್ಲ! ಮತ್ತೊಂದು ಮದುವೆ ಬಗ್ಗೆ ಪವಿತ್ರಾ ಲೋಕೇಶ್ ಹೇಳಿದ್ದು ಹೀಗೆ

ಪವಿತ್ರ ಲೋಕೇಶ್​​ ನರೇಶ್ ಜೊತೆಗಿನ ನಂಟಿನ ಬಗ್ಗೆ ಬಾಯ್ಬಿಟ್ಟಿದ್ದಾರೆ. ನರೇಶ್ ಬಗ್ಗೆ ಹಾಡಿ ಹೊಗಳಿದ್ದಾರೆ. ನರೇಶ್​ ಅವರಿಗೆ ಯಾವುದೇ ಕೆಟ್ಟ ಬುದ್ದಿ ಇಲ್ಲ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಪವಿತ್ರ ಲೋಕೇಶ್​ ಹೇಳಿದ್ದಾರೆ.

ಮಹೇಶ್​ ಬಾಬು, ನರೇಶ್​, ಪವಿತ್ರಾ

ಮಹೇಶ್​ ಬಾಬು, ನರೇಶ್​, ಪವಿತ್ರಾ

  • Share this:
ಕಳೆದ ಒಂದು ವಾರದಿಂದ ಕನ್ನಡ (Kannada) ಚಿತ್ರರಂಗದ ಪವಿತ್ರಾ ಲೋಕೇಶ್​ (Pavitra Lokesh) ಹಾಗೂ ಮಹೇಶ್​ ಬಾಬು (Mahesh Babu ಅಣ್ಣ ನರೇಶ್​ (Naresh) ಮದುವೆ (Marriage) ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಎಲ್ಲಿ ನೋಡಿದರೂ ಇವರಿಬ್ಬರ ಮದುವೆ ವಿಚಾರದ್ದೆ ಮಾತು. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು (Tamil), ತೆಲುಗು (Telugu) , ಸಿನಿಮಾಗಳಲ್ಲೂ ತಮ್ಮ  ಪ್ರಭಾವ ಬೀರುತ್ತಿದ್ದಾರೆ. ಪವಿತ್ರಾ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ (Mysore Lokesh) ಅವರ ಮಗಳು. ಪವಿತ್ರಾ ಲೋಕೇಶ್ ತನ್ನ 16 ನೇ ವಯಸ್ಸಿನಲ್ಲಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. ಮತ್ತೊಂದು ಮದುವೆಯಾಗಿರುವ ಬಗ್ಗೆ ಇಲ್ಲಿಯವರೆಗೂ ಪವಿತ್ರ ಲೋಕೇಶ್​ ಮಾತನಾಡಿರಲಿಲ್ಲ. ಇದೀಗ  ಮೊಟ್ಟ ಮೊದಲ ಬಾರಿಗೆ ಪವಿತ್ರಾ ರಿಯಾಕ್ಷನ್ (Pavitra Reaction) ಕೊಟ್ಟಿದ್ದಾರೆ.

ಸುಚೇಂದ್ರ ಪ್ರಸಾದ್​ಗೆ ಅನ್ಯಾಯ ಮಾಡಿಲ್ಲ ಎಂದ ಪವಿತ್ರಾ !

ಪವರ್​ ಟಿವಿಗೆ ಪವಿತ್ರಾ ಲೋಕೇಶ್​​ ನರೇಶ್ ಜೊತೆಗಿನ ನಂಟಿನ ಬಗ್ಗೆ ಬಾಯ್ಬಿಟ್ಟಿದ್ದಾರೆ. ನರೇಶ್ ಬಗ್ಗೆ ಹಾಡಿ ಹೊಗಳಿದ್ದಾರೆ. ನರೇಶ್​ ಅವರಿಗೆ ಯಾವುದೇ ಕೆಟ್ಟ ಬುದ್ದಿ ಇಲ್ಲ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಪವಿತ್ರಾ ಲೋಕೇಶ್​ ಹೇಳಿದ್ದಾರೆ. ಅವರ ಮೋಸ ಮಾಡುತ್ತಿಲ್ಲ. ಸುಳ್ಳು ಹೇಳುತ್ತಿಲ್ಲ ಎಂದು ಪವಿತ್ರಾ ಲೋಕೇಶ್​ ನರೇಶ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ತಮ್ಮ ಎರಡನೇ ಪತಿ ಸುಚೇಂದ್ರ ಪ್ರಸಾದ್​ ಬಗ್ಗೆಯೂ ಮಾತನಾಡಿದ್ದಾರೆ. ಅವರಿಗೆ ನಾನು ಯಾವುದೇ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.

'ದುಡ್ಡಿಗಾಗಿ ನರೇಶ್​ ಜೊತೆ ಆತ್ಮೀಯವಾಗಿಲ್ಲ' 

ನರೇಶ್​ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಹುಟ್ಟಿದಾಗಿನಿಂದಲೂ ಗೋಲ್ಡನ್​ ಸ್ಪೂನ್​ ಇಟ್ಟುಕೊಂಡೇ  ಬಂದವರು. ನರೇಶ್​ ಒಟ್ಟು  ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್​ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್​ ಇದೀಗ 43 ವರ್ಷದ ಪವಿತ್ರಾ ಲೋಕೇಶ್​ ಅವರನ್ನು ಮದುವೆಯಾಗುತ್ತಿದ್ದಾರಂತೆ. ಹೀಗಾಗಿ ಹಣಕ್ಕಾಗಿಯೇ ಪವಿತ್ರಾ ಲೊಕೇಶ್​ ಅವರನ್ನು ವಿವಾಹವಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಪವಿತ್ರಾ ಲೋಕೇಶ್​ ನಾನು ಅವರ ಬಳಿ ಇರುವ ಹಣಕ್ಕಾಗಿ ಆತ್ಮೀಯವಾಗಿಲ್ಲ. ನರೇಶ್​ ಸ್ವಭಾವಕ್ಕೆ ಅವರ ಜೊತೆ ಇದ್ದೀನಿ ಎಂದಷ್ಟೇ ಹೇಳಿದ್ದಾರೆ. ಮದುವೆ ಬಗ್ಗೆ ಸರಿಯಾದ ಕ್ಲಾರಿಟಿ ನೀಡಿಲ್ಲ,

ಇದನ್ನೂ ಓದಿ: ಮಹೇಶ್ ಬಾಬು ಸಹೋದರನನ್ನು ಮದುವೆಯಾಗಿದ್ದರಂತೆ ಪವಿತ್ರಾ ಲೋಕೇಶ್

ನರೇಶ್​ ಒಬ್ಬ ಹೆಣ್ಣು ಬಾಕ ಎಂದು ಮೂರನೇ ಪತ್ನಿ!

ಬೆಂಗಳೂರು ಮೂಲದ ರಮ್ಯಾ ರಘುಪತಿ ಎಂಬುವವರನ್ನು ನರೇಶ್​ ಮದುವೆಯಾಗಿದ್ದರು. ಕನ್ನಡ ನ್ಯೂಸ್‌ ಚಾನೆಲ್‌ ಪವರ್‌ ಟಿವಿ ಸಂದರ್ಶನದಲ್ಲಿ ರಮ್ಯಾ ರಘುಪತಿ ತಮ್ಮ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆ ತಮ್ಮ ಪತಿ ನಟ ನರೇಶ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಅವರು ಹೇಳಿದ್ದರು. ಇವರು ನೋಡಿದರೆ, ಹೆಂಗಸರು ಅಂದರೆ ಬಾಯಿ ಬಿಡುತ್ತಿದ್ದರು. ಎಲ್ಲ ರೀತಿಯಲ್ಲೂ ನಾನು ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Naresh ಒಬ್ಬ ಹೆಣ್ಣು ಬಾಕ, ಹೆಂಗಸರು ಅಂದ್ರೆ ಬಾಯ್ಬಿಡ್ತಾರಂತೆ! 3ನೇ ಹೆಂಡ್ತಿ ರಮ್ಯಾ ಸ್ಫೋಟಕ ಹೇಳಿಕೆ

ಯಾರು ಈ ನರೇಶ್​? ಅವರ ಹಿನ್ನೆಲೆ ಏನು?

ಟಾಲಿವುಡ್​ ಸೂಪರ್​ ಸ್ಟಾರ್​ ಕೃಷ್ಣ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಶ್​ ಬಾಬು ಅವರ ತಂದೆ ಕೃಷ್ಣ ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್​. ಕೃಷ್ಣ ಅವರ ಮೊದಲನೇ ಹೆಂಡತಿ ಹೆಸರು ಇಂದಿರಾ ದೇವಿ. ಕೃಷ್ಣ ಅವರ ಎರಡನೇ ಹೆಂಡತಿ ಹೆಸರು ವಿಜಯ ನಿರ್ಮಲ. ವಿಜಯ ನಿರ್ಮಲ ಅವರ ಮಗನೇ ನರೇಶ್​. ನೀವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನರೇಶ್​ ಅವರನ್ನು ನೋಡಿದ್ದೀರಾ. ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ ನರೇಶ್​​. ನರೇಶ್​ ತಾಯಿ ಅಂದರೆ ವಿಜಯ ನಿರ್ಮಲಾ ಹಾಗೂ ಅವರ ಮೊದಲ ಕೆ.ಎಸ್​​.ಮೂರ್ತಿ ಅವರ ಮಗ ನರೇಶ್​, ಕೆ.ಎಸ್​ ಮೂರ್ತಿ ಅವರ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು.
Published by:Vasudeva M
First published: