Amazon: ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ಸಾಲು ಸಾಲು ಚಿತ್ರಗಳು, ಇಲ್ಲಿದೆ ಪುಲ್‌ ಡೀಟೈಲ್ಸ್

ಹ್ಯಾರಿ ಪಾಟರ್ ಫ್ರಾಂಚೈಸಿಯನ್ನು ಇಷ್ಟಪಡುವವರಿಗೆ ಇದು ಬರಿಯ ಚಿತ್ರವಲ್ಲ ಮಿಲಿಯಗಟ್ಟಲೆ ಜನರು ಭಾವನಾತ್ಮಕವಾಗಿ ಜೋಡಣೆಯಾಗಿರುವ ಸಮಯವಾಗಿದೆ

ಹೋಟೆಲ್ ಟ್ರಾನ್ಸಿಲ್ವೇನಿಯಾ ಚಿತ್ರದ ಪೋಸ್ಟರ್

ಹೋಟೆಲ್ ಟ್ರಾನ್ಸಿಲ್ವೇನಿಯಾ ಚಿತ್ರದ ಪೋಸ್ಟರ್

  • Share this:
ಜನವರಿ 2022 ಎಂಬುದು ಸಿನಿ ಕ್ಷೇತ್ರದಲ್ಲಿ ದೊಡ್ಡ ಮಟ್ಟಿಗಿನ (Biggest Cinematic) ಚಿತ್ರ ಬಿಡುಗಡೆಗಳಿಗೆ ಸಾಕ್ಷಿಯಾಗದೇ ಇದ್ದರೂ ನಿಮ್ಮನ್ನು ಆದಷ್ಟು ಮನರಂಜನೀಯಗೊಳಿಸಲು ಅನೇಕ ಚಿತ್ರಗಳು ಸಾಲುಗಟ್ಟಿ ನಿಂತಿವೆ ಎಂಬುದಂತೂ ಸುಳ್ಳಲ್ಲ. ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಹ್ಯಾರಿ ಪಾಟರ್ ರಿಯೂನಿಯನ್ ಸ್ಪೆಶಲ್, ರಿಟರ್ನ್ ಟು ಹಾಗ್‌ವರ್ಟ್ಸ್‌ ಸರಣಿಯೊಂದಿಗೆ ವರ್ಷವನ್ನು ಆರಂಭಿಸಿದ್ದು ಪಾಟರ್ ಅಭಿಮಾನಿಗಳಿಗೆ ಇದಕ್ಕಿಂತ ಖುಷಿಯ ವಿಚಾರ ಇನ್ನೊಂದು ಇರಲಿಕ್ಕಿಲ್ಲ. ಹಾಗಿದ್ದರೆ ಈ ವಾರಾಂತ್ಯ (Weekend) ನೀವು ಮತ್ತಷ್ಟು ಅರ್ಥಪೂರ್ಣ ಹಾಗೂ ಮನರಂಜನೀಯ(Entertaining) ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರೆ ಅದೇ ರೀತಿ ಈ ಜನವರಿ ತಿಂಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುವ ಚಿತ್ರಗಳು ಯಾವುವು ಎಂಬ ನಿರೀಕ್ಷೆ ನಿಮ್ಮದಾಗಿದ್ದರೆ ಈ ಲೇಖನದಲ್ಲಿ ವಿವರಗಳನ್ನು ನೀಡಲಾಗಿದೆ.

ಹ್ಯಾರಿ ಪಾಟರ್ 20thಆ್ಯನಿವರ್ಸರಿ: ರಿಟರ್ನ್ ಟು ಹಾಗ್‌ವರ್ಟ್ಸ್‌ – ಜನವರಿ 1:
ಎಲ್ಲಾ ಪಾಟರ್ ಅಭಿಮಾನಿಗಳಿಗೆ ಹೊಸವರ್ಷ ಅವಿಸ್ಮರಣೀಯವಾದುದು. ಹ್ಯಾರಿ ಪಾಟರ್ ಫ್ರಾಂಚೈಸಿಯನ್ನು ಇಷ್ಟಪಡುವವರಿಗೆ ಇದು ಬರಿಯ ಚಿತ್ರವಲ್ಲ ಮಿಲಿಯಗಟ್ಟಲೆ ಜನರು ಭಾವನಾತ್ಮಕವಾಗಿ ಜೋಡಣೆಯಾಗಿರುವ ಸಮಯವಾಗಿದೆ. ಡೇನಿಯಲ್ ರಾಡ್‌ಕ್ಲಿಫ್, ರೂಪರ್ಟ್ ಗ್ರಿಂಟ್ ಮತ್ತು ಎಮ್ಮಾ ವ್ಯಾಟ್ಸನ್ ನಟಿಸಿರುವ ಚಿತ್ರವು ಅವರ ಜೀವನದ ಕೆಲವೊಂದು ಘಟನೆಗಳನ್ನು ನೆನಪಿಸುವ ಮೂಲಕ ಮತ್ತೆ ಒಂದಾಗುವ ವೇದಿಕೆಯನ್ನು ಸೃಷ್ಟಿಸುತ್ತದೆ. ಇತ್ತೀಚಿನ ಚಲನಚಿತ್ರವು ಹ್ಯಾರಿ ಪಾಟರ್‌ ಹಾಗೂ ಫಿಲಾಸಫರ್ ಸ್ಟೋನ್‌ನ 20ನೇ ವರ್ಷಗಳನ್ನು ಆಚರಿಸುತ್ತದೆ.

ಇದನ್ನೂ ಓದಿ: Pushpa OTT: ಇಷ್ಟು ಬೇಗ ಒಟಿಟಿಯಲ್ಲಿ ಬರ್ತಿದೆ `ಪುಷ್ಪ’ ಸಿನಿಮಾ​! ಜ.7ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​!

ದ ಟೆಂಡರ್ ಬಾರ್  – ಜನವರಿ 7:
ಬೆನ್ ಅಫ್ಲೆಕ್, ಟೈ ಶೆರಿಡನ್, ಲಿಲಿ ರೇಬ್, ಕ್ರಿಸ್ಟೋಫರ್ ಲಾಯ್ಡ್ ತಾರಾಗಣವಿರುವ ಚಲನಚಿತ್ರವು ತಂದೆಯಿಲ್ಲದ ಹುಡುಗ ಹೇಗೆ ಜೀವನದಲ್ಲಿ ಮುಂದು ಬರುತ್ತಾನೆ ಹಾಗೂ ಚಿಕ್ಕಪ್ಪ ಚಾರ್ಲಿಯೊಂದಿಗೆ ಹೇಗೆ ಅನುಸರಣೆ ಮಾಡುತ್ತಾನೆ ಎಂಬ ಕಥಾಹಂದರವನ್ನು ಉಣಬಡಿಸುತ್ತದೆ. ಚಿತ್ರವನ್ನು ಜಾರ್ಜ್ ಕ್ಲೂನಿ ನಿರ್ದೇಶಿಸಿದ್ದಾರೆ.

ಹೋಟೆಲ್ ಟ್ರಾನ್ಸಿಲ್ವೇನಿಯಾ: ಟ್ರಾನ್ಸ್‌ಫಾರ್ಮೇನಿಯಾ  – ಜನವರಿ 14:
ಅನಿಮೇಟೆಡ್ ಚಿತ್ರವು ಹಾಸ್ಯದ ಆಗರವನ್ನೇ ಸಿನಿಪ್ರಿಯರಿಗೆ ಉಣಬಡಿಸುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡ್ರ್ಯಾಕ್ ಹಾಗೂ ಪ್ಯಾಕ್ ಮತ್ತೆ ಮರಳಿದ್ದಾರೆ. ವ್ಯಾನ್ ಹೆಲ್ಸಿಂಗ್ ಅವರ ಹೊಸ ಆವಿಷ್ಕಾರವು ಪಾತ್ರಗಳಿಗೆ ಹೊಸ ಜೀವ ತುಂಬಿದೆ. ದೈತ್ಯಾಕಾರ ರೂಪದಲ್ಲಿ ಕಂಡುಬರುವ ಪಾತ್ರಗಳು ತಮ್ಮ ಹಿಂದಿನ ಸ್ಥಿತಿಗೆ ಮರಳಲು ಒಂದು ವಿಧಾನವನ್ನು ಕಂಡುಹಿಡಿಯಲೇಬೇಕು ಎಂಬ ಕಥೆಯನ್ನು ಚಿತ್ರ ಹೊಂದಿದೆ.

ಪುತ್ತಮ್ ಪುದ್ ಕಾಲೈ ವಿಧಿಯಾಡಾ 14 ನೇ ಜನವರಿ:
ಜನವರಿ 2ನೇ ವಾರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವ ಕಥಾ ಸರಣಿಯು ಪುತ್ತಮ್ ಪುದ್ ಕಾಲೈನ ಎರಡನೇ ಕಂತಾಗಿದೆ. ಸೀರಿಸ್‌ನಲ್ಲಿ ನಾದಿಯಾ ಮೊಯ್ದು, ಜೋಜು ಜಾರ್ಜ್, ರಿತಿಕಾ, ಮಣಿಕಂದನ್ ಮಾಧವನ್ ನಟಿಸಿದ್ದಾರೆ.

ಎ ಹೀರೋ –ಜನವರಿ 21:
ಅಮೆಜಾನ್ ಪ್ರೈಮ್ ವಿಡಿಯೋದ ಜನವರಿ ಬಿಡುಗಡೆಯ ಚಿತ್ರಗಳಲ್ಲಿ ಇರಾನಿಯನ್ ಚಿತ್ರ ಎ ಹೀರೋ ಕೂಡ ಒಂದಾಗಿದೆ. ಸಾಲವನ್ನು ಪಾವತಿಸದೇ ಇರುವುದಕ್ಕಾಗಿ ಸೆರೆಮನೆ ಸೇರುವ ಕೈದಿ ರಹೀಮ್‌ನ ಸುತ್ತ ಚಿತ್ರ ಸುತ್ತುತ್ತದೆ. 2 ದಿನದ ರಜಾ ಅವಧಿಯಲ್ಲಿ ಆತ ತನ್ನ ಸಾಲಗಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಯೋಜನೆಗಳು ಸಫಲವಾಗುವುದಿಲ್ಲ.

ಏಸ್ ವಿ ಸೀ ಇಟ್  – ಜನವರಿ 21:
ಈ ತಿಂಗಳ ಮತ್ತೊಂದು ಆಸಕ್ತಿದಾಯಕ ಚಿತ್ರ ಬಿಡುಗಡೆಗೆ ಅಮೆಜಾನ್ ಪ್ರೈಮ್ ಸಾಕ್ಷಿಯಾಗಲಿದೆ. ಜ್ಯಾಕ್, ಹ್ಯಾರಿಸನ್ ಮತ್ತು ವೈಲೆಟ್, ಆಟಿಸಂ ಹೀಗೆ ಮೂವರು ರೂಮ್‌ಮೇಟ್‌ಗಳು ಜೊತೆಯಾಗಿ ಇರಲು ಹಾಗೂ ಜೀವನದಲ್ಲಿ ಏನನ್ನಾದರೂ ಸಾಧಿಸಲು ತಮ್ಮ ಯೋಜನೆಗಳನ್ನು ಯೋಜಿಸಲು ಹೇಗೆ ಜೊತೆಯಾಗುತ್ತಾರೆ ಎಂಬುದನ್ನು ಚಿತ್ರದ ಕಥೆಯು ಒಳಗೊಂಡಿದೆ.

ಇದನ್ನೂ ಓದಿ: ಓಟಿಟಿಗೆ ಬಂದ ಜೇಮ್ಸ್ ಬಾಂಡ್ ಸರಣಿಯ 24 ಸಿನಿಮಾಗಳು: ಅಮೇಜಾನ್​ ಪ್ರೈಮ್​ನಲ್ಲಿ ಮಾತ್ರ ಲಭ್ಯ..!

ಗೆಹ್ರಿಯಾನ್ – ಜನವರಿ 25:
ಕಪೂರ್ ಅಂಡ್‌ ಸನ್ಸ್ ಚಿತ್ರ ನಿರ್ಮಾಪಕರು ಗೆಹ್ರಿಯಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದು ಈ ತಿಂಗಳು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿರುವ ಹೆಚ್ಚು ಕಾತರತೆಯನ್ನು ಒಳಗೊಂಡಿರುವ ಚಿತ್ರವಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕಾರ್ವಾ, ನಾಸಿರುದ್ದೀನ್ ಶಾ ಹಾಗೂ ರಜತ್ ಕಪೂರ್ ನಟಿಸಿದ್ದಾರೆ. ಚಿತ್ರವು ಆಧುನಿಕ ಸಂಬಂಧಗಳು ಹಾಗೂ ಜಟಿಲತೆಗಳನ್ನು ಆಧರಿಸಿದೆ.
Published by:vanithasanjevani vanithasanjevani
First published: