Brahmastra Review: ಬ್ರಹ್ಮಾಸ್ತ್ರ ಬ್ಲಾಕ್​​ಬಸ್ಟರ್ ಸಿನಿಮಾ ಎಂದ ಪ್ರೇಕ್ಷಕರು! ರಣಬೀರ್, ಆಲಿಯಾ ಜೋಡಿ ಮಾಡಿದ್ಯಂತೆ ಮೋಡಿ!

ಬ್ರಹ್ಮಾಸ್ತ್ರವು ಬಹುಪಾಲು ಪ್ರೇಕ್ಷಕರನ್ನು ಮೆಚ್ಚಿಸಿದೆ. ಸಿನಿಮಾ ನೋಡಿ ಬಂದ ವಿಮರ್ಶಕರು ಅಯಾನ್ ಮುಖರ್ಜಿ ಅವರ ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ. ಆಲಿಯಾ ಭಟ್​, ರಣಬೀರ್​ ಕಪೂರ್​ ಅಭಿನಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರ

ಬ್ರಹ್ಮಾಸ್ತ್ರ ಚಿತ್ರ

  • Share this:
ಫಿಲ್ಮ್ ಮೇಕರ್ ಅಯಾನ್ ಮುಖರ್ಜಿ (Ayan Mukerji) ಡ್ರೀಮ್​ ಪ್ರಾಜೆಕ್ಟ್​ 4 ವರ್ಷಗಳ ಶ್ರಮ ‘ಬ್ರಹ್ಮಾಸ್ತ್ರ’ (Brahmastra Review) ಇಂದು ತೆರೆ ಮೇಲೆ ಅಬ್ಬರಿಸುತ್ತಿದೆ. ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಒಟ್ಟಾಗಿ ನಟಿಸಿರೋ ಬ್ರಹ್ಮಾಸ್ತ್ರ ಚಿತ್ರ ಇಂದು ದೇಶ-ವಿದೇಶಗಳಲ್ಲೂ  ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಬ್ರಹ್ಮಾಸ್ತ್ರ ಪಾರ್ಟ್ 1’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್, ಶಾರುಖ್ ಖಾನ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರತಂಡ ಮಹಾನಗರಗಳು ಹಾಗೂ ದೇವಸ್ಥಾನಗಳನ್ನು ಬಿಡದೆ ಎಲ್ಲೆಡೆ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರ ಮಾಡಿದ್ರು. ಟ್ವಿಟ್ಟರ್ ನಲ್ಲಿ ಬ್ರಹ್ಮಾಸ್ತ್ರಂ ಸಿನಿಮಾವನ್ನು ಬಹಿಷ್ಕರಿಸುವ ಟ್ರೆಂಡ್ ನಡೆಯುತ್ತಿರುವುದು ಗೊತ್ತೇ ಇದೆ. ಬ್ರಹ್ಮಾಸ್ತ್ರ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳು ಹರಿದಾಡ್ತಿದೆ. ಈ ಸನ್ನಿವೇಶಗಳ ನಡುವೆಯೇ ಪ್ರೇಕ್ಷಕರ ಮುಂದೆ ಬಂದ ಬ್ರಹ್ಮಾಸ್ತ್ರ ಪ್ರೀಮಿಯರ್ ಗಳಲ್ಲೇ ಪಾಸಿಟಿವ್ ಟಾಕ್ ಪಡೆದುಕೊಂಡಿದೆಯಂತೆ. ಅಲ್ಲೊಂದು ಇಲ್ಲೊಂದು ನೆಗೆಟಿವ್ ಟ್ರೆಂಡ್ ಇದ್ದರೂ ಈ ಸಿನಿಮಾ ನೋಡಬಹುದು ಎಂಬುದು ಕೆಲವರ ಅಭಿಪ್ರಾಯ.

ಬ್ರಹ್ಮಾಸ್ತ್ರದ Twitter ವಿಮರ್ಶೆ 

ನಿರ್ಮಾಪಕರು ಭರವಸೆ ನೀಡಿದಂತೆಯೇ, ಬ್ರಹ್ಮಾಸ್ತ್ರವು ಬಹುಪಾಲು ಪ್ರೇಕ್ಷಕರನ್ನು ಮೆಚ್ಚಿಸಿದೆ. ಸಿನಿಮಾ ನೋಡಿ ಬಂದ ವಿಮರ್ಶಕರು ಅಯಾನ್ ಮುಖರ್ಜಿ ಅವರ ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ. ನೆಕ್ಸ್ಟ್​ ಲೆವೆಲ್ ಹಿಂದಿ ಸಿನಿಮಾ ಬ್ರಹ್ಮಾಸ್ತ್ರ ಬ್ಲಾಕ್‌ಬಸ್ಟರ್ ಆಗಿದೆ. ಇದು ಅಯನ್ ಮುಖರ್ಜಿಯವರ ದೃಷ್ಟಿ, ಪರಿಕಲ್ಪನೆ ಅದನ್ನು ನಿರೂಪಣೆ ಮಾಡಿರೋ ಬಗೆ ಪ್ರೇಕ್ಷಕರ ಮನಗೆದ್ದಿದೆ. ಪ್ರತಿಯೊಂದು ದೃಶ್ಯವೂ ಮಹಾಕಾವ್ಯವಾಗಿದೆ.





ಮತ್ತೊಬ್ಬರು ಹೇಳಿದ್ದಾರೆ ಪ್ರೇಕ್ಷಕರ ಚಪ್ಪಾಳೆ ಹಾಗೂ ಶಿಳ್ಳೆ ನೋಡಿದ್ರೆ  ಚಿತ್ರವು ಬ್ಲಾಕ್ಬಸ್ಟರ್ ಎಂದು ಸ್ಪಷ್ಟವಾಗಿ ಹೇಳಬಹುದು. ಬ್ರಹ್ಮಾಸ್ತ್ರ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.



ಇನ್ನೂ ಒಂದು ಸೇರಿಸಲಾಗಿದೆ, "ಬ್ಲಾಕ್ಬಸ್ಟರ್ ಬ್ರಹ್ಮಾಸ್ತ್ರ 100% ಗ್ಯಾರಂಟಿ. ಥ್ರಿಲ್, ನಿಗೂಢತೆ ಮತ್ತು ಕ್ರಿಯೆಯ ಮಟ್ಟ. ಸರಿಸಾಟಿಯಿಲ್ಲ. ಅಯಾನ್ ಮುಖರ್ಜಿ ತನ್ನನ್ನು ತಾನೇ ಮೀರಿಸಿದ್ದಾರೆ. ಸಂಪೂರ್ಣ ಹುಚ್ಚು. ಆದ್ದರಿಂದ ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡುತ್ತದೆ.

ಇದನ್ನೂ ಓದಿ: Yashoda Teaser: ಯಶೋದಾ ಚಿತ್ರದ ಟೀಸರ್​ ಔಟ್​; ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಸಮಂತಾ





ಇದನ್ನೂ ಓದಿ: Lucky Man Review: ಹೇಗಿದೆ ಲಕ್ಕಿಮ್ಯಾನ್​? ಪರಮಾತ್ಮನ ರೂಪದಲ್ಲಿ ಬಂದು ಕಚಗುಳಿಯಿಟ್ಟ ಅಪ್ಪು!

ನೆಟಿಜನ್ ಬ್ರಹ್ಮಾಸ್ತ್ರ ಸಿನಿಮಾ ಬ್ಲಾಕ್ ಬಾಸ್ಟರ್ ಎಂದು ಕರೆದಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಚಿತ್ರ ವೀಕ್ಷಿಸಿದ್ದಾರೆ. ಅಯಾನ್ ಮುಖರ್ಜಿ ಮಾಡಿದ ಅದ್ಭುತ ಕೆಲಸ. ಚಿತ್ರವು ಮಾಸ್ ಪ್ರೇಕ್ಷಕರಿಗೆ ಅರ್ಹವಾಗಿದೆ. ಒಂದು ಪದಗಳಲ್ಲಿ ವಿಮರ್ಶೆ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: