Brahmastra Review Controversy: ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗ್ತಿದೆ ಶಾಹಿದ್ ಅವರ ಹಳೇ ಟ್ವೀಟ್

ಸಾಮಾಜಿಕ ಮಾಧ್ಯಮದಲ್ಲಿನ ಅನೇಕರು ಚಿತ್ರದ ಮೊದಲ ಶೋ ಕೊನೆಗೊಳ್ಳುವ ಮೊದಲೇ ನಕಾರಾತ್ಮಕ ವಿಮರ್ಶೆಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ವಿರುದ್ಧ ವಿಮರ್ಶಕರು ಧ್ವನಿ ಎತ್ತಿದ್ದಾರೆ. ಅದರಲ್ಲೂ ಈ ವ್ಯಾಪಾರ ವಿಶ್ಲೇಷಕರು ಮೊದಲು ವರದಿ ಮಾಡಿದಾಗ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ಪೋಸ್ಟ್ ಮಾಡಿದಾಗಲೂ ಸಹ ಚಿತ್ರದ ಬಗ್ಗೆ ಬಿಸಿಬಿಸಿ ಚರ್ಚೆಗಳು ಶುರುವಾಗುತ್ತವೆ ಅಂತ ಹೇಳಿದ್ದಾರೆ. ಇದೆಲ್ಲದರ ನಡುವೆ, ನಟ ಶಾಹಿದ್ ಕಪೂರ್ ಅವರ ಹಳೆಯ ಟ್ವಿಟ್ಟರ್ ಪೋಸ್ಟ್ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

ಬ್ರಹ್ಮಾಸ್ತ್ರ ರಿವೀವ್ ವಿವಾದ

ಬ್ರಹ್ಮಾಸ್ತ್ರ ರಿವೀವ್ ವಿವಾದ

  • Share this:
ಈಗಾಗಲೇ ನಟ ರಣಬೀರ್ ಕಪೂರ್ (Ranbir Kapoor) ಮತ್ತು ನಟಿ ಆಲಿಯಾ ಭಟ್ (Alia Bhatt) ಅವರು ಅಭಿನಯಿಸಿದ ‘ಬ್ರಹ್ಮಾಸ್ತ್ರ’ (Brahmastra) ಚಿತ್ರ ದೊಡ್ಡ ಪರದೆಗೆ ಅಪ್ಪಳಿಸಿ, ಇದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ಬರೆಯುವ ಉತ್ಸಾಹದಲ್ಲಿದೆ. ಅಯಾನ್ ಮುಖರ್ಜಿ (Ayan Mukherjee) ನಿರ್ದೇಶನದ ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿರಬಹುದು, ಆದರೆ ಸಿನೆಮಾ ಥಿಯೇಟರ್ ಗಳಂತೂ (Theater) ಹೌಸ್ ಫುಲ್ ಆಗಿವೆ. ವಿಮರ್ಶಕರ ಒಂದು ವರ್ಗವು ಚಿತ್ರ ತುಂಬಾನೇ ಚೆನ್ನಾಗಿದೆ ಅಂತ ಹೇಳುತ್ತಿದ್ದರೆ, ಇನ್ನೂ ಕೆಲವರು ಚಿತ್ರ ಅಷ್ಟೊಂದು ಚೆನ್ನಾಗಿಲ್ಲ ಅಂತ ದೂಷಿಸುತ್ತಿದ್ದಾರೆ. ಇದಕ್ಕೆ ಕ್ಲಾಸಿಕ್ ಉದಾಹರಣೆ ಎಂದರೆ ಇತ್ತೀಚೆಗೆ ನಡೆದ ಪ್ರಕರಣ. 

ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಬರೆದಿದ್ದಕ್ಕೆ ಆದ ಪರಿಣಾಮ
ಈ ಚಿತ್ರ ಪಿವಿಆರ್ ಗೆ ದೊಡ್ಡ ನಷ್ಟ ಅಂತ ಹೇಳುವ ಕೆಲವು ವರದಿಗಳು ಹೊರ ಬಂದಿದ್ದವು. ವರದಿಗಳ ಪ್ರಕಾರ, ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಬರೆದಿದ್ದಕ್ಕೆ ಪಿವಿಆರ್ ಮತ್ತು ಐನಾಕ್ಸ್ ಚಿತ್ರಮಂದಿರಗಳ ಷೇರು ಬೆಲೆಗಳು ಕುಸಿದಿವೆ. ‘ಬ್ರಹ್ಮಾಸ್ತ್ರ’ ದ ಬಗ್ಗೆ ಹಬ್ಬಿಸಿದ ಈ ನಕಾರಾತ್ಮಕ ವರದಿಗಳಿಂದಾಗಿ ಪಿವಿಆರ್ ಮತ್ತು ಐನಾಕ್ಸ್ ಗೆ 800 ಕೋಟಿ ರೂಪಾಯಿ ಕಳೆದುಕೊಂಡಿವೆ ಎಂದು ಬಿಸಿನೆಸ್ ಇನ್ಸೈಡರ್ ನ ವರದಿ ತಿಳಿಸಿತ್ತು.ನಂತರ ಪಿವಿಆರ್ ಸಿಇಒ ಕಮಲ್ ಗಿಯಾನ್ಚಂದಾನಿ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ "ಇದು ಇಂಟರ್ನೆಟ್ ಮತ್ತು ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ಸುಳ್ಳು ಮತ್ತು ನಕಾರಾತ್ಮಕ ಮಾಹಿತಿಯನ್ನು ನನಗೆ ಆಶ್ಚರ್ಯಗೊಳಿಸಿದೆ. ಇದು ತಿಳುವಳಿಕೆಯ ಕೊರತೆಯೇ ಅಥವಾ ಉದ್ದೇಶಪೂರ್ವಕವಾಗಿ ಮಾಡಿರುವುದೋ ಗೊತ್ತಿಲ್ಲ" ಅಂತ ಹೇಳಿ “ಬ್ರಹ್ಮಾಸ್ತ್ರ ಚಿತ್ರದಿಂದ ಪಿವಿಆರ್ ಈಗಾಗಲೇ 8.18 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಶಾಹಿದ್ ಕಪೂರ್ ಅವರ ಹಳೆಯ ಟ್ವಿಟ್ಟರ್ ಪೋಸ್ಟ್ ಮತ್ತೆ ವೈರಲ್
ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿನ ಅನೇಕರು ಚಿತ್ರದ ಮೊದಲ ಶೋ ಕೊನೆಗೊಳ್ಳುವ ಮೊದಲೇ ನಕಾರಾತ್ಮಕ ವಿಮರ್ಶೆಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ವಿರುದ್ಧ ವಿಮರ್ಶಕರು ಧ್ವನಿ ಎತ್ತಿದ್ದಾರೆ. ಅದರಲ್ಲೂ ಈ ವ್ಯಾಪಾರ ವಿಶ್ಲೇಷಕರು ಮೊದಲು ವರದಿ ಮಾಡಿದಾಗ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ಪೋಸ್ಟ್ ಮಾಡಿದಾಗಲೂ ಸಹ ಚಿತ್ರದ ಬಗ್ಗೆ ಬಿಸಿಬಿಸಿ ಚರ್ಚೆಗಳು ಶುರುವಾಗುತ್ತವೆ ಅಂತ ಹೇಳಿದ್ದಾರೆ. ಇದೆಲ್ಲದರ ನಡುವೆ, ನಟ ಶಾಹಿದ್ ಕಪೂರ್ ಅವರ ಹಳೆಯ ಟ್ವಿಟ್ಟರ್ ಪೋಸ್ಟ್ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ತಾಯಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ಚಿತ್ರತಂಡ ಮೌನ ವಹಿಸಿದ್ದೇಕೆ?

ಮೌಸಮ್ ಚಿತ್ರದ ಬಗ್ಗೆ ಏನು ಹೇಳಿದ್ರು ನಟ 
ಶಾಹಿದ್ ಕಪೂರ್ 26 ಸೆಪ್ಟೆಂಬರ್ 2011 ರಂದು ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ "ಮೌಸಮ್ ಚಿತ್ರವನ್ನು ಹಾಳು ಮಾಡಲು ಹೊರಟಿರುವವರು ಮೊದಲು ತಮ್ಮನ್ನು ತಾವೇ ಹಾಳು ಮಾಡಿಕೊಳ್ಳಲಿ. ಹೇಗಿದ್ರೂ ಇತ್ತೀಚೆಗೆ ಕೆಲವು ಜನರ ಆದರ್ಶಗಳು ಎಲ್ಲವೂ ತುಂಬಾನೇ ಕೆಳಮಟ್ಟಕ್ಕೆ ಕುಸಿದಿವೆ" ಅಂತ ಬರೆದಿದ್ದರು.

ಈ ಮೌಸಮ್ ಚಿತ್ರವು 2011 ರಲ್ಲಿ ಬಿಡುಗಡೆಯಾಗಿತ್ತು. ನಟ ಶಾಹಿದ್ ಜೊತೆ ನಟಿ ಸೋನಮ್ ಕಪೂರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಆಯತ್ ಎಂಬ ಕಾಶ್ಮೀರಿ ಮಹಿಳೆಯನ್ನು ಪ್ರೀತಿಸುವುದರ ಕಥೆಯನ್ನು ಹೊಂದಿತ್ತು.

ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ‘ಬ್ರಹ್ಮಾಸ್ತ್ರ’ ಸಿನೆಮಾ 
ಏತನ್ಮಧ್ಯೆ, ‘ಬ್ರಹ್ಮಾಸ್ತ್ರ’ ಚಿತ್ರವು ವಿಶ್ವದಾದ್ಯಂತದ ಸಂಗ್ರಹದಲ್ಲಿ 100 ಕೋಟಿಯ ಗಳಿಕೆಯನ್ನು ದಾಟಿ ಮತ್ತು 150 ಕೋಟಿಯ ಹತ್ತಿರ ಹೋಗಲಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ, ರಣಬೀರ್ ಕಪೂರ್ ಅಭಿನಯದ ಚಿತ್ರವು ಎರಡನೇ ದಿನ ಸುಮಾರು 41 ಕೋಟಿ ರೂಪಾಯಿಗಳನ್ನು ಗಳಿಸಿತ್ತು ಮತ್ತು ಆರಂಭಿಕ ದಿನದಂದು ಸುಮಾರು 37 ಕೋಟಿ ರುಪಾಯಿಗಳನ್ನು ಗಳಿಸಿತ್ತು.

ಇದನ್ನೂ ಓದಿ:  Mahalakshmi Ravinder: ಪ್ರೈವೆಟ್‌ ಜೆಟ್‌ನಲ್ಲಿ ಹೋಗಿದ್ದು ಹನಿಮೂನ್‌ಗಲ್ವಂತೆ, ದೇವಸ್ಥಾನಕ್ಕಂತೆ! ಅಪಾರ್ಥ ಮಾಡ್ಕೋಬೇಡಿ ಎಂದ ಹೊಸ ಜೋಡಿ

ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಬಿಡುಗಡೆಗೂ ಮೊದಲು ಬಹಿಷ್ಕಾರ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾದ ಟೀಕೆಗಳನ್ನು ಎದುರಿಸಿದೆ. ಈ ಮೊದಲು ರಣಬೀರ್ ಮತ್ತು ಆಲಿಯಾ ಅವರು ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಪ್ರವೇಶಿಸದಂತೆ ಸಹ ತಡೆಯಲಾಗಿತ್ತು.
Published by:Ashwini Prabhu
First published: