• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bhramastra: ಬಾಕ್ಸ್ ಆಫೀಸ್ ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಅನ್ನು ಬೀಟ್ ಮಾಡಿದ ಬ್ರಹ್ಮಾಸ್ತ್ರ, ಗಲ್ಲಾ ಪೆಟ್ಟಿಗೆ ಲೂಟಿ ಮಾಡಿದ ರಣಬೀರ್

Bhramastra: ಬಾಕ್ಸ್ ಆಫೀಸ್ ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಅನ್ನು ಬೀಟ್ ಮಾಡಿದ ಬ್ರಹ್ಮಾಸ್ತ್ರ, ಗಲ್ಲಾ ಪೆಟ್ಟಿಗೆ ಲೂಟಿ ಮಾಡಿದ ರಣಬೀರ್

ವಿವೇಕ್ ಅಗ್ನಿಹೋತ್ರಿ ಮತ್ತು  ಬ್ರಹ್ಮಾಸ್ತ್ರ ಸಿನೆಮಾ ಪೋಸ್ಟರ್

ವಿವೇಕ್ ಅಗ್ನಿಹೋತ್ರಿ ಮತ್ತು ಬ್ರಹ್ಮಾಸ್ತ್ರ ಸಿನೆಮಾ ಪೋಸ್ಟರ್

ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಸ್ವಂತ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಗಲ್ಲಾ ಪೆಟ್ಟಿಗೆಯ ಗಳಿಕೆಯಲ್ಲಿ ಹಿಂದಿಕ್ಕಿದ ‘ಬ್ರಹ್ಮಾಸ್ತ್ರ’ ಚಿತ್ರವು ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಬ್ರಹ್ಮಾಸ್ತ್ರ ಚಿತ್ರ ಈಗಷ್ಟೇ 200 ಕೋಟಿ ಕ್ಲಬ್ ಗೆ ಪ್ರವೇಶಿಸಿ, ಕಾಶ್ಮೀರ್ ಫೈಲ್ಸ್ ಅನ್ನು ಸೋಲಿಸಿತು. ಇದಕ್ಕೆ ನಿರ್ಮಾಪಕ ವಿವೇಕ್ ಏನು ಹೇಳಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ಈಗಂತೂ ಬಿಗ್ ಬಜೆಟ್ ಸಿನೆಮಾ ಮಾಡೋದು, ಪ್ಯಾನ್ ಇಂಡಿಯಾ (Pan India) ರೀತಿಯ ಸಿನೆಮಾವನ್ನು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ತಯಾರಿಸಿ ಬಿಡುಗಡೆ ಮಾಡುವುದು ಮತ್ತು ಕೋಟಿಗಟ್ಟಲೆ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಗಳಿಸುವುದು (Box Office Collection) ಒಂದು ಪರಿಪಾಠವೇ ಆದಂತಿದೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳ ಅಬ್ಬರವಂತೂ ಇಡೀ ಬಾಲಿವುಡ್ ನನ್ನೇ (Bollywood)  ಅಲುಗಾಡಿಸಿಟ್ಟಿದೆ. ಮೊದಲೆಲ್ಲಾ ಸಿನೆಮಾಗಳು 50 ಕೋಟಿ ಹಣ ಮಾಡಿದರೆ ಹೆಚ್ಚಿರುತ್ತಿತ್ತು, ಆದರೆ ಈಗ ಒಂದು ಬಿಗ್ ಬಜೆಟ್ ಸಿನೆಮಾದ (Big Budget Movie) ಗಳಿಕೆ ಏನಿಲ್ಲ ಅಂತ ಹೇಳಿದ್ರು 200 ರಿಂದ 300 ಕೋಟಿ ರೂಪಾಯಿಯವರೆಗೆ ಹೋಗಿ ತಲುಪಿದೆ. ಸಿನೆಮಾಗಳ ಮಧ್ಯೆ ಪೈಪೋಟಿ ತುಂಬಾನೇ ಹೆಚ್ಚಾಗಿದೆ. ಈಗ 100ಕೋಟಿ ಹಣ ಗಳಿಸುವುದು ಸಾಮಾನ್ಯ ವಿಷಯ ಅನ್ನೋ ಥರ ಆಗಿದೆ.


ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಬ್ರಹ್ಮಾಸ್ತ್ರ
ಈಗ ಬಾಲಿವುಡ್ ನಲ್ಲಿ ಒಂದು ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ ಅಂತ ಹೇಳಿದರೆ ಸಾಕು, ನೀವು ಆ ಚಿತ್ರ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರ ಅಂತ ಸರಿಯಾಗಿ ಉತ್ತರಿಸುತ್ತೀರಿ.


‘ಬ್ರಹ್ಮಾಸ್ತ್ರ’ ಚಿತ್ರದ ಇತ್ತೀಚಿನ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ ಹಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ, ಸುದ್ದಿ ಮತ್ತು ಟಿವಿ ಮಾಧ್ಯಮಗಳಲ್ಲಿ ಸುದ್ದಿಗಳು, ಲೇಖನಗಳು ಮತ್ತು ಇತರ ವರದಿಗಳು ಜೋರಾಗಿ ಹರಿದಾಡುತ್ತಿರಬೇಕಾದರೆ, ಇದನ್ನು ನೋಡಿ ಒಬ್ಬ ಬಾಲಿವುಡ್ ನಿರ್ಮಾಪಕ ಏನ್ ಹೇಳಿದ್ದಾರೆ ನೋಡಿ.


ಇದನ್ನೂ ಓದಿ: Bollywood Celebrities: ಕುಡಿದು ಫುಲ್ ಟೈಟ್ ಆದ್ರೆ ಹೀಗಿರ್ತಾರೆ ಬಾಲಿವುಡ್ ನಟಿಯರು


ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಸ್ವಂತ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಗಲ್ಲಾ ಪೆಟ್ಟಿಗೆಯ ಗಳಿಕೆಯಲ್ಲಿ ಹಿಂದಿಕ್ಕಿದ ‘ಬ್ರಹ್ಮಾಸ್ತ್ರ’ ಚಿತ್ರವು ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಬ್ರಹ್ಮಾಸ್ತ್ರ ಚಿತ್ರ ಈಗಷ್ಟೇ 200 ಕೋಟಿ ಕ್ಲಬ್ ಗೆ ಪ್ರವೇಶಿಸಿ, ಕಾಶ್ಮೀರ್ ಫೈಲ್ಸ್ ಅನ್ನು ಸೋಲಿಸಿತು.


ವಿವೇಕ್ ‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ಹೇಳಿದ್ದೇನು?
ವಿವೇಕ್ ಸೋಮವಾರ ಟ್ವೀಟ್ ಮಾಡಿ "ಅವರು ದಿ ಕಾಶ್ಮೀರ್ ಫೈಲ್ಸ್ ಅನ್ನು ಹೇಗೆ ಸೋಲಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ... ದೊಣ್ಣೆಯೊಂದಿಗೆ, ರಾಡ್ ಗಳಿಂದ, ಹಾಕಿ ಆಡುವ ಸ್ಟಿಕ್ ಗಳಿಂದ, ಎಕೆ 47, ಕಲ್ಲುಗಳಿಂದ, ಪಿಆರ್ ಗೆ ಹಣ ನೀಡಿ ಅಥವಾ ಪ್ರಭಾವಶಾಲಿಗಳ ಪರಿಚಯದೊಂದಿಗೆ? ಬಾಲಿವುಡ್ ಚಿತ್ರಗಳು ಪರಸ್ಪರ ಸ್ಪರ್ಧಿಸಲಿ. ನಮ್ಮನ್ನು ಒಬ್ಬಂಟಿಯಾಗಿ ಬಿಟ್ಟು ಬಿಡಿ. ನಾನು ಇಂತಹ ರೇಸ್ ಗಳಲ್ಲಿ ಇಲ್ಲ. ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮೂಲಗಳ ಪ್ರಕಾರ, ಬ್ರಹ್ಮಾಸ್ತ್ರ ತನ್ನ ಎರಡನೇ ವಾರಾಂತ್ಯದಲ್ಲಿ ಭಾನುವಾರ 17 ಕೋಟಿ ರೂಪಾಯಿ ಹಣ ಗಳಿಸಿದೆ. ರಣಬೀರ್ ಮತ್ತು ಆಲಿಯಾ ನಟಿಸಿರುವ ಈ ಚಿತ್ರವು ಒಟ್ಟಾರೆ ದೇಶೀಯ ಸಂಗ್ರಹದೊಂದಿಗೆ 200 ಕೋಟಿಯನ್ನು ದಾಟಿದೆ ಮತ್ತು ವಿಶ್ವದಾದ್ಯಂತ 350 ಕೋಟಿ ರೂಪಾಯಿಯನ್ನು ದಾಟಿದೆ. ಇದರರ್ಥ ಇದು ಕಾಶ್ಮೀರ್ ಫೈಲ್ಸ್ ನ ಒಟ್ಟು ಗಳಿಕೆಯಾದ 340 ಕೋಟಿಯನ್ನು ಹಿಂದಿಕ್ಕಿ ವರ್ಷದ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.


ಬ್ರಹ್ಮಾಸ್ತ್ರದ ಗಲ್ಲಾಪೆಟ್ಟಿಗೆ ವರದಿಗಳ ಬಗ್ಗೆ ಏನ್ ಹೇಳಿದ್ರು ರಣಬೀರ್
ಈ ಹಿಂದೆ ಬ್ರಹ್ಮಾಸ್ತ್ರದ ಗಲ್ಲಾಪೆಟ್ಟಿಗೆ ವರದಿಗಳ ಬಗ್ಗೆ ಮಾತನಾಡಿದ ರಣಬೀರ್ ಕಪೂರ್, ಬ್ರಹ್ಮಾಸ್ತ್ರದ ವ್ಯವಹಾರವು ತುಂಬಾ ವಿಭಿನ್ನವಾಗಿದೆ, ಏಕೆಂದರೆ, ಅದರ ಬಜೆಟ್ ನ ಎಲ್ಲಾ ಅಂಕಿ ಅಂಶಗಳು 'ತಪ್ಪು' ಎಂದು ಹೇಳಿದರು.


ಇದನ್ನೂ ಓದಿ:  Aishwarya Rai: ಹೆಂಡ್ತಿಯಿಂದ ಇದನ್ನೆಲ್ಲಾ ಕಲಿತ್ರಂತೆ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ಬಂದಿದ್ದೇ ಬಂದಿದ್ದು ಲಕ್​ ಬದಲಾಯ್ತಂತೆ!


ವರದಿಗಳ ಪ್ರಕಾರ, ಚಿತ್ರದ ಬಜೆಟ್ ಸುಮಾರು 410 ಕೋಟಿ ರೂಪಾಯಿ. "ಇತ್ತೀಚಿನ ದಿನಗಳಲ್ಲಿ, ಜನರು ಚಿತ್ರದ ಬಜೆಟ್ ಬಗ್ಗೆ ಚರ್ಚಿಸುತ್ತಿರುವ ಬಗ್ಗೆ ನಾವು ಸಾಕಷ್ಟು ಓದುತ್ತಿದ್ದೇವೆ. ಇದು ಬಜೆಟ್ ಮತ್ತು ಇದು ಬಂದ ಗಳಿಕೆ ಅಂತ ಜನರು ಹೇಳುತ್ತಿದ್ದಾರೆ. ಆದರೆ ಬ್ರಹ್ಮಾಸ್ತ್ರದ ಬಜೆಟ್ ಕೇವಲ ಒಂದು ಚಿತ್ರಕ್ಕೆ ಮಾತ್ರವಲ್ಲ, ಇಡೀ ಟ್ರೈಲಾಜಿಗಾಗಿ ಇರುತ್ತದೆ" ಎಂದು ಹೇಳಿದ್ದರು.

Published by:Ashwini Prabhu
First published: