News18 India World Cup 2019

15 ವರ್ಷಗಳ ನಂತರ ಮತ್ತೆ ಬಿ-ಟೌನ್​ ಅಂಗಳಕ್ಕೆ ಕಾಲಿಟ್ಟ ತೆಲುಗಿನ ನಾಗಾರ್ಜುನ!

news18
Updated:July 22, 2018, 11:48 AM IST
15 ವರ್ಷಗಳ ನಂತರ ಮತ್ತೆ ಬಿ-ಟೌನ್​ ಅಂಗಳಕ್ಕೆ ಕಾಲಿಟ್ಟ ತೆಲುಗಿನ ನಾಗಾರ್ಜುನ!
news18
Updated: July 22, 2018, 11:48 AM IST
ನ್ಯೂಸ್​ 18 ಕನ್ನಡ 

ದಕ್ಷಿಣ ಭಾರತದ ಸೂಪರ್​ ಸ್ಟಾರ್​ ನಾಗಾರ್ಜುನ 15 ವರ್ಷಗಳ ನಂತರ ಹಿಂದಿ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. 'ಕ್ರಿಮಿನಲ್'​, 'ಎಲ್​ಒಸಿ ಕಾರ್ಗಿಲ್'​ ಸೇರಿದಂತೆ ಹಲವಾರು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ನಾಗಾರ್ಜುನ್ ಈಗ ಮತ್ತೆ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ​

ಹೌದು ಆಲಿಯಾ ಹಾಗೂ ರಣಬೀರ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಾಗ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರು ಇತ್ತೀಚೆಗೆ ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಚಿತ್ರೀಕರಣದ ಸೆಟ್​ನಲ್ಲಿ ಪ್ರತ್ಯಕ್ಷವಾಗಿದ್ದರು.

ಚಿತ್ರೀಕರಣದ ಸೆಟ್​ಗೆ ಭೇಟಿ ನೀಡಿದಾಗ ತಮ್ಮ ಸಹಕಲಾವಿದರೊಂದಿಗೆ ತೆಗೆಸಿಕೊಂಡಿದ್ದ ಚಿತ್ರಗಳನ್ನು ಸಿನಿಮಾದ ನಿರ್ಮಾಪಕ ಕರಣ್​ ಜೋಹರ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

'ಅಯಾನ್​ ಮುಖರ್ಜಿ ನಿರ್ದೇಶನದ ನಮ್ಮ ಸಿನಿಮಾದಲ್ಲಿ ನಾಗಾರ್ಜುನ ಅಭಿನಯಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದರಲ್ಲಿ ನಾಗಾರ್ಜುನ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ' ಎಂದು ಕರಣ್​ ಬರೆದುಕೊಂಡಿದ್ದಾರೆ.

 
Loading...

 

'ಖುದಾ ಗವಾ' ಸಿನಿಮಾದ ನಂತರ ಮತ್ತೆ ಅಮಿತಾಭ್​ ಹಾಗೂ ನಾಗ್​ ಈ ಸಿನಿಮಾದ ಮೂಲಕ ತೆರೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ನಾಗಿನ್​ ಧಾರಾವಾಹಿ ಖ್ಯಾತಿಯ ಮೌನಿ ರಾಯ್​ ಈ ಸಿನಿಮಾದಲ್ಲಿದ್ದಾರೆ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...