Brahmastra: ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ಸಾಂಗ್ ರಿಲೀಸ್​, ಮೋಡಿ ಮಾಡಿದ ಆಲಿಯಾ - ರಣಬೀರ್​ ಜೋಡಿ

Alia Bhatt: ಈ ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಮತ್ತೆ ಬಾಲಿವುಡ್​ಗೆ ಈ ಚಿತ್ರದ ಮೂಲಕ ಕಳೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 

ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್

ಆಲಿಯಾ ಭಟ್​ ಹಾಗೂ ರಣಬೀರ್ ಕಪೂರ್

  • Share this:
ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಅಭಿನಯದ ಮುಂಬರುವ ಸಿನಿಮಾ ಬ್ರಹ್ಮಾಸ್ತ್ರದ (Brahmāstra) ಮೊದಲ ಹಾಡು ಕೇಸರಿಯಾ (Kesariya) ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರತಂಡ ಇಂದು ಹಾಡನ್ನು ಬಿಡುಗಡೆ ಮಾಡಿದ್ದು, ಮ್ಯೂಸಿಕ್ ವಿಡಿಯೋದಲ್ಲಿ ವಾರಣಾಸಿಯಲ್ಲಿ ಇಶಾ ಪಾತ್ರದಲ್ಲಿ ನಟಿಸುವ ಆಲಿಯಾ ಮತ್ತು ಶಿವನ ಪಾತ್ರದಲ್ಲಿ ರಣಬೀರ್ ಕಪೂರ್ ರೋಮ್ಯಾನ್ಸ್ ಮಾಡಿದ್ದು, ಜನರಿಗೆ ಬಹಳ ಇಷ್ಟವಾಗಿದೆ.

ಬಿಡುಗಡೆಯಾಯ್ತು ಕೇಸರಿಯಾ ಹಾಡು 

ಏಪ್ರಿಲ್‌ನಲ್ಲಿ ರಣಬೀರ್ ಮತ್ತು ಆಲಿಯಾ ಅವರ ಮದುವೆಗೆ ಮುಂಚಿತವಾಗಿ ಹಾಡಿನ ಟೀಸರ್ ವೀಡಿಯೊ ಬಿಡುಗಡೆಯಾದಾಗಿನಿಂದ ಅಭಿಮಾನಿಗಳು ಈ ಹಾಡು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಇನ್ನು ಈ ಹಾಡಿನಲ್ಲಿ ರಣವೀರ್​ ಹಾಗೂ ಆಲಿಯಾ ಕೆಮಿಸ್ಟ್ರಿ ಮೋಡಿ ಮಾಡಿದೆ.   ಸೋನಿ ಮ್ಯೂಸಿಕ್ ಇಂಡಿಯಾ ಭಾನುವಾರ ತನ್ನ ಯೂಟ್ಯೂಬ್ ಖಾತೆಯಲ್ಲಿ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

bollywood actors ranbir kapoor and alia bhatt movie brahmastra trailer out
ಬ್ರಹ್ಮಾಸ್ತ್ರ


ಆಲಿಯಾ, ರಣಬೀರ್ ಮತ್ತು ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಹಾಡನ್ನು ಬಿಡುಗಡೆ ಮಾಡುವ ಮೊದಲು Instagram ನಲ್ಲಿ ಲೈವ್ ಮಾಡಿದ್ದಾರೆ, ಈ ಸಮಯದಲ್ಲಿ ಅವರು ಬಿಡುಗಡೆಯ ಹಿಂದಿನ ರಾತ್ರಿಯೂ ಸಹ ಅದರಲ್ಲಿ ಕೆಲಸ ಮಾಡುತ್ತಿದ್ದರು ಎಂಬುದನ್ನ ಬಹಿರಂಗಪಡಿಸಿದ್ದರು. ಇನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಡನ್ನು ಹಂಚಿಕೊಂಡಿರುವ ಆಲಿಯಾ, "ನಮ್ಮ ಪ್ರೀತಿಯ ಧ್ವನಿ, ಈಗ ನಿಮ್ಮದಾಗಿದೆ. ಕೇಸರಿಯಾ ಈಗ ಹೊರಬಂದಿದೆ! ಎಂದು ಬರೆದುಕೊಂಡಿದ್ದಾರೆ.ಆಲಿಯಾ ಮತ್ತು ರಣಬೀರ್ ಕ್ಲಬ್‌ನಲ್ಲಿ ಒಬ್ಬರನೊಬ್ಬರು ನೋಡುವ ಮೂಲಕ ಈ ಹಾಡು ಆರಂಭವಾಗುತ್ತದೆ. ವಾರಣಾಸಿಯ ಬೀದಿಗಳು ಅವರ ಪ್ರೀತಿಗೆ ಸಾಕ್ಷಿಯಾಗುತ್ತದೆ. ಈ ಹಾಡಿಗೆ ಪ್ರೀತಮ್ ಸಂಗೀತ ನೀಡಿದ್ದು, ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಹಿಂದಿ ಆವೃತ್ತಿಯನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ. ಅಯಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬ್ರಹ್ಮಾಸ್ತ್ರದ ಈ ವಿಭಿನ್ನ ಹಾಡನ್ನು ಹೇಗೆ ತಯಾರಿಸಿದ್ದು ಎಂಬುದನ್ನ ವಿವರಿಸಿದ್ದಾರೆ.  ಲೈವ್ ಸೆಷನ್‌ನಲ್ಲಿ ರಣಬೀರ್, "ನಾನು ಹಿಂದಿ ಸಂಗೀತವನ್ನು ಅಧ್ಯಯನ ಮಾಡಿದ್ದೇನೆ ಮತ್ತು ಕೊನೆಯ ಬಾರಿಗೆ ಒಂದು ಹಾಡಿಗೆ ಇಷ್ಟೊಂದು ನಿರೀಕ್ಷೆ ಇತ್ತು ಎಂದು ನನಗೆ ನೆನಪಿಲ್ಲ. ನಮಗೆ ನಿಜವಾಗಿಯೂ ಸಂತೋಷವಾಗಿದೆ ಎಂದಿದ್ದಾರೆ.ಜನರಿಗೆ ಇಷ್ಟವಾಗಿದ್ದ ಟ್ರೈಲರ್

ಇನ್ನು ಇತ್ತೀಚೆಗಷ್ಟೇ  ಈ ಸಿನಿಮಾದ ಟ್ರೈಲರ್ ರಿಲೀಸ್​ ಆಗಿತ್ತು. ಬ್ರಹ್ಮಾಸ್ತ್ರ' ಟ್ರೈಲರ್ ಸಖತ್ ಸ್ಟ್ರಾಂಗ್​ ಇದ್ದು, ಶಿವನ ಕಥೆಯನ್ನು ಇದರಲ್ಲಿ ಹೇಳಲಾಗಿದೆ. ಅದ್ಭುತ ಮೇಕಿಂಗ್ ಟ್ರೈಲರ್​ ನಲ್ಲಿ ಎದ್ದು ಕಾಣುತ್ತಿದ್ದು, ಚಿತ್ರಮಂದಿರದಲ್ಲಿ ಚಿತ್ರದ ಸಂಪೂರ್ಣ ಝಲಕ್ ವೀಕ್ಷಿಸಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿ ವಿನೂತನ ಪ್ರಯತ್ನ ಮಾಡಿರುವ ನಿರ್ದೇಶಕ ಆಯನ್ ಮುಖರ್ಜಿ ಬ್ರಹ್ಮಾಸ್ತ್ರ ಸಿನಿಮಾವನ್ನು ಅದ್ಧೂರಿಯಾಗಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಇಸ್ಮಾರ್ಟ್​ ಜೋಡಿಯಲ್ಲಿ ಮಸ್ತ್ ಮಜಾ ಮಾಡಲಿದ್ದಾರೆ ಈ ದಂಪತಿಗಳು, ಇಲ್ಲಿದೆ ನೋಡಿ ಲಿಸ್ಟ್ಈ ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಮತ್ತೆ ಬಾಲಿವುಡ್​ಗೆ ಈ ಚಿತ್ರದ ಮೂಲಕ ಕಳೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.  ಬ್ರಹ್ಮಾಸ್ತ್ರ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.


ಇದು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಅವರ ವೃತ್ತಿ ಜೀವನದಲ್ಲಿ ಈ ಚಿತ್ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಮೂಲಕ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ್ ಸಿನಿಮಾ ದೊಡ್ಡ ಬಜೆಟ್ ನಲ್ಲಿ ಸಿದ್ಧವಾದ ಸಿನಿಮಾ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆಗೆ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಅಪ್ಪನಿಗೆ ನೀನು ಬ್ಯಾಡ್​ ಬಾಯ್​ ಎಂದ ಯಥರ್ವ್, ಫುಲ್ ವೈರಲ್ ಆಗ್ತಿದೆ ಯಶ್​ ಮಗನ ಹೊಸ ವಿಡಿಯೋ

ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿತ್ತು. 2018ರಲ್ಲಿ ಸೆಟ್ಟೇರಿದ ಬ್ರಾಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿಸಿದ್ದಾರೆ. ರಣಬೀರ್ ಕಪೂರ್ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಯಕಿಯಾಗಿ ಮಿಂಚಿರುವ ರಣಬೀರ್ ಪತ್ನಿ, ಸ್ಟಾರ್ ನಟಿ ಅಲಿಯಾ ಭಟ್ 12 ಕೋಟಿ ರೂಪಾಯಿ ಪಡೆದಿದ್ದಾರಂತೆ.
Published by:Sandhya M
First published: