• Home
  • »
  • News
  • »
  • entertainment
  • »
  • Bollywood Celebrity: ಈ ಸೆಲೆಬ್ರಿಟಿಗಳ ಮೂಲ ಹೆಸರೇನು!? ಇಲ್ಲಿದೆ ನಟ-ನಟಿಯರ ಇನ್​ಟ್ರೆಸ್ಟಿಂಗ್ ಮಾಹಿತಿ

Bollywood Celebrity: ಈ ಸೆಲೆಬ್ರಿಟಿಗಳ ಮೂಲ ಹೆಸರೇನು!? ಇಲ್ಲಿದೆ ನಟ-ನಟಿಯರ ಇನ್​ಟ್ರೆಸ್ಟಿಂಗ್ ಮಾಹಿತಿ

ಈ ಸೆಲೆಬ್ರಿಟಿಗಳ ಮೂಲ ಹೆಸರೇನು?

ಈ ಸೆಲೆಬ್ರಿಟಿಗಳ ಮೂಲ ಹೆಸರೇನು?

ಸಲ್ಮಾನ್‌ ಖಾನ್‌ ಮೂಲ ಹೆಸರು ಅಬ್ದುಲ್‌ ರಶೀದ್‌ ಸಲೀಂ ಸಲ್ಮಾನ್‌ ಖಾನ್‌, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ನಿಜವಾದ ಹೆಸರು ಅಶ್ವಿನಿ ಶೆಟ್ಟಿ, ಹೀಗೆ ಅನೇಕರು ಹೆಸರು ಬದಲಿಸಿಕೊಂಡಿದ್ದಾರೆ.

  • Share this:

ಸಾಮಾನ್ಯವಾಗಿ ಚಿತ್ರರಂಗಕ್ಕೆ (Film Industry) ಬರುವಾಗ ಬಹುತೇಕರು ಮೂಲ ಹೆಸರಿಗೆ ಬದಲಾಗಿ ಬೇರೆ ಹೆಸರುಗಳ್ನು ಇಟ್ಟುಕೊಳ್ಳುತ್ತಾರೆ. ಬರೀ ಇಲ್ಲಿ ಮಾತ್ರವಲ್ಲ, ಹಾಲಿವುಡ್‌, ಬಾಲಿವುಡ್‌ (Bollywood) ಅನೇಕ ಸೆಲೆಬ್ರಿಟಿಗಳು ಹೀಗೆ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅದೃಷ್ಟ ಪರೀಕ್ಷೆಗೆ ಇಳಿಯುವ ಹೊತ್ತಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರವೋ ಅಥವಾ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರವೋ ಸೂಚಿಸಲಾಗುವ ಅಕ್ಷರದ ಹೆಸರನ್ನು ಇಟ್ಟುಕೊಳ್ಳುವುದು ಕಾಮನ್.


ಕಿಯಾರಾ ಅಡ್ವಾಣಿ: 2014ರಲ್ಲಿ ಅವರ ಹಿಂದಿಯ ಮೊದಲ ಚಿತ್ರ ಫಗ್ಲಿ ಯಲ್ಲಿ ಅಭಿನಯಿಸುವುದಕ್ಕಿಂತ ಮೊದಲು ತಮ್ಮ ಹೆಸರನ್ನು ಕಿಯಾರಾ ಎಂದು ಬದಲಾಯಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸಲ್ಮಾನ್‌ ಖಾನ್‌ ಸಲಹೆಯ ಮೇರೆಗೆ ಅವರು ಹೀಗೆ ಹೆಸರು ಬದಲಾಯಿಸಿಕೊಂಡಿದ್ದಾರೆ.


Kiara Advanis Beauty Secret Use This Face Pack To Get Glowing Skin Like The Actress stg asp
ಕಿಯಾರಾ ಅಡ್ವಾಣಿ


ಕಿಟ್‌ ಹ್ಯಾರಿಂಗ್‌ಟನ್‌ : ಕಿಟ್‌ ಹ್ಯಾರಿಂಗ್‌ಟನ್‌ಗೆ 11 ವರ್ಷದ ವರೆಗೂ ತನ್ನ ನಿಜವಾದ ಹೆಸರು ಕ್ರಿಸ್ಟೋಫರ್‌ ಕೇಟ್ಸ್‌ಬೈ ಹ್ಯಾರಿಂಗ್‌ಟನ್‌ ಎಂಬುದಾಗಿ ಗೊತ್ತೇ ಇರಲಿಲ್ಲ. ಏಕೆಂದರೆ ಎಲ್ಲರೂ ಅವರನ್ನು ಕಿಟ್‌ ಎಂದೇ ಕರೆಯುತ್ತಿದ್ದರು.


ಸಲ್ಮಾನ್‌ ಖಾನ್:‌ ಬಾಲಿವುಡ್‌ನ ಸಲ್ಮಾನ್‌ ಖಾನ್‌ ಯಾರಿಗೆ ಗೊತ್ತಿಲ್ಲ… ಆದ್ರೆ ಚಿತ್ರರಂಗಕ್ಕೆ ಬರುವುದಕ್ಕೆ ಮೊದಲು ಅವರ ನಿಜ ನಾಮಧೇಯ ಬೇರೆಯೇ ಇತ್ತು. ಹೌದು ಸಲ್ಮಾನ್‌ ಖಾನ್‌ ಮೂಲ ಹೆಸರು ಅಬ್ದುಲ್‌ ರಶೀದ್‌ ಸಲೀಂ ಸಲ್ಮಾನ್‌ ಖಾನ್‌ ಎಂದು.


ರೀಸ್ ವಿದರ್ಸ್ಪೂನ್: ಅಮೆರಿಕನ್‌ ನಟಿ ರೀಸ್ ವಿದರ್ಸ್ಪೂನ್ ಕೂಡ ತಮ್ಮ 14 ನೇ ವಯಸ್ಸಿನಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಲೊರಾ ಜನ್ನೆ ರೀಸ್‌ ವಿದರ್ಸ್ಪೂನ್‌ ಎಂದು ಇದ್ದ ಹೆಸರನ್ನು ರೀಸ್‌ ಎಂದು ಚೇಂಜ್‌ ಮಾಡಿಕೊಂಡಿದ್ದಾರೆ. ಏಕೆಂದರೆ ಇದು ಅವರ ತಾಯಿಯ ಮೂಲ ಹೆಸರಾಗಿತ್ತು ಎನ್ನಲಾಗಿದೆ.


ತಬು: ಬಾಲಿವುಡ್‌ ನಟಿ ಟಬು ಅವರ ಮೂಲ ಹೆಸರು ತಬಸ್ಸುಮ್‌ ಫಾತಿಮಾ ಹಶ್ಮಿ ಎಂದಾಗಿತ್ತು. ಇವರು ಕೂಡ ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.


ಎಮ್ಮಾ ಸ್ಟೋನ್‌ : ಆಸ್ಕರ್‌ ವಿಜೇತ ಎಮ್ಮಾ ಸ್ಟೋನ್‌ ಅವರ ಮೂಲ ಹೆಸರು ಎಮಿಲಿ ಜೀನ್‌ ಸ್ಟೋನ್‌ ಎಂದಾಗಿತ್ತು. ಅಂತಿಮವಾಗಿ ಎಮ್ಮಾವನ್ನು ತನ್ನ ಪರದೆಯ ಹೆಸರಾಗಿ ಅಳವಡಿಸಿಕೊಳ್ಳುವ ಮೊದಲು ಈಕೆ ಆರು ತಿಂಗಳ ಕಾಲ ತನ್ನ ಹೆಸರನ್ನು ರೈಲಿ ಎಂದು ಬದಲಾಯಿಸಿಕೊಂಡಿದ್ದರು.


ಟೈಗರ್‌ ಶ್ರಾಫ್:‌ ಇವರ ಮೂಲ ಹೆಸರು ಜೈ ಹೇಮಂತ್‌ ಶ್ರಾಫ್‌ ಎಂದಾಗಿತ್ತು. ಚಿತ್ರರಂಗಕ್ಕೆ ಎಂಟ್ರಿಯಾಗುವಾಗ ತಮ್ಮ ತಂದೆ ಜಾಕಿಶ್ರಾಫ್‌ ರಂತೆಯೇ ತಾವೂ ಕೂಡ ಹೆಸರನ್ನು ಬದಲಾಯಿಸಿಕೊಂಡರು.


ಬ್ರಾಡ್‌ ಪಿಟ್:‌ ಈ ಅಮೆರಿಕದ ನಟನ ಮೂಲ ಹೆಸರು ವಿಲಿಯಮ್‌ ಬ್ರಾಡ್‌ಲಿ ಪಿಟ್‌ ಎಂದು. ಈ ನಟ ತಮ್ಮ ಮೂಲ ಹೆಸರನ್ನು ಫ್ಲರ್ಟ್‌ ಮಾಡಲು ಬಳಸುತ್ತಾರೆ ಎನ್ನಲಾಗಿದೆ.


ಮೈಲಿ ಸೈರಸ್:‌ ಅಮೆರಿಕದ ಸಿಂಗರ್‌ ಮೈಲಿ ಸೈರಸ್‌ ಮೂಲ ಹೆಸರು ಡೆಸ್ಟಿನಿ ಹೋಪ್‌ ಸೈರಸ್‌ ಎಂದು. ಇವರು 2009ರಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಕುಟುಂಬದವರು ಇವರನ್ನು ಸ್ಟೈಲಿ ಎಂದು ಕರೆಯುತ್ತಿದ್ದ ಕಾರಣ ಇವರು ಮೈಲಿ ಎಂದು ಹೆಸರನ್ನು ಬದಲಾಯಿಸಿಕೊಂಡರು.


ಶಿಲ್ಪಾ ಶೆಟ್ಟಿ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ನಿಜವಾದ ಹೆಸರು ಅಶ್ವಿನಿ ಶೆಟ್ಟಿ ಎಂದು. ಆದರೆ ಅವರ ತಾಯಿ ಜ್ಯೋತಿಷ್ಯವನ್ನು ಬಹಳ ನಂಬುತ್ತಿದ್ದರಂತೆ. ಹೀಗಾಗಿ ಹೆಚ್ಚು ಅದೃಷ್ಟ ತಂದುಕೊಡುತ್ತದೆ ಎಂಬ ಕಾರಣಕ್ಕೆ ಅವರ ಹೆಸರನ್ನು ಶಿಲ್ಪಾ ಶೆಟ್ಟಿ ಎಂದು ಬದಲಾಯಿಸಲಾಯ್ತು.
ಜಾಕ್ವಿನ್‌ ಫೀನಿಕ್ಸ್‌: ಪ್ರತಿಷ್ಠಿತ ಆಸ್ಕರ್‌ ವಿಜೇತ ಜಾಕ್ವಿನ್‌ ಫೀನಿಕ್ಸ್‌ ಅವರು ತಮ್ಮ ಪಾಲಕರಿಗಾಗಿ ಮೂಲ ಹೆಸರನ್ನು ಬದಲಾಯಿಸಿಕೊಂಡರು. ಇವರ ಕುಟುಂಬವು 1979 ರಲ್ಲಿ ತಮ್ಮ ಕೊನೆಯ ಹೆಸರನ್ನು ಬಿಟ್ಟುಬಿಟ್ಟಿತು ಮತ್ತು ಫೀನಿಕ್ಸ್ ಕುಟುಂಬ ಎಂದು ಹೇಳಿಕೊಂಡರು.


ಅಕ್ಷಯ್‌ ಕುಮಾರ್‌ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮೂಲ ಹೆಸರು ರಾಜೀವ್‌ ಹರಿ ಓಂ ಭಾಟಿಯಾ ಎಂದು. ನಂತರದಲ್ಲಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.


ಲೇಡಿ ಗಾಗಾ : ಲೇಡಿ ಗಾಗಾ ಎಂದೇ ಫೇಮನಸ್‌ ಆಗಿರುವ ಅಮೆರಿಕದ ಸಿಂಗರ್‌ ಮೂಲ ಹೆಸರು ಸ್ಟೆಫನಿ ಜಾನ್ನೆ ಆಂಜೆಲಿನಾ ಜೆರ್ಮಾನೊಟ್ಟಾ. ಇವರು ತಮ್ಮ ಸ್ಟೇಜ್‌ ನೇಮ್‌ ಆಗಿ ಲೇಡಿ ಗಾಗಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.


ಪ್ರಭಾಸ್:‌ ಟಾಲಿವುಡ್‌ ನಟ ಪ್ರಭಾಸ್‌ ಅವರ ಮೂಲ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್‌ ರಾಜು ಉಪ್ಪಲಪತಿ ಎಂದು.


ಗಿಗಿ ಹ್ಯಾಡಿಡ್:‌ ಈ ಸೂಪರ್‌ಮಾಡೆಲ್‌ ಮೂಲ ಹೆಸರು ಗಿಗಿ ಹ್ಯಾಡಿಡ್‌ ಅಲ್ಲ. ಇದು ಅವರ ಪೆಟ್‌ ನೇಮ್‌. ಅವರ ನಿಜವಾದ ಹೆಸರು ಜೆಲೆನಾ ಹ್ಯಾಡಿಡ್‌ ಎಂದು.


ಮೇಘನ್‌ ಮಾರ್ಕಲ್:‌ ಅಮೆರಿಕದ ನಟಿ ಮೇಘನ್‌ ಮಾರ್ಕೆಲ್‌ ಅವರ ಮೂಲ ಹೆಸರು ಬೇರೆಯಾಗಿದ್ದರೂ ಮಾರ್ಕೆಲ್‌ ಅನ್ನೋದು ಅವರ ಹಳೆಯ ಹೆಸರಿನ ಜೊತೆಗೂ ಇತ್ತು.


ಲಾನಾ ಡೆಲ್‌ ರೇ: ಸಿಂಗರ್ ಆಗಿರುವ ಲಾನಾ ಡೆಲ್‌ರೇ ಮೂಲ ಹೆಸರು ಎಲಿಜಬೆತ್‌ ಗ್ರಾಂಟ್‌ ಎಂದು. ಆದರೆ ತಮ್ಮ ವೃತ್ತಿಯಲ್ಲಿ ಯಶಸ್ಸು ಕಾಣದಿದ್ದಾಗ ಅವರು ತಮ್ಮ ಹೆಸರನ್ನು ಲಾನಾ ಎಂದು ಬದಲಾಯಿಸಿಕೊಂಡರು.
ಕಾರ್ಡಿ ಬಿ: ಪ್ರಸಿದ್ಧ ರ್‍ಯಾಪರ್‌ ಆಗಿರುವ ಕಾರ್ಡಿ ಬಿ ಅವರ ಮೂಲ ಹೆಸರು ಬೆಲ್ಕಾಲಿಸ್‌ ಮಾರ್ಲೆನಿಸ್‌ ಅಲ್ಮಾಂಜೆರ್‌ ಎಂದು. ನಂತರದಲ್ಲಿ ಇವರೂ ಕೂಡ ತಮ್ಮ ಹೆಸರನ್ನು ಕಾರ್ಡಿ ಎಂದು ಬದಲಾಯಿಸಿಕೊಂಡರು.


ಚಂಕಿ ಪಾಂಡೆ: ಸುಯುಶ್‌ ಶರತ್‌ ಚಂದ್ರಕಾಂತ್‌ ದೇಶಪಾಂಡೆ ಎಂದಿದ್ದ ಮೂಲ ಹೆಸರನ್ನು ಇವರು ಶಾರ್ಟ್‌ ಆಂಡ್‌ ಸ್ವೀಟ್‌ ಆಗಿ ಚಂಕಿ ಪಾಂಡೆ ಎಂದು ಬದಲಾಯಿಸಿಕೊಂಡರು.

Published by:ಪಾವನ ಎಚ್ ಎಸ್
First published: