RRR: ಕರ್ನಾಟಕದಲ್ಲಿ ಬಾಯ್​ಕಾಟ್​ `ಆರ್​ಆರ್​ಆರ್’ ಅಭಿಯಾನ ಶುರು! ಶಿವಣ್ಣನಿಗೆ ಕೊಟ್ಟ ಮಾತು ಮುರಿದ್ರಾ ರಾಜಮೌಳಿ?

ಈಗಾಗಲೇ ಬಿಡುಗಡೆ ಆಗಿರುವ ಟೀಸರ್​(Teaser) ಮತ್ತು ಪೋಸ್ಟರ್​ಗಳು(poster) ಭಾರಿ ಹೈಪ್​(Hype) ಸೃಷ್ಟಿ ಮಾಡಿವೆ. ಈ ಸಿನಿಮಾನ ನೋಡಲು ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ಎಷ್ಟು ದುಡ್ಡು ಆದರೂ ಟಿಕೆಟ್​ ಖರೀದಿಸುತ್ತಿದ್ದಾರೆ. ಆದರೆ, ಆರ್​ಆರ್​ಆರ್​ ಸಿನಿಮಾ ವಿರುದ್ಧ ಕರ್ನಾಟಕದಲ್ಲಿ ಬಾಯ್​ಕಾಟ್​ ಆರ್​ಆರ್​ಆರ್(BoycottRRR)​ ಅಭಿಯಾನ ಶುರುವಾಗಿದೆ.

ಜ್ಯೂ.ಎನ್​ಟಿಆರ್​​, ರಾಮ್​ಚರಣ್​

ಜ್ಯೂ.ಎನ್​ಟಿಆರ್​​, ರಾಮ್​ಚರಣ್​

  • Share this:
RRR ಸಿನಿಮಾದ ಅಧಿಕೃತ ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇದೆ. ಮಾರ್ಚ್ 25(March 25th) ರಂದು ಸಿನಿಮಾ ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಾಣಲಿದೆ. ಕರ್ನಾಟಕ(Karnataka), ಆಂಧ್ರ(Andhra), ತೆಲಂಗಾಣ(Telangana)ದ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾದ ಮೊದಲ ದಿನದ ಟಿಕೆಟ್‌ಗಳು ಬಹುತೇಕ ಖಾಲಿಯಾಗಿವೆ.ರಾಜಮೌಳಿ (Rajamouli) ನಿರ್ದೇಶನದ ಈ ಚಿತ್ರದಲ್ಲಿ ರಾಮ್​ ಚರಣ್ (Ram Charan)​ ಮತ್ತು ಜ್ಯೂ. ಎನ್​ಟಿಆರ್(Jr.NTR)​  ಅಭಿನಯಿಸಿದ್ದಾರೆ. ಈ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.ನಾಯಕಿಯಾಗಿ ಆಲಿಯಾ ಭಟ್(Alia Bhat)​ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​(Teaser) ಮತ್ತು ಪೋಸ್ಟರ್​ಗಳು(poster) ಭಾರಿ ಹೈಪ್​(Hype) ಸೃಷ್ಟಿ ಮಾಡಿವೆ. ಈ ಸಿನಿಮಾನ ನೋಡಲು ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ಎಷ್ಟು ದುಡ್ಡು ಆದರೂ ಟಿಕೆಟ್​ ಖರೀದಿಸುತ್ತಿದ್ದಾರೆ. ಆದರೆ, ಆರ್​ಆರ್​ಆರ್​ ಸಿನಿಮಾ ವಿರುದ್ಧ ಕರ್ನಾಟಕದಲ್ಲಿ ಬಾಯ್​ಕಾಟ್​ ಆರ್​ಆರ್​ಆರ್(BoycottRRR)​ ಅಭಿಯಾನ ಶುರುವಾಗಿದೆ.

ಕರ್ನಾಟಕದಲ್ಲಿ ಬಾಯ್​ಕಾಟ್​ ‘ಆರ್​ಆರ್​ಆರ್​’ ಅಭಿಯಾನ!

RRR ಸಿನಿಮಾ ಭಾರತದ ಈವರೆಗೆ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದ್ದು, ಹಾಕಿರುವ ದುಬಾರಿ ಬಂಡವಾಳಕ್ಕೆ ತಕ್ಕಂತೆ ಸಿನಿಮಾದ ಟಿಕೆಟ್ ದರವನ್ನು ದುಬಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ದರ ಆರ್​ಆರ್​ಆರ್​ ಸಿನಿಮಾಗಿದೆ. ಅದೂ ಅಲ್ಲದೇ ಕರ್ನಾಟಕದಲ್ಲಿ ಕನ್ನಡ ವರ್ಷನ್​ ಹೆಚ್ಚಾಗಿ ರಿಲೀಸ್ ಮಾಡುವುದಗಿ ಚಿತ್ರತಂಡ ಹೇಳಿತ್ತು. ಆದರೆ, ಈಗ ಸಿನಿಮಾ ರಿಲೀಸ್​ಗೆ ಎರಡೇ ದಿನ ಬಾಕಿ ಇದ್ದರೂ ಇನ್ನೂ ಕನ್ನಡ ವರ್ಷನ್​ ಸಿನಿಮಾದ ಮುಂಗಡ ಟಿಕೆಟ್​​ ಬುಕ್ಕಿಂಗ್​ ಓಪನ್​ ಆಗಿಲ್ಲ. ಹೀಗಾಗಿ ‘ಆರ್​ಆರ್​ಆರ್​’ ಸಿನಿಮಾ ಚಿತ್ರತಂಡದ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.


ಒಂದೊಂದು ರಾಜ್ಯದಲ್ಲಿ ಒಂದೊಂದು ಬೆಲೆ!

ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಇನ್ನೂ ಹಲವು ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯಲ್ಲಿ ಟಿಕೆಟ್ ದರಗಳಿವೆ. ಮೊದಲ ದಿನದ ಶೋಗೆ ಬಹುತೇಕ ಚಿತ್ರಮಂದಿರಗಳಲ್ಲಿ 400-500 ರುಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 600 ದಾಟಿದೆ.

ಇದನ್ನೂ ಓದಿ: ಇದೇನ್​ ಗುರೂ ಒಂದ್​ ಟಿಕೆಟ್​ ರೇಟ್​ ಇಷ್ಟೊಂದಾ? ಮನೆ ಮಂದಿಯೆಲ್ಲ ಹೊಟ್ಟೆ ತುಂಬಾ ಊಟ ಮಾಡ್ಬಬಹುದು ಈ ದುಡ್ಡಲ್ಲಿ!

ಚಿತ್ರಪ್ರೇಮಿಗಳ ಜೇಬಿಗೆ ‘ಆರ್​ಆರ್​ಆರ್’ ಕತ್ತರಿ!

ಮಾರ್ಚ್ 25ರಂದು ‘ಆರ್​ಆರ್​ಆರ್​’ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಮುಂಗಡ ಟಿಕೆಟ್​ ಬುಕ್ಕಿಂಗ್​ ಕೂಡ ಓಪನ್​ ಆಗಿದೆ. ಟಿಕೆಟ್​ ಬುಕ್​ ಮಾಡೋಣ ಅಂತ ಅಂದುಕೊಂಡವರಿಗೆ ಬಿಗ್​ ಶಾಕ್​ ಎದುರಾಗಿದೆ. ‘ಆರ್​​ಆರ್​​ಆರ್​’ ಸಿನಿಮಾದ ಒಂದು ಟಿಕೆಟ್​ಬೆಲೆ ಕಂಡು ಸಿನಿರಸಿಕರು ಸುಸ್ತಾಗಿದ್ದಾರೆ. ಕಾರಣ ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲೇ ಒಂದು ಟಿಕೆಟ್​ ಬೆಲೆ 500 ಹಾಗೂ 400 ರೂಪಾಯಿ ಇದೆ. ಸಿಂಗಲ್​ ಸ್ಕ್ರೀನ್​​ಗಳಿಗೆ ಇಷ್ಟು ಬೆಲೆಯಿದ್ದರೆ, ಇನ್ನೂ ಮಾಲ್​ಗಳಲ್ಲಿ ಒಂದು ಟಿಕೆಟ್​ ಬೆಲೆ ಏನಿಲ್ಲ ಅಂದರು ಕನಿಷ್ಠ 800 ರಿಂದ ಸಾವಿರ ರೂಪಾಯಿ ಇರಲಿದೆ ಅಂತಿದ್ದಾರೆ ಸಿನಿ ಪಂಡಿತು.

ಇದನ್ನೂ ಓದಿ: Rocking Star Yash ಫ್ಯಾನ್ಸ್‌ಗೆ KGF 2 ಚಿತ್ರತಂಡದಿಂದ ಗುಡ್ ನ್ಯೂಸ್! ಭರ್ಜರಿ ಆಫರ್ ಪಡೆಯೋಕೆ ಹೀಗೆ ಮಾಡಿ

ಟಿಕೆಟ್​ ದರ ಇಳಿಸುವಂತೆ ಸರ್ಕಾರಕ್ಕೆ ಮನವಿ!

ನಮ್ಮ ವಿತರಕರು ಪರಭಾಷ ಚಿತ್ರಗಳಿಗೆ ಮನಸೋಇಚ್ಛೆ ಹಣ ಕೊಟ್ಟು ತರುತ್ತಾರೆ. ಕರ್ನಾಟಕ  ಪರಭಾಷ ಚಿತ್ರಗಳಿಗೆ ಗೋಮಾಳವಾಗಿ ಬಿಟ್ಟಿದೆ. ಎರಡೇ ದಿನಗಳಲ್ಲಿ ಬಂಡವಾಳ ರಿಕವರಿ ಮಾಡೊ ಉದ್ದೇಶದಿಂದ ಹಗಲು ದರೋಡೆ ಮಾಡ್ತಾರೆ. ಪರಭಾಷ ಚಿತ್ರಗಳು ಕನ್ನಡ ಚಿತ್ರರಂಗದ ಮೇಲೆ ದಬ್ಬಾಳಿಕೆ ಮಾಡ್ತಾರೆ. ಸರ್ಕಾರ ಈ ಕೂಡಲೆ ಟಿಕೆಟ್ ದರಗಳ ಹೆಚ್ಚಳಕ್ಕೆ ಬ್ರೇಕ್  ಹಾಕಬೇಕು 150,200, ಟಿಕೆಟ್ ದರ ನಿಗದಿ ಮಾಡಿ ಆದೇಶ ಹೊರಡಿಸ ಬೇಕು ಎಂದು  ಸಾರಾ ಗೋವಿಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
Published by:Vasudeva M
First published: