ವಿಮಾರ್ಶಾತ್ಮಕ ಸಿನಿಮಾಗಳ ಮೂಲಕ ಮೆಚ್ಚುಗೆ ಪಡೆದ ನಟಿ ರಾಧಿಕಾ ಅಪ್ಟೆ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾರ್ಚೆಡ್ ಸಿನಿಮಾ ಕುರಿತಾಗಿ ಈಗ ಮತ್ತೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ತನ್ನ ನಗ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇದರಿಂದ ಸಾಕಷ್ಟು ಮುಜುಗರಕ್ಕೆ ಒಳಗಾದ ನಾನು ನಾಲ್ಕು ದಿನ ಮನೆ ಬಿಟ್ಟು ಹೊರ ಬಂದಿರಲಿಲ್ಲ ಎಂದು ಹೇಳಿದ್ದರು. ಈಗ ಇದೆ 'ಪಾರ್ಚೆಡ್' ಸಿನಿಮಾದಲ್ಲಿನ ಅವರ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ. 'ಪಾರ್ಚೆಡ್' ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಅಪ್ಟೆ ಹಸಿ ಬಿಸಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಚಿತ್ರದ ಪೋಸ್ಟರ್ ಒಂದರಲ್ಲಿ ನಟಿ ರಾಧಿಕಾ ಅಪ್ಟೆ ನಟ ಅದಿಲ್ ಹುಸೇನ್ ನಡುವಿನ ಪೋಟೋ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದು, ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದೆ. ಇದೇ ಕಾರಣಕ್ಕೆ ಟ್ವಿಟರ್ನಲ್ಲಿ ಈಗ Boycott Radhika Apte ಟ್ರೆಂಡ್ ಆಗಿದೆ.
ಅಷ್ಟೇ ಅಲ್ಲದೇ, ಈ ಮೂಲಕ ಬಾಲಿವುಡ್ ಸೆಲೆಬ್ರಿಟಿಗಳ ಯಾವ ರೀತಿ ಸಂಪ್ರದಾಯ ಹೊಂದಿದ್ದಾರೆ. ಇವು ನಮ್ಮ ಸಂಸ್ಕೃತಿ ವಿರುದ್ಧವಾಗಿದೆ. ರಾಧಿಕಾ ಚಿತ್ರ ತುಂಬಾ ಕೆಟ್ಟಾದಾಗಿದೆ. ಚಿತ್ರದ ಫೋಟೋ ವಿಡಿಯೋ ಹಾಕಲು ಸಾಧ್ಯವಿಲ್ಲ. ಅವರು ದೇಶದಲ್ಲಿ ಅಶ್ಲೀಲತೆ ಹರಡುತ್ತಿದ್ದಾರೆ, ಅವರನ್ನು ಬಹಿಷ್ಕರಿಸಬೇಕು. ಭಾರತದ ಪ್ರಾಚೀನ ಧರ್ಮ ಸಂಪ್ರದಾಯಗಳನ್ನು ಬಾಲಿವುಡ್ ಗುರಿಯಾಗಿಸಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.
2015ರಲ್ಲಿ ಟೊರೊಂಟೊ ಫೆಸ್ಟಿವಲ್ನಲ್ಲಿ ಈ ಪಾರ್ಚೆಡ್ ಚಿತ್ರ ಪ್ರದರ್ಶನಗೊಂಡು 2016ರಲ್ಲಿ ಬಿಡುಗಡೆಯಾಗಿತ್ತು.
ಇನ್ನು ತಮ್ಮ ಈ ಪಾತ್ರದ ಕುರಿತು ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ರಾಧಿಕಾ ಅದು ಕೇವಲ ಬೇರ್ ಚರ್ಮದ ಸೆಲ್ಫಿ. ನನಗೆ ನಿಜವಾಗಿಯೂ ಈ ರೀತಿಯ ಪಾತ್ರ ಮಾಡಲು ಇಷ್ಟ. ಬಾಲಿವುಡ್ನಲ್ಲಿ ಇರುವಾಗ ನಿಮ್ಮ ದೇಹದೊಂದಿಗೆ ಹೇಗೆ ಇರಬೇಕು ಎಂದು ನಿರಂತವಾಗಿ ಹೇಳಲಾಗುತ್ತದೆ. ಅದನ್ನು ನಾನೂ ಯಾವಾಗಲೀ ನಿರ್ವಹಿಸುತ್ತೇನೆ. ನನ್ನ ಬೆತ್ತಲೆ ವಿಡಿಯೋ ಕ್ಲಿಪ್ಗಳು ಲೀಪ್ ಆದಾಗ ಸಾಕಷ್ಟು ಟ್ರೋಲ್ ಆಗಿದ್ದೆ. ಇದರಿಂದ ನಾಲ್ಕು ದಿನ ನಾನು ಹೊರ ಬರಲು ಸಾಧ್ಯವಾಗಲಿಲ್ಲ. ನನ್ನ ಕಾರು ಚಾಲಕ, ಬಾಡಿಗರ್ಡ್ ನನ್ನ ಸ್ಟೈಲಿಸ್ಟ್ಗಳಿ ವಿಡಿಯೋ ನೋಡಿ ನನ್ನನ್ನು ಗುರುತಿಸುತ್ತಿದ್ದರು
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ