ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ Boycott Shah Rukh Khan: ಕಾರಣವೇನು ಗೊತ್ತಾ..?

ಟ್ವಿಟರ್​ನಲ್ಲಿ ಬಾಯ್ಕಾಟ್​ ಶಾರುಖ್​ ಖಾನ್​ (Boycott Shah Rukh Khan) ಹ್ಯಾಶ್ ​ಟ್ಯಾಗ್​ ಟ್ರೆಂಡ್​ ಆಗಿದೆ. ಅಷ್ಟಕ್ಕೂ ಇದ್ದಕ್ಕಿದ್ದಂತೆ ಶಾರುಖ್​ ಅವರು ಈ ರೀತಿ ಟ್ರೆಂಡ್​ ಆಗಲು ಕಾರಣವೇನು ಗೊತ್ತಾ..?

ನಟ ಶಾರುಖ್ ಖಾನ್​

ನಟ ಶಾರುಖ್ ಖಾನ್​

  • Share this:
ಬಾಲಿವುಡ್​ನ ಕಿಂಗ್ ಖಾನ್ ಶಾರುಖ್ ಖಾನ್​ (Shah Rukh Khan) ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಶಾರುಖ್ ಖಾನ್​ ತಮ್ಮ ಹೊಸ ಸಿನಿಮಾಗಳಿಂದಾಗಿ ಸದ್ದು ಮಾಡುತ್ತಿದ್ದಾರೆ. ಝೀರೋ ಸಿನಿಮಾದ ನಂತರ ಶಾರುಖ್ ಯಾವ ಸಿನಿಮಾಗಳನ್ನೂ ಅನೌನ್ಸ್​ ಮಾಡಿರಲಿಲ್ಲ. ಆದರೆ, ಇತ್ತೀಚೆಗೆ ಅವರು ತಮ್ಮ ಬಹುನಿರೀಕ್ಷಿತ ಸಿನಿಮಾ ಪಠಾಣ್​ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಸಾಕಷಟು ಅಪ್ಡೇಟ್​ಗಳು ಲಭ್ಯವಾಗುತ್ತಿವೆ. ಇದರಿಂದಾಗಿ ಟ್ವಿಟರ್​ನಲ್ಲಿ ಆಗಾಗ ಟ್ರೆಂಡ್​ ಆಗಿದ್ದೂ ಇದೆ. ಹೀಗಿರುವಾಗಲೇ ಟ್ವಿಟರ್​ನಲ್ಲಿ ಬಾಯ್ಕಾಟ್​ ಶಾರುಖ್​ ಖಾನ್​ (Boycott Shah Rukh Khan) ಹ್ಯಾಶ್ ​ಟ್ಯಾಗ್​ ಟ್ರೆಂಡ್​ ಆಗಿದೆ. ಅಷ್ಟಕ್ಕೂ ಇದ್ದಕ್ಕಿದ್ದಂತೆ ಶಾರುಖ್​ ಅವರು ಈ ರೀತಿ ಟ್ರೆಂಡ್​ ಆಗಲು ಕಾರಣವೇನು ಗೊತ್ತಾ..?

ಕೆಲ ನೆಟ್ಟಿಗರು ಬಾಯ್ಕಾಟ್​ ಶಾರುಖ್ ಖಾನ್​ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಕೊಟ್ಟಿದ್ದ ಹೇಳಿಕೊಂದು ಈಗ ವೈರಲ್ ಆಗುತ್ತಿದೆ. ಅದರಿಂದಲೇ ಹೀಗೆಲ್ಲ ಆಗುತ್ತಿದೆ.

Shah Rukh Khan is trending in Twitter, Bollywood, imran khan, Shah Rukh Khan, trending, twitter, Twitter Trending, ಶಾರುಖ್ ಖಾನ್, ಟ್ವಿಟರ್, ಟ್ರೆಂಡಿಂಗ್, ಬಾಯ್ಕಾಟ್ ಶಾರುಖ್, ವಿ ಲವ್ ಶಾರುಖ್, ಎಸ್​ಆರ್​ಕೆ ಪ್ರೈಡ್ ಆಫ್ ಇಂಡಿಯಾ, ಇಮ್ರಾನ್ ಖಾನ್, ನರೇಂದ್ರ ಮೋದಿ, Imran Khan, Pathan, Shah Rukh Khan, Bollywood, Hash Tag, Twitter, Trending, SRK Pride Of India, We Love Shah Rukh, Boycott Shah Rukh Khan, Boycott Shah Rukh Khan trends on Twitter here is the reason ae
ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ ಬಾಯ್ಕಾಟ್​ ಶಾರುಖ್ ಖಾನ್​ ಹಾಗೂ ಎಸ್​ಆರ್​ಕೆ ವಿ ಲವ್​ ಯೂ


ಈ ಹಿಂದೆ ಶಾರುಖ್ ಖಾನ್ ಅವರು ಪಾಕಿಸ್ತಾನದ ಕ್ರಿಕೆಟಿಗರು ವಿರ್ಶವದಲ್ಲೇ ಶ್ರೇಷ್ಠ ಆಟಗಾರರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ವೈರಲ್​ ಆಗುತ್ತಿದೆ. ಇದರಿಂದಾಗಿ ಕೆಲ ನೆಟ್ಟಿಗರು ಶಾರುಖ್ ಖಾನ್​ ಅವರನ್ನು ಬಾಯ್ಕಾಟ್​ ಮಾಡುವಂತೆ ಹ್ಯಾಶ್​ ಟ್ಯಾಗ್​ ಹಾಕಿ ಟ್ವಿಟರ್​ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದರ ಜೊತೆಗೆ ಶಾರುಖ್ ಖಾನ್​ ಹಾಗೂ ಇಮ್ರಾನ್ ಖಾನ್​ ಅವರು ಇರುವ ಫೋಟೋಗಳೂ ಸಹ ಹರಿದಾಡುತ್ತಿವೆ.

ಇದನ್ನೂ ಓದಿ: ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿದ್ರಾ Samantha Akkineni: ನಟಿಯ ಮದುವೆ ದಿನವನ್ನು ನೆನಪಿಸುತ್ತೆ ಈ ಚಿತ್ರಗಳು..!

ಸಾಕಷ್ಟು ಮಂದಿ ಈಗ ಶಾರುಖ್ ಖಾನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಟ್ವೀಟ್​ ಮಾಡುತ್ತಿದ್ದಾರೆ. ಶಾರುಖ್ ಖಾನ್​ ಅವರು ಐದು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಗಳು ಈಗ ವೈರಲ್ ಆಗುತ್ತಿದ್ದು, ಇದರ ಜೊತೆಗೆ ಪಠಾಣ್​ ಸಿನಿಮಾ ಕುರಿತಾದ ವಿಷಯಗಳು ಸಹ ಚರ್ಚೆಯಾಗುತ್ತಿದೆ.

ಇನ್ನು ಟ್ವಿಟರ್​ನಲ್ಲಿ #BoycottShahRukhKhan ಟ್ರೆಂಡ್ ಆಗುತ್ತಿದ್ದಂತೆಯೇ ಶಾರುಖ್ ಖಾನ್ ಅಭಿಮಾನಿಗಳು ನಟನ ಬೆಂಬಲಕ್ಕೆ ನಿಂತಿದ್ದಾರೆ. ಅವರು ಮತ್ತೊಂದು ಕಡೆ #WeLoveShahRukhKhan #SRKPrideOfIndia ಅಂತ ಟ್ರೆಂಡ್ ಮಾಡುತ್ತಿದ್ದಾರೆ. ದೇಶದ ಹೆಮ್ಮೆಯ ನಟ ಶಾರುಖ್​, ದಿಗ್ಗಜ ನಟರೆಲ್ಲ ಶಾರುಖ್ ಅವರ ಅಭಿಮಾನಿಗಳು, ಬಡವರು ಸಂಕಷ್ಟದಲ್ಲಿದ್ದರೆ ಶಾರುಖ್ ಸಹಾಯಕ್ಕೆ ಬರುತ್ತಾರೆ. ಲಾಕ್​ಡೌನ್​ ವೇಳೆ ಸಹ ಸಹಾಯ ಹಸ್ತ ಚಾಚಿದ್ದಾರೆ ಎಂದು ಅಭಿಮಾನಿಗಳು ನೆಚ್ಚಿನ ನಟನ ಪರವಾಗಿ ಟ್ವೀಟ್​ ಮಾಡುತ್ತಿದ್ದಾರೆ. ಈ ಹಿಂದೆಯೂ ಸಹ ಶಾರುಖ್​ ಖಾನ್​ ಅವರು ಟ್ರೋಲ್ ಆದಾಗ ಹಾಗೂ ಟ್ವಿಟರ್​ನಲ್ಲಿ ನೆಗೆಟಿವ್ ಆಗಿ ಟ್ರೆಂಡ್ ಆದಾಗಲೂ ಅವರ ಬೆಂಬಲಕ್ಕೆ ನಿಂತಿದ್ದರು.

ಇದನ್ನೂ ಓದಿ: ತಲೆ ಮೇಲೆ ಕೈ ಹೊತ್ತು ಕುಳಿತ ಕಣ್ಸನ್ನೆ ಹುಡುಗಿ Priya Prakash Varrier

ಶಾರುಖ್ ಹುಟ್ಟುಹಬ್ಬವು ನವೆಂಬರ್ 2ರಂದು ಇದ್ದು, ಇವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ 'ಎಸ್ಆರ್‌ಕೆ ಹುಟ್ಟುಹಬ್ಬಕ್ಕೆ ಇನ್ನೂ 50 ದಿನಗಳು' ಎಂಬ ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಇದರ ಜೊತೆಗೆ ಶಾರುಖ್​ ಖಾನ್ ಅವರ ಮತ್ತೊಂದು ಹೊಸ ಸಿನಿಮಾ ಕುರಿತಾದ ಸುದ್ದಿ ಸಹ ಈಗ ಹರಿದಾಡುತ್ತಿದೆ. '3 ಇಡಿಯಟ್ಸ್​', 'ಸಂಜು' ಅಂತಹ ಮೆಗಾ ಹಿಟ್ ಚಿತ್ರ ನೀಡಿರುವಂತಹ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರದಲ್ಲಿ ಶಾರುಖ್ ಖಾನ್​ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಈ ಚಿತ್ರದ ಕಥೆಯು ಸಾಮಾನ್ಯ ಬಾಲಿವುಡ್ ಚಿತ್ರಗಳಂತೆ ಅಲ್ಲದೆ, ವಿಭಿನ್ನವಾದ ಕಥೆ ಹೊಂದಿದೆ ಎಂದೂ ಹೇಳಲಾಗುತ್ತಿದೆ.
Published by:Anitha E
First published: