ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಬಹು ನಿರೀಕ್ಷಿತ ಪಠಾಣ್ (Pathaan)ಚಿತ್ರದ ಹಾಡು ಮೊನ್ನೆ ರಿಲೀಸ್ ಆಗಿದೆ. ರಿಲೀಸ್ ಆದ ಬೇಷರಂ ರಂಗ್ ಹಾಡು (Besharam Rang song) ಎಲ್ಲೆಡೆ ವಿವಾದ ಎಬ್ಬಿಸಿದೆ. ಮೊದಲು ದೀಪಿಕಾ ಅವರಿಗೆ ಈ ರೀತಿಯ ಬಟ್ಟೆ ಹಾಕಿಕೊಳ್ಳೋದು ಬೇಕಿತ್ತಾ ಎಂದು ಎಲ್ಲೆಡೆ ಟ್ರೋಲ್ ಆಗಿತ್ತು. ಈಗ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕಿನಿ ವಿವಾದ ಸೃಷ್ಟಿಸಿದೆ. ಬೇಷರಂ ರಂಗ್ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದು ಅರ್ಥ. ಹಾಗಾದ್ರೆ ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲ ಎಂದು ಅವಮಾನ ಮಾಡಿದ್ದಾರೆ. ಪಠಾಣ್ ಸಿನಿಮಾವನ್ನು ಬಹಿಷ್ಕರಿಸಿ (Boycott) ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೇಕು ಅಂತಾನೇ ಕೇಸರಿ ಬಣ್ಣಕ್ಕೆ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಬೈಕಾಟ್ ಪಠಾಣ್ ಟ್ರೆಂಡ್
ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ. ಈ ಹಾಡಿನ ಸಾಲು ದೀಪಿಕಾ ಅವರು ಹಾಕಿರುವ ಡ್ರೆಸ್‌ಗೂ ಹೊಂದಾಣಿಕೆ ಆಗುತ್ತಿದೆ. ಕೇಸರಿ ಬಣ್ಣ ನಾಚಿಕಿಯಿಲ್ಲದ ಬಣ್ಣನಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅದ್ಕೆ ಬೈಕಾಟ್ ಪಠಾಣ್ ಟ್ರೆಂಡ್ ಶುರು ಮಾಡಿದ್ದಾರೆ.
ಹಿಂದೂ ಸಂಘಟನೆಗಳು ಗರಂ
ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಗರಂ ಆಗಿವೆ. ಕೇಸರಿ ಹಿಂದುತ್ವವನ್ನು ಸೂಚಿಸುತ್ತದೆ. ಈ ಹಾಡಿನಲ್ಲಿ ಬೇಕು ಅಂತಾನೇ ನಮ್ಮ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಹಾಡನ್ನು ಬಹಿಷ್ಕರಿಸಿ ಎಂದು ಆಕ್ರೋಶಿತರಾಗಿದ್ದಾರೆ.
ಇದನ್ನೂ ಓದಿ: Shah Rukh Khan: ವೈಷ್ಣೋದೇವಿ ದೇವಾಲಯದಲ್ಲಿ ಕಿಂಗ್ ಖಾನ್
ಬೇಷರಂ ರಂಗ್ ಹಾಡು ಕಾಪಿ ಮಾಡಲಾಗಿದ್ಯಾ?
ಟ್ವಿಟರ್‌ನಲ್ಲಿ ದೀಪಿಕಾ ಹೊಸ ಅವತಾರ ಮತ್ತು ಶಾರುಖ್ ಅವರ ಶರ್ಟ್‍ಲೆಸ್ ದೃಶ್ಯಗಳ ಈಗಾಗಲೇ ಟ್ರೋಲ್ ಆಗಿವೆ. ಈ ಮಧ್ಯೆ, ಈಗ ಹಾಡನ್ನು ಕಾಪಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹಾಡಿನ ಒಂದು ಭಾಗವನ್ನು ಫ್ರೆಂಚ್ ಗಾಯಕ ಮತ್ತು ಗೀತರಚನೆಕಾರ ಜೈನ್ ಅವರ ಸೂಪರ್‌ಹಿಟ್ ಟ್ರ್ಯಾಕ್ 'ಮಕೆಬಾ' ನಿಂದ ನಕಲು ಮಾಡಲಾಗಿದೆಯಂತೆ.
ಬೇಷರಂ ರಂಗ್ ಹಾಡು ಕೇಳಿದ ಕ್ಷಣದಲ್ಲಿ ನಾನು ಇದನ್ನು ಮೊದಲು ಎಲ್ಲೋ ಕೇಳಿದ್ದೇನೆ ಎಂದು ಯೋಚಿಸುತ್ತಿದ್ದೆ, ಇದು ಜೈನ್ ಅವರ ಮೇಕೆಬಾ ಸಾಂಗ್ ಎಂದು ಗೊತ್ತಾಯ್ತು ಎಂದು ಸಂಗೀತಗಾರರಾದ ವಿಶಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು
ಜನವರಿ 25ಕ್ಕೆ ಚಿತ್ರ ಬಿಡುಗಡೆ
ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಪಠಾಣ್ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್, ಥ್ರಿಲ್ಲರ್ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಮತ್ತು ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಹಿಂದಿಯನ್ನು ಹೊರತುಪಡಿಸಿ ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ