ಬಿ-ಟೌನ್​ ಖಾನ್​ಗಳನ್ನು ಬಹಿಷ್ಕರಿಸಿ ಎಂದು ಟ್ರೆಂಡ್​ ಮಾಡಿದ್ದ ನೆಟ್ಟಿಗರು: ಶಾರುಖ್​ ಖಾನ್​ ಬೆಂಬಲಕ್ಕೆ ನಿಂತ ಅಭಿಮಾನಿಗಳು..!

Boycott Khans And Support Self made SRK: ಸುಶಾಂತ್​ ಅಗಲಿಕೆಯಿಂದಾಗಿ ನೆಟ್ಟಿಗರು ಬಿ-ಟೌನ್​ ಅನ್ನು ಆಳುತ್ತಿರುವ ಖಾನ್​ಗಳ ಮೇಲೂ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾನ್​ಗಳನ್ನು ಬಹಿಷ್ಕರಿಸಿ ಎಂದು ಟ್ರೆಂಡ್​ ಮಾಡಲಾಗುತ್ತಿದೆ.

ಶಾರುಖ್ ಖಾನ್​

ಶಾರುಖ್ ಖಾನ್​

  • Share this:
ಸುಶಾಂತ್ ಸಿಂಗ್​ ರಜಪೂತ್​ ಅವರ ಸಾವಿನಿಂದ ಆರಂಭವಾದ ಸ್ವಜನಪಕ್ಷಪಾತ ಚರ್ಚೆ ಇನ್ನೂ ಮುಂದುವರೆಯುತ್ತಿದೆ. ದಿನ ಕಳೆದಂತೆ ಈ ಚರ್ಚೆಯ ಬಿಸಿ ಮತ್ತಷ್ಟು ಏರುತ್ತಲೇ ಇದೆ. ಸ್ಟಾರ್​ ಕಿಡ್ಸ್​ ಹಾಗೂ ದೊಡ್ಡ ದೊಡ್ಡ ಫಿಲ್ಮ್​ ಮೇಕರ್ಸ್​ ವಿರುದ್ಧ ಸಾರಿದ್ದ ಸಮರದಲ್ಲಿ ಈಗ ಬಾಲಿವುಡ್​ನ ಖಾನ್​ಗಳನ್ನೂ ಸೇರಿಸಲಾಗಿದೆ. 

ಸುಶಾಂತ್​ ಅಗಲಿಕೆಯಿಂದಾಗಿ ನೆಟ್ಟಿಗರು ಬಿ-ಟೌನ್​ ಅನ್ನು ಆಳುತ್ತಿರುವ ಖಾನ್​ಗಳ ಮೇಲೂ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾನ್​ಗಳನ್ನು ಬಹಿಷ್ಕರಿಸಿ ಎಂದು ಟ್ರೆಂಡ್​ ಮಾಡಲಾಗುತ್ತಿದೆ. 

ಅದಕ್ಕೆ ತಕ್ಕಂತೆ ಶಾರುಖ್ ಅಭಿಮಾನಿಗಳು ಕಿಂಗ್​ ಖಾನ್​ ಬೆಂಬಲಕ್ಕೆ ನಿಂತಿದ್ದಾರೆ. ಶಾರುಖ್​ ಖಾನ್​ ಕಷ್ಟಪಟ್ಟು ಈ ಮಟ್ಟಕ್ಕೆ ಬಂದವರು. ಅವರಿಗೆ ಸಿನಿಮಾಗಳಲ್ಲಿ ಸುಲಭವಾಗಿ ಅವಕಾಶಗಳು ಸಿಕ್ಕಿಲ್ಲ. ತಮ್ಮ ಬ್ಯಾನರ್​ನಲ್ಲಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ ಇಂತಹ ನಟನ ಅವರ ಜೊತೆ ನಾವಿದ್ದೇವೆ ಎಂದು ಅಭಿಮಾನಿಗಳು #SupportSelfmadeSRK ಟ್ರೆಂಡ್​ ಮಾಡುತ್ತಿದ್ದಾರೆ.

ಬಿಹಾರ, ಉತ್ತರ ಪ್ರದೇಶ ಸೇರಿಂದತೆ ಹಲವೆಡೆಗಳಲ್ಲಿ ಈ ಖಾನ್​ಗಳ ಸಿನಿಮಾಗಳನ್ನು ತೆರೆ ಕಾಣಲು ಬಿಡಬಾರದು. ಅವರ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ನೆಲ ಕಚ್ಚಿದಾಗ ಅವರಿಗೆ ಅರ್ಥವಾಗುತ್ತದೆ. ಪ್ರತಿಭೆಗಳು ಕೇವಲ ಬಿ-ಟೌನ್​ನ ಸೆಲೆಬ್ರಿಟಿಗಳ ಮನೆಗಳಿಂದಲೇ ಬರುವುದಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Rashmika Mandanna: ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ರಶ್ಮಿಕಾ ಮಂದಣ್ಣ


 

ಇದನ್ನು ಓದಿ: Sushanth: ಕನಸಿನ ಮನೆಯಲ್ಲಿ ಹೇಗೆಲ್ಲ ಕಾಲ ಕಳೆಯುತ್ತಿದ್ರು ಗೊತ್ತಾ ಸುಶಾಂತ್​: ಇಲ್ಲಿದೆ ಅವರ ವೈರಲ್​ ವಿಡಿಯೋ..!
First published: