Brahmastra: ಅನುಷ್ಕಾ ಶರ್ಮಾ ವಿಡಿಯೋದಿಂದ ರಣಬೀರ್ - ಆಲಿಯಾ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾಗೆ ಕಂಟಕ

Boycott Brahmastra: ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರಕ್ಕೂ ಈಗ ಬಾಯ್ಕಾಟ್ ಕಾಟ ಶುರುವಾಗಿದೆ. ಅನುಷ್ಕಾ ಶರ್ಮಾ ಅವರ ಹಳೆ ವಿಡಿಯೋದಿಂದ ಬಿಗ್​ಬಜೆಟ್ ಸಿನಿಮಾ ಬಾಯ್ಕಾಟ್ ಬೆದರಿಕೆ ಎದುರಿಸುತ್ತಿದೆ.

ಬ್ರಹ್ಮಾಸ್ತ್ರ ಮೋಷನ್​ ಪೋಸ್ಟರ್​

ಬ್ರಹ್ಮಾಸ್ತ್ರ ಮೋಷನ್​ ಪೋಸ್ಟರ್​

  • Share this:
ಬ್ರಹ್ಮಾಸ್ತ್ರ ಸಿನಿಮಾ (Brahmastra Cinema) ಸೆಪ್ಟೆಂಬರ್ 9ರಂದು ರಿಲೀಸ್ (Release) ಆಗುವುದರಲ್ಲಿದೆ. ಅಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಮೊದಲ ಬಾರಿ ಜೊತೆಯಾಗಿ ತೆರೆ ಹಂಚಿಕೊಂಡ ಸಿನಿಮಾ (Cinema) ಮುಂದಿನವಾರ ಬಿಡುಗಡೆಯಾಗುತ್ತಿದ್ದು ಆದರೆ ಈಗ ಸಿನಿಮಾ ಬಾಯ್ಕಾಟ್ (Boycott) ಭೀತಿಯನ್ನು ಎದುರಿಸುತ್ತಿದೆ. ಸಿನಿಮಾ ಬಿಡುಗಡೆ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳಿದ್ದರೂ ಸಿನಿಮಾ ಮಾತ್ರ ಬಾಯ್ಕಾಟ್ ಭೀತಿ ಎದುರಿಸುತ್ತಿದೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಬಾಯ್ಕಾಟ್ ಪ್ರವೃತ್ತಿಯ ನಡುವೆ, ಲಾಲ್ ಸಿಂಗ್ ಚಡ್ಡಾ ಮತ್ತು ಲೈಗರ್ ನಂತರ ಈಗ ಆಲಿಯಾ ಭಟ್-ರಣಬೀರ್ ಕಪೂರ್-ನಟಿಸಿದ ಬ್ರಹ್ಮಾಸ್ತ್ರ (Brahmastra) ಸಿನಿಮಾವನ್ನು ನೆಟ್ಟಿಗರು ಗುರಿಯಾಗಿಸಿದ್ದಾರೆ. ಅಯಾನ್ ಮುಖರ್ಜಿ ಅವರ ನಿರ್ದೇಶನದ ಸಿನಿಮಾ ಬಿಡುಗಡೆಯ ಡೇಟ್  ಸಮೀಪಿಸುತ್ತಿದ್ದಂತೆ, ಈಗ ಮತ್ತೊಮ್ಮೆ 'ಬಾಯ್ಕಾಟ್ ಬ್ರಹ್ಮಾಸ್ತ್ರ' ಟ್ರೆಂಡಿಂಗ್‌ ಆಗಿದೆ. ಬಾಯ್ಕಾಟ್ ಪ್ರವೃತ್ತಿಯ ನಡುವೆ ಆನ್‌ಲೈನ್‌ನಲ್ಲಿ 'ವಿ ಲವ್ ಆಲಿಯಾ ಭಟ್' ಕೂಡಾ ಟ್ರೆಂಡ್ ಆಗುತ್ತಿದೆ. ಆದರೆ ಅಭಿಮಾನಿಗಳು ಆಲಿಯಾ ಭಟ್‌ಗೆ ತಮ್ಮ ಬೆಂಬಲವನ್ನು ನೀಡಲು ಪ್ರಾರಂಭಿದ್ದಾರೆ.

‘ಬ್ರಹ್ಮಾಸ್ತ್ರ ಬಾಯ್ಕಾಟ್’ ವಿರುದ್ಧ ‘ವಿ ಲವ್ ಆಲಿಯಾ ಭಟ್’ ಕುರಿತು ಟ್ವಿಟ್ಟರ್‌ ವಾರ್

ಇತ್ತೀಚಿನ ದಿನಗಳಲ್ಲಿ ಆಲಿಯಾ ಭಟ್ ಅವರ ಅಭಿಮಾನಿಗಳು 'ವಿ ಲವ್ ಆಲಿಯಾ ಭಟ್' ಎಂದು ಟ್ರೆಂಡ್ ಮಾಡುವ ಮೂಲಕ ಬೆಂಬಲವನ್ನು ನೀಡಲು ಪ್ರಯತ್ನಿಸುತ್ತಿರುವಾಗ, ನೆಟಿಜನ್‌ಗಳು 'ಬಾಯ್ಕಾಟ್ ಬ್ರಹ್ಮಾಸ್ತ್ರ' ಹ್ಯಾಶ್‌ಟ್ಯಾಗ್ ಅನ್ನು ಮತ್ತೆ ಪ್ರಾರಂಭಿಸಿದ್ದಾರೆ. ಅದು ಟ್ವಿಟರ್‌ನಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.

ಆಲಿಯಾ ಬಗ್ಗೆ ಲವ್ , ಸಿನಿಮಾ ಬಗ್ಗೆ ಕೋಪ

ನೆಟಿಜನ್‌ಗಳು ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದು ಬಾಲಿವುಡ್ ಬಹಿಷ್ಕರಿಸುವ ಕರೆಗಳು ತುಂಬಾ ಸಾಮಾನ್ಯವಾಗಿದೆ. ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಏಕೆಂದರೆ 'ಬಾಲಿವುಡ್ ಬಾಯ್ಕಾಟ್' ತಂಡವು 'ವಿ ಲವ್ ಆಲಿಯಾ ಭಟ್' ಟ್ರೆಂಡ್ ಮಾಡಿ ಇದೊಂದು ರೀತಿಯ ಗೊಂದಲದ ವಾರ್ ಮುಂದುವರಿದಿದೆ.

ವೈರಲ್ ಆಯ್ತು ಅನುಷ್ಕಾ ಶರ್ಮಾ ಅವರ ಹಳೆಯ ವಿಡಿಯೋ

ಅನುಷ್ಕಾ ಶರ್ಮಾ ಹಾಗೂ ರಣಬೀರ್ ಕಪೂರ್ ಜೊತೆಯಾಗಿ ಇಂಟರ್​ವ್ಯೂ ಒಂದರಲ್ಲಿ ಭಾಗಿಯಾದಾಗ ಅನುಷ್ಕಾ ಶರ್ಮಾ ಅವರು ನಟನ ಕುರಿತು ಒಂದು ಸೀಕ್ರೆಟ್ ರಿವೀಲ್ ಮಾಡುತ್ತಾರೆ. ಈ ಹಳೆಯ ವಿಡಿಯೋ ಈಗ ವೈರಲ್ ಆಗಿದೆ.

ಡ್ರಗ್ಸ್ ತಗೊಂಡೇ ಆ್ಯಕ್ಟಿಂಗ್ ಮಾಡ್ತಾರಂತೆ ನಟ

ಅನುಷ್ಕಾ ಶರ್ಮಾ ರಣಬೀರ್ ಕಪೂರ್ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದು ನಟ ನಟಿಸುವ ಮೊದಲು ಡ್ರಗ್ಸ್ ತೆಗೆದುಕೊಂಡೇ ಹೋಗುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈಗ ಇದೇ ವಿಡಿಯೋ ಕ್ಲಿಪ್ ವೈರಲ್ ಆಗಿ ರಣಬೀರ್ ಸಿನಿಮಾ ನೋಡಿದರೆ ಡ್ರಗ್ಸ್​​ಗೆ ಹಣ ನೀಡಿದಂತೆ, ಕರಣ್ ಜೋಹರ್ ಡ್ರಗ್ಸ್​ ಪಾರ್ಟಿಗೆ ಹಣ ಸುರಿದಂತೆ ಅರ್ಥ. ಹಾಗಾಗಿ ಸಿನಿಮಾ ಬಹಿಷ್ಕರಿಸಿ ಎಂದು ನೆಟ್ಟಿಗರು ಟ್ರೆಂಡ್ ಮಾಡಿದ್ದಾರೆ.

ಅದ್ಧೂರಿಯಾಗಿದೆ ರಣಬೀರ್ ಬ್ರಹ್ಮಾಸ್ತ್ರ:

ಹೌದು, ಬಾಲಿವುಡ್ ಸಿನಿರಂಗದಲ್ಲಿ ವಿನೂತನ ಪ್ರಯತ್ನ ಮಾಡಿರುವ ನಿರ್ದೇಶಕ ಆಯನ್ ಮುಖರ್ಜಿ ಬ್ರಹ್ಮಾಸ್ತ್ರ ಸಿನಿಮಾವನ್ನು ಅದ್ಧೂರಿಯಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಮತ್ತೆ ಬಾಲಿವುಡ್​ಗೆ ಈ ಚಿತ್ರದ ಮೂಲಕ ಕಳೆ ಬರಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
Published by:Divya D
First published: