Puneeth Rajkumar : ಅಪ್ಪು ಬಗ್ಗೆ ಕೆಟ್ಟದಾಗಿ ಪೋಸ್ಟ್​ ಮಾಡಿದ್ದವ ಅರೆಸ್ಟ್​, ಕಿಡಿಗೇಡಿ ಬಂಧನಕ್ಕೆ ಆಗ್ರಹಿಸಿದ್ದ ಕನ್ನಡಿಗರು!

Puneeth Rajkumar : . ಎಲ್ಲೇ ಹೋದರೂ, ಏನೇ ಮಾಡಿದರೂ ಅಪ್ಪು ನೆನಪು ನಮ್ಮನ್ನು ಹಿಂಬಾಲಿಸುತ್ತಿವೆ. ಅಪ್ಪು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆ ಮನೆಗಳಲ್ಲೂ ಅಗಲಿದ ಅಪ್ಪು ನೆನದು ಕಂಬನಿ ಮಿಡಿಯುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  • Share this:
ಪವರ್​ ಸ್ಟಾರ್​(Power Star) ನಮ್ಮನೆಲ್ಲ ಬಿಟ್ಟು ದೂರ ಹೋಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಯಾರಿಂದಲೂ ಆಗುತ್ತಿಲ್ಲ. ಎಲ್ಲೇ ಹೋದರೂ, ಏನೇ ಮಾಡಿದರೂ ಅಪ್ಪು ನೆನಪು(Appu Memories) ನಮ್ಮನ್ನು ಹಿಂಬಾಲಿಸುತ್ತಿವೆ. ಅಪ್ಪು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆ ಮನೆಗಳಲ್ಲೂ ಅಗಲಿದ ಅಪ್ಪು ನೆನದು ಕಂಬನಿ ಮಿಡಿಯುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್(Puneeth Rajkuma) ಅವರ ಅಭಿಮಾನಿಬಳಗ ತುಂಬಾ ದೊಡ್ಡದು. 25 ಲಕ್ಷಕ್ಕೂ ಹೆಚ್ಚು ಮಂದಿ ಪುನೀತ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದರೆ ಈ ಮಧ್ಯೆ ಕಿಡಿಗೇಡಿಯೊಬ್ಬ ಅಪ್ಪು ಬಗ್ಗೆ ಅವಹೇಳನಕಾರಿಯಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್(Post)​ ಮಾಡಿದ್ದ. ಆತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಆತನನ್ನು ಕೂಡಲೇ ಬಂಧಿಸಿ ಅಥವಾ ನಮ್ಮ ಕೈಗೆ ಸಿಕ್ಕರೆ ನಿಜ ನಾವು ಸುಮ್ಮನೆ ಬಿಡುವುದಿಲ್ಲ ಅಂತ ಅಪ್ಪು ಅಭಿಮಾನಿಗಳು(Fans) ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಸೈಬರ್ ಪೊಲೀಸರು(Bengaluru Cyber Police Team) ಕ್ರಮ ಕೈಗೊಂಡಿದ್ದಾರೆ. ಆತನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ಅವರು ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಅಶ್ಲೀಲ ಪದ ಬಳಿಸ ಪೋಸ್ಟ್​ ಮಾಡಿದ್ದವ ಅಂದರ್​

ಅಪ್ಪು ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಈ ಆದೇಶದ ಹಿಂದಿನ ಉದ್ದೇಶ ಆಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್​ ಹಾಕಲಾಗಿತ್ತು. ಡಾ.ರಾಜ್​ಕುಮಾರ್​  ನಿಧನದ ಬಳಿಕ ಆದ ಕಹಿ ಘಟನೆಗಳು ಮರುಕಳಿಸಬಾರದೆಂದು ಮಧ್ಯಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಇದಕ್ಕೆ ರಿತ್ವಿಕ್ಸ್ ಎಂಬಾತ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ.  ತುಂಬಾ ಅಶ್ಲೀಲ ಪದಗಳಿಂದ ನಿಂದಿಸಿದ್ದ, ಇದು ಅಭಿಮಾನಿಗಳನ್ನ ಕೆಣಕಿತ್ತು.

ಇದನ್ನು ಓದಿ : ಅಪ್ಪು ಓದಿಸುತ್ತಿದ್ದ 1800 ಮಕ್ಕಳ ಹೊಣೆ ಹೊತ್ತ ತಮಿಳು ನಟ ವಿಶಾಲ್​: ಕನ್ನಡಿಗರಿಂದ ಬಹುಪರಾಕ್!​





ನಿಷೇಧದ ನಡುವೆಯೂ ಆತನಿಗೆ ಸಿಕ್ಕಿತ್ತು ಮದ್ಯ

ಪುನೀತ್​ ನಿಧನದ ಬಳಿಕ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಮಂದಿಗೆ ಇದರಿಂದ ಕಿರಿಕಿರಿ ಆಗಿತ್ತು.  ನಿಷೇಧದ ನಡುವೆಯೂ ರಿತ್ವಿಕ್ಸ್​ ಎಂಬ ಈ ವ್ಯಕ್ತಿಗೆ ಲಿಕ್ಕರ್​ ಸಿಕ್ಕಿತ್ತು. ಬಳಿಕ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ, ಅಶ್ಲೀಲ ಪದಗಳಿಂದ ಪುನೀತ್​ ರಾಜ್​ಕುಮಾರ್​ ಅವರನ್ನು ಅವಮಾನಿಸಿದ್ದ. ಬಿಯರ್​ ಬಾಟಲಿಯ ಚಿತ್ರ ಹಂಚಿಕೊಂಡು, ‘ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಆತ ಬರೆದುಕೊಂಡಿದ್ದ. ಇದನ್ನು ಕಂಡ ಅಪ್ಪು ಫ್ಯಾನ್ಸ್ ಆತನಿಗಾಗಿ ಹುಡುಕಾಟ ನಡೆಸಿದ್ದರು.


ಇದನ್ನು ಓದಿ : ಅಪ್ಪು ಎರಡು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ನೀಡಿವೆ, ಸಾರ್ಥಕತೆ!

ರಿತ್ವಿಕ್ಸ್​ ಪೋಸ್ಟ್​ಗೆ ತೀವ್ರ ಆಕ್ಷೇಪ

ಈತ ಹೀಗೆ ಪೋಸ್ಟ್​ ಮಾಡುತ್ತಿದ್ದಂತೆ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆತನನ್ನು ಕೂಡಲೇ ಬಂಧಿಸಿ, ಇಲ್ಲ ನಮ್ಮ ಕೈಗೆ ಸಿಕ್ಕರೆ ಬಿಡುವುದಿಲ್ಲ ಎಂದು ಅಪ್ಪು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್​ದರು. ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಕೇವಲ ಆಲ್ಕೋಹಾಲ್​ಗಾಗಿ ಪುನೀತ್​ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದರು. ಇದಾದ ಬಳಿಕ ಈಗ ಆ ಕಿಡಿಗೇಡಿಯ ಬಂಧನವಾಗಿದೆ.  ಪೊಲೀಸರ ಕೈಗೆ ಸಿಕ್ಕಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ನಮ್ಮ ಕೈಲಿ ಸಿಕ್ಕಿದರೆ ಒಳ್ಳೆ ಪಾಠ ಕಲಿಸುತ್ತಿದ್ದೆ ಎಂದು ಅಪ್ಪು ಅಭಿಮಾನಿಯೊಬ್ಬ ಹೇಳಿದ್ದಾನೆ.
Published by:Vasudeva M
First published: