ನಟ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ನಡುವೆ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈಗಾಗಲೇ ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಈ ಡಿ ಬಾಸ್ ಪರ್ವ ಆಚರಣೆ ಮುಂದಾಗಿದ್ದಾರೆ. ಈ ನಡುವೆ ಅಭಿಮಾನಿಗಳಿಂದ ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಿ ಅವರ ಅಭಿಮಾನ ಮೆರೆದಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿನ ಹಾಡನ್ನು ಅವರ ಅಭಿಮಾನಿ ಸುಪ್ರೀತ್ ಗಾಂಧಾರ ಹಾಡಿದ್ದಾರೆ. ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಗಲ್ಲಾಪೆಟ್ಟಿಗೆಯಲ್ಲಿ ಧೂಳಿಪಟ ಮಾಡಲಿದೆ ಎಂದು ಹಾಡಿರುವ ಹಾಡು ಡಿ ಬಾಸ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.
ನಾಳೆ ದರ್ಶನ್ ಹುಟ್ಟುಹಬ್ಬವಿದ್ದು, ಅವರ ಅಭಿಮಾನಿಗಳು ಈ ಬಾರಿಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬಕ್ಕಾಗಿ ಹಾಡುಗಳನ್ನ ಸಮರ್ಪಿಸುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅಂಡ್ ಟೀಮ್ 'ಬಾಕ್ಸ್ ಆಫೀಸ್ ಸುಲ್ತಾನ' ಎಂಬ ಹಾಡನ್ನ ರೆಡಿ ಮಾಡುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅವರೇ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಸಿದ್ಧಾರ್ಥ್ ಗೌಡ ಸಾಹಿತ್ಯ ಬರೆದಿದ್ದಾರೆ.
ಪ್ರತಿ ಬಾರಿ ನಟ ದರ್ಶನ್ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಹಾಡೋಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿನ ಹಾಡು ಬಿಡುಗಡೆಯಾಗಿದೆ. ಸುಪ್ರೀತ್ ಅಂಡ್ ಟೀಮ್ ಇದಕ್ಕೂ ಮುನ್ನ ನಾಲ್ಕು ಹಾಡುಗಳನ್ನ ಬಿಡುಗಡೆ ಮಾಡಿದೆ.
Thanks a lot😍 To All My Celebrity's For The Wonderful CDP😍😘
Posted by Darshan Thoogudeepa Srinivas on Sunday, 14 February 2021
ಇನ್ನು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ವಿನ್ಯಾಸ ಮಾಡಿರುವ ಕಾಮನ್ ಡಿಪಿ ಈಗಾಗಲೇ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದೆ. ದರ್ಶನ್ ಅವರ ವನ್ಯಜೀವಿ ಪ್ರೇಮ ಮೆರೆಯುವ ಈ ಡಿಪಿಗೆ ನಟ ದರ್ಶನ್ ಕೂಡ ಮನಸೋತಿದ್ದಾರೆ. ಈಗಾಗಲೇ ಈ ಕಾಮನ್ ಡಿಪಿ ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ. ವಿಶೇಷ ಎಂದರೇ ಸ್ಯಾಂಡಲ್ವುಡ್ನ ನಟ ರಿಷಬ್ ಶೆಟ್ಟಿ, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ನಟರೂ ಕೂಡ ದರ್ಶನ್ ಅವರ ಈ ಕಾಮನ್ ಡಿಪಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ