News18 India World Cup 2019

ಬಾಸ್​ ಪಟ್ಟಕ್ಕಾಗಿ ಹಾಡನ್ನೇ ರಚಿಸಿದ ದರ್ಶನ್​ ಅಭಿಮಾನಿಗಳು..!

news18
Updated:July 31, 2018, 1:57 PM IST
ಬಾಸ್​ ಪಟ್ಟಕ್ಕಾಗಿ ಹಾಡನ್ನೇ ರಚಿಸಿದ ದರ್ಶನ್​ ಅಭಿಮಾನಿಗಳು..!
news18
Updated: July 31, 2018, 1:57 PM IST
ಆನಂದ್ ಸಾಲುಂಡಿ, ನ್ಯೂಸ್​ 18 ಕನ್ನಡ 

ಸ್ಯಾಂಡಲ್‍ವುಡ್‍ನ ಬಾಸು ಯಾರು ಅನ್ನೋ ವಿವಾದ ಶುರುವಾಗಿ ತಿಂಗಳುಗಳೇ ಕಳೆದಿವೆ. ಆದರೂ ಈ ವಿವಾದಕ್ಕೆ ಕೊನೆಯೇ ಸಿಗುತ್ತಿಲ್ಲ. ಇನ್ನೇನು ಇದರ ಬಿಸಿ ಕಮ್ಮಿಯಾಯಿತು ಎನ್ನುವಾಗಲೇ ಯಾವುದಾದರು ಒಂದು ರೀತಿಯಲ್ಲಿ ಇದು ಮತ್ತೆ ಎಂಟ್ರಿ ಕೊಟ್ಟಿರುತ್ತೆ?ಈಗ ಇನ್ಯಾವ ಬಾಗಿಲಿಂದ ಈ ವಿವಾದ ಇಣುಕಿದೆ ಅಂತೀರಾ? ಆ ಕುರಿತ ವರದಿ ಇಲ್ಲಿದೆ ಓದಿ.

ಸ್ಯಾಂಡಲ್‍ವುಡ್‍ನ ಬಾಸ್ ಯಾರು ಅನ್ನೋ ವಿವಾದ ಬೇರೆ ಬೇರೆ ಬಾಗಿಲಿಂದ ಇಣುಕತ್ತಲೇ ಇರುತ್ತೆ. ಯಾರೋ ಒಬ್ಬರು ಫುಲ್‍ಸ್ಟಾಪ್ ಇಟ್ಟರು ಎನ್ನುವಾಗಲೇ, ಮತ್ಯಾವುದೋ ಕಡೆಯಿಂದ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತೆ. ಶಿವಣ್ಣನನ್ನು 'ಟಗರು' ಟೀಮ್ ಬಾಸ್ ಆಫ್ ಸ್ಯಾಂಡಲ್‍ವುಡ್ ಅಂತ ಕರೀತು ಅನ್ನೋದು ವಿವಾದದ ಮೂಲ. ಬಾಸು ಅಂದ್ರೆ ಒನ್ ಅಂಡ್ ಓನ್ಲಿ ಡಿ ಬಾಸ್ ಅಂತ ದರ್ಶನ್ ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದು ಹಳೇ ಕಥೆ. ವಿವಾದ ಬಿಸಿಯಾರುವಾಗಲೇ ರಾಕಿಂಗ್ ಸ್ಟಾರ್ ಯಶ್ 8055 ಎಂಬ ಬಾಸ್ ಟೈಟಲ್ ಸೂಚಿಸೋ ಕಾರ್ ನಂಬರ್ ಹರಾಜ್‍ನಲ್ಲಿ ಕೊಂಡುಕೊಂಡರು. ಅದು  ಬಾಸ್ ವಿವಾದದ ಮುಂದುವರಿದ ಭಾಗ.

ಹೀಗೆ ಭಜರಂಗಿ ಬಾಲದಂತೆ ಬೆಳೆಯುತ್ತಾ ಹೋದ ವಿವಾದ, ಕಳೆದ ಕೆಲವು ದಿನಗಳಿಂದ ಬಾಲ ಮುದುರಿಕೊಂಡಿತ್ತು. ಅರ್ಥಾತ್ ವಿವಾದವೊಂದು ತಣ್ಣಗಾಗಿ ಸ್ಯಾಂಡಲ್‍ವುಡ್ ನಿಟ್ಟುಸಿರು ಬಿಟ್ಟಿತ್ತು. ಇದರಲ್ಲಿ ಸ್ಟಾರ್ ನಟರ ಪಾತ್ರ ಕೂಡ ಬಹಳಷ್ಟಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ದರ್ಶನ್-ಯಶ್ ಯಾರನ್ನ ಬಾಸ್ ಅಂದರೂ ಖುಷಿನೇ ಅಂತೇಳಿ ದೊಡ್ಡತನ ಮೆರೆದಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳನ್ನ ಮನೆಗೆ ಕರೆದು ಇನ್ನು ಮುಂದೆ ಬೇರೆ ನಟರನ್ನ ಟ್ರೋಲ್ ಮಾಡಬೇಡಿ ಅಂತ ಬುದ್ಧಿವಾದ ಹೇಳಿದ್ದರು. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದೇ ಹೇಳಲಾಗಿತ್ತು.

ಆದರೆ ಈಗ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಬಾಸ್ ವಿವಾದದ ಕಿಡಿ ಜೋರಾಗುವ ಸಾಧ್ಯತೆ ಕಾಣುತ್ತಿದೆ. ಅದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಮಾಡಿರೋ 'ಜ್ವಾಲಾಮುಖಿ ಹಾಡು...'. ಯಾರೋ ಇವನ್ಯಾರೋ ಜ್ವಾಲಮುಖಿ ರೂಪಿಯೋ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡು ದರ್ಶನ್ ಅಭಿಮಾನಿಗಳು, ಅಭಿಮಾನದಿಂದ ಅಭಿಮಾನಕ್ಕಾಗಿ ಮಾಡಿದ್ದು, ಇಡೀ ಹಾಡಿನಲ್ಲಿ ದಚ್ಚುರನ್ನ ಪದಗಳಲ್ಲೇ ವಿಜೃಂಭಿಸಲಾಗಿದೆ. ಇಷ್ಟೇ ಆಗಿದ್ದರೆ ಇದೊಂದು ಅಭಿಮಾನಿಗಳ ಅಭಿಮಾನದ ಹಾಡಾಗಿರುತ್ತಿತ್ತು. ಆದರೆ ಹಾಡಿನ ಕೊನೆಯಲ್ಲಿ ಬಾಸು ನಮ್ಮ ಬಾಸು ಅನ್ನೋ ಸಾಲು ಬರುತ್ತೆ. ಇದು ಬಾಸ್ ವಿವಾದವನ್ನ ಮತ್ತೊಂದು ದಾರಿಗೆ ಎಳೆದು ತಂದಂತಿದೆ.

ರವೀಂದ್ರ ರೆಡ್ಡಿ ಸಾಹಿತ್ಯ ರಚಿಸಿದ್ದು, ದನುಷ್​ ಹಾಡಿರುವ ಈ ಹಾಡಿಗೆ ವಿಶಾಖಾ ಶಶಿಧರನ್​ ಸಂಗೀತ ನೀಡಿದ್ದಾರೆ. ಈ ಹಾಡು ಬಿಡುಗಡೆಯಾದ ಒಂದೇ ದಿನಕ್ಕೆ ಲಕ್ಷ ವೀಕ್ಷಣೆ ಪಡೆದುಕೊಂಡಿದೆ.
Loading...ಅಂದಹಾಗೆ ಸ್ವತಃ ದರ್ಶನ್ ಈ ಹಾಡನ್ನ ಕೇಳಿ ತಲೆ ದೂಗಿದ್ದಾರೆ. ಹಾಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ದರ್ಶನ್‍ರ ಕುಚುಕು ಗೆಳೆಯ ಸೃಜನ್ ಕೂಡ ಹಾಡಿಗೆ ಭೇಷ್ ಅಂದಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬೇರೆ ನಟರ ಅಭಿಮಾನಿಗಳು ಈ ಹಾಡಿಗೆ ಯಾವ ರೀತಿ ಪ್ರತಿಕ್ರಿಯೆ ಮಾಡಲಿದ್ದಾರೆ ಅನ್ನೋದರ ಮೇಲೆ ಬಾಸ್ ವಿವಾದ ಕೊನೆಯಾಯಿತಾ ಇಲ್ಲವಾ ಅನ್ನೋದು ತಿಳಿಯಲಿದೆ. ಎನಿವೇ ಶಿವಣ್ಣ ಹೇಳಿದ ರೀತಿ, ಪ್ರತಿ ನಟನ ಅಭಿಮಾನಿಗಳಿಗೆ ಅವರ ನೆಚ್ಚಿನ ನಟನೇ ಬಾಸು ಅಂತ ಎಲ್ಲರೂ ಅಂದುಕೊಂಡುಬಿಟ್ಟರೆ, ಈ ವಿವಾದಕ್ಕೊಂದು ಅಂತ್ಯ ಸಿಗಬಹುದೇನೋ?
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...