'ಬಾಸ್​' ಪಟ್ಟ ವಿವಾದ: ಶಿವರಾಜ್​ ಕುಮಾರ್​ ಪ್ರತಿಕ್ರಿಯೆ ಏನು ಗೊತ್ತಾ?

news18
Updated:June 22, 2018, 1:27 PM IST
'ಬಾಸ್​' ಪಟ್ಟ ವಿವಾದ: ಶಿವರಾಜ್​ ಕುಮಾರ್​ ಪ್ರತಿಕ್ರಿಯೆ ಏನು ಗೊತ್ತಾ?
news18
Updated: June 22, 2018, 1:27 PM IST
ನ್ಯೂಸ್​ 18 ಕನ್ನಡ 

'ಟಗರು' ಸಿನಿಮಾದ 50 ದಿನಗಳ ಸಂಭ್ರಮಾಚರಣೆ ನಂತರ ಎದ್ದಿದ್ದ ಚಂದನವನದ ಬಾಸ್​ ಪಟ್ಟದ ವಿವಾದದ ಬಗ್ಗೆ ಶಿವರಾಜ್​ ಕುಮಾರ್​ ಪ್ರತಿಕ್ರಿಯಿಸಿದ್ದಾರೆ.

'ವಿಲನ್​' ಸಿನಿಮಾದ ನಂಬರ್ 1 ಹಾಡಿನ ವಿವಾದ ನನಗೆ ಗೊತ್ತಿಲ್ಲ. ನಾವೆಲ್ಲರೂ ಒಂದೇ. ಎಲ್ಲ ನಟರೂ ಬಾಸ್​ಗಳೇ. ದರ್ಶನ್​ಗೆ ಬಾಸ್ ಅಂದರೂ ಖುಷೀನೇ...ಯಶ್​ಗೆ ಬಾಸ್ ಅಂದರೂ ಖುಷೀನೇ...ಅವರವರು ಅವರವರ ಮನೆಗೆ ಅವರವರೇ ಬಾಸ್...ಅದನ್ನೆಲ್ಲ ನಾವು ಯಾರೂ ತಲೆ ಕೆಡಿಸಿಕೊಳ್ಳಲ್ಲ. ಎಲ್ಲರ ಸಿನಿಮಾನ ಎಲ್ಲರೂ ನೋಡಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಅನ್ನೋದಷ್ಟೇ ನಮ್ಮ ಆಸೆ' ಎಂದಿದ್ದಾರೆ ಶಿವಣ್ಣ.

ಅಷ್ಟಕ್ಕೂ ಏನಿದು 'ನಂಬರ್​ ಒನ್​....' ಹಾಡಿನ ವಿವಾದ ಇದಕ್ಕೂ ಬಾಸ್​ ಪಟ್ಟಕ್ಕೂ ಏನು ಸಂಬಂಧ ಅಂತೀರಾ? ಅದಕ್ಕು ಉತ್ತರ ಇದೆ. ನಿನ್ನೆಯಷ್ಟೆ ಜೋಗಿ ಪ್ರೇಮ್​ 'ವಿಲನ್'​ ಸಿನಿಮಾದ ಹಾಡಿನ ಚಿತ್ರೀಕರಣ ಮುಗಿಸಿರುವುದಾಗಿ ತಮ್ಮ ಟ್ವಿಟರ್​ ಪುಟದಲ್ಲಿ ಹಾಕಿಕೊಂಡಿದ್ದಾರೆ. ಆ ಹಾಡಿನ ಸಾಲು ಹೀಗೆದೆ. 'ನಿನ್ನೆ ಮೊನ್ನೆ ಬಂದೋರೆಲ್ಲ ನಂಬರ್​ ಒನ್​ ಅಂತಾರೋ'.
ಪ್ರೇಮ್​ ಮಾಡಿರುವ ಈ ಪೋಸ್ಟ್​ ಕೇವಲ ಹಾಡಿನ ಸಾಲುಗಳಿಂದ ಟ್ರೋಲ್​ ಆಗಿದೆ. ಆದರೆ ಇಲ್ಲಿ ಹೇಳಬೇಕಾದ ಪ್ರಮುಖ ವಿಷಯ ಅಂದರೆ ಬಾಸ್​ ಪಟ್ಟ ಹಾಗೂ ನಂಬರ್​ ಒನ್​ ಪಟ್ಟಕ್ಕಾಗಿ ಸ್ಟಾರ್​ಗಳೇ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣಿಗರು ಮಾತ್ರ ಅವರವರೇ ಕಿತ್ತಾಡುತ್ತಿದ್ದಾರೆ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ