'ಬಾಸ್' ಪಟ್ಟದ ಹಿಂದೆ ಬಿದ್ದರಾ ಗೋಲ್ಡನ್ ಸ್ಟಾರ್ ಅಭಿಮಾನಿಗಳು​ ?

news18
Updated:July 3, 2018, 8:23 PM IST
'ಬಾಸ್' ಪಟ್ಟದ ಹಿಂದೆ ಬಿದ್ದರಾ ಗೋಲ್ಡನ್ ಸ್ಟಾರ್ ಅಭಿಮಾನಿಗಳು​ ?
news18
Updated: July 3, 2018, 8:23 PM IST
-ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್​ನಲ್ಲಿ 'ಬಾಸ್' ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ದರ್ಶನ್, ಶಿವಣ್ಣ, ಯಶ್ ಅಭಿಮಾನಿಗಳ ಮಧ್ಯೆ ಶುರುವಾಗಿದ್ದ 'ಬಾಸ್' ವಾರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಂಗಳಕ್ಕೆ ಬಂದು ನಿಂತಿದೆ.

ಸೋಮವಾರ (ಜು.2) ಹುಟ್ಟುಹಬ್ಬ ಆಚರಿಸಿಕೊಂಡಿರುವ ಗಣೇಶ್ ಅವರಿಗೆ ಅಭಿಮಾನಿಗಳು ಹಾಡೊಂದನ್ನು ಅರ್ಪಿಸಿದ್ದರು. ಗೋಲ್ಡನ್ ಅಭಿಮಾನಿಗಳೇ ಕಂಪೋಸ್ ಮಾಡಿರುವ ಈ ಹಾಡಿನ ಸಾಹಿತ್ಯದಲ್ಲಿ ಪದೇ ಪದೇ 'ಬಾಸ್' ಎಂಬ ಪದ ಬಳಸಿರುವುದು ಈಗ ಸಾಮಾಜಿಕ ತಾಣದಲ್ಲಿ ಮತ್ತೆ 'ಬಾಸ್' ಚರ್ಚೆಯನ್ನು ಹುಟ್ಟು ಹಾಕಿದೆ.

'ಟಗರು' ಚಿತ್ರದ ಸಂಭ್ರಮಾಚರಣೆಯಲ್ಲಿ ನಟ ಶಿವರಾಜ್ ಕುಮಾರ್​ ಅವರಿಗೆ 'ಬಾಸ್ ಆಫ್ ಸ್ಯಾಂಡಲ್​ವುಡ್' ಎಂಬ ಬಿರುದು ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರ್ಶನ್ ಅಭಿಮಾನಿಗಳು, ನಾವು ಈಗಾಗಲೇ ಚಾಲೆಂಜಿಂಗ್ ಸ್ಟಾರ್​ಗೆ 'ಬಾಸ್' ಬಿರುದು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ವಾದ ಮಂಡಿಸಿದ್ದರು.

ಶಿವಣ್ಣ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಬಾಸ್ ಚರ್ಚೆ ತಾರಕ್ಕೇರಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಕಾರಿಗೆ BOSS ಎನ್ನುವ ನಂಬರನ್ನು ರಿಜಿಸ್ಟರ್ ಮಾಡಿಸಿದ್ದರು. ಅಷ್ಟರಲ್ಲಿ 'ಬಾಸ್' ತಿಕ್ಕಾಟಕ್ಕೆ ಯಶ್​ ಅಭಿಮಾನಿಗಳ ಎಂಟ್ರಿಯಾಗಿತ್ತು. ಇದರ ನಡುವೆ ನಟ ದರ್ಶನ್ 'ಬಾಸ್' ನಂಬರಿನ ಅಭಿಮಾನಿಯೊಬ್ಬರ ಬೈಕ್ ಒಂದನ್ನು ಓಡಿಸುವ ಮೂಲಕ ನಾನೇ ಸ್ಯಾಂಡಲ್​ವುಡ್ ಬಾಸ್ ಎಂದು ಸಾರಿದ್ದರು.

ಡಿ ಫ್ಯಾನ್ಸ್ ಕೂಡ ದರ್ಶನ್ ಅವರ ಮನೆಯ ಮುಂದೆ ರಸ್ತೆಗೆ ಹೂವಿನಿಂದ 'ಬಾಸ್' ಎಂದು ಅಲಂಕಾರ ಮಾಡುವ ಮೂಲಕ ಸಂಭ್ರಮಿಸಿದ್ದರು. ಅನಾವಶ್ಯಕವಾಗಿ ಸೃಷ್ಟಿಯಾದ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಯತ್ನವನ್ನು ಮಾಡಿದ ಶಿವರಾಜ್ ಕುಮಾರ್, ಪ್ರತಿಯೊಬ್ಬ ಅಭಿಮಾನಿಗಳಿಗೆ ಅವರ ನೆಚ್ಚಿನ ನಟನೇ 'ಬಾಸ್' ಎಂದು ಹೇಳಿಕೆ ನೀಡಿದ್ದರು.

ಈ ವಿವಾದ ನಿಧಾನವಾಗಿ ಸೋಷಿಯಲ್ ಮೀಡಿಯಾದಿಂದ ಮರೆಯಾಗುತ್ತಿದ್ದಂತೆ ಇದೀಗ ಗೋಲ್ಡನ್ ಸ್ಟಾರ್ ಫ್ಯಾನ್ಸ್ ಎಂಟ್ರಿಯಾಗಿದೆ. ಹುಟ್ಟುಹಬ್ಬಕ್ಕೆ ಗಣೇಶ್ ಅವರಿಗೆ ಅರ್ಪಿಸಿರುವ ಗೀತೆಯಲ್ಲಿ 'ಬಾಸ್ ಬಗ್ಗೆ ಮಾತಾಡಿದ್ರೆ ಯಾರಾದ್ರು.. ನಿಂತಿರ್ತಿವಿ ಹುಷಾರು...ನಮ್ ಬಾಸೇ ಯಾವತ್ತಿದ್ರೂ ಟಾಪರು... ಅನ್ನೋ ಸಾಹಿತ್ಯ ಬಳಸಿ ಹೆಜ್ಜೆ ಹಾಕಿದ್ದಾರೆ.
Loading...


ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇತರೆ ನಟರ ಕೆಲ ಅಭಿಮಾನಿಗಳ ಎಂಟ್ರಿಯಾಗಿದೆ. ಅಲ್ಲದೆ 'ಸ್ಯಾಂಡಲ್​ವುಡ್ ಬಾಸ್' ಯಾರೆಂಬ ಎಂಬ ವಿತಂಡ ವಾದವನ್ನು ಮಂಡಿಸಲು ಪ್ರಾರಂಭಿಸಿದ್ದಾರೆ. ಕೊನೆ ದಿನಗಳ ತನಕ ಮರೆಯಾಗಿದ್ದ ಬಾಸ್ ಚರ್ಚೆ ಇದೀಗ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಮೂಲಕ ಮರುಹುಟ್ಟು ಪಡೆದುಕೊಂಡಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...