Puneeth Rajkumar: ಗುರುವಾರವೇ ಲಕ್ಕಿಮ್ಯಾನ್ ದರ್ಶನ; ಟಿಕೆಟ್​ಗೆ ಭರ್ಜರಿ ಡಿಮ್ಯಾಂಡ್!

ಶುಕ್ರವಾರ ರಾಜ್ಯಾದ್ಯಂತ ಲಕ್ಕಿ ಮ್ಯಾನ್​ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಗುರುವಾರವೇ ಲಕ್ಕಿಮ್ಯಾನ್ ಮೈಸೂರು ಹಾಗೂ ಬೆಂಗಳೂರಿನಲ್ಲಿ ದರ್ಶನ ಕೊಡಲಿದ್ದಾರೆ. ಲಕ್ಕಿಮ್ಯಾನ್ ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳು ಒಂದು ದಿನ ಮೊದಲೇ ಶುರುವಾಗಲಿದೆ.

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

  • Share this:
ಬಹುನಿರೀಕ್ಷಿತ ಲಕ್ಕಿಮ್ಯಾನ್​​ ನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ.  ಲವ್​ ಮಾಕ್ಟೇಲ್​’ (Love Mocktailಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman)  ಟೀಸರ್ (Teaser)ಗೆಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಮತ್ತೆ ಅಭಿಮಾನಿಗಳು ಅಪ್ಪು ಅವರನ್ನು ಟೀಸರ್​ನಲ್ಲಿ ಕಂಡು ಕಣ್ತುಂಬಿ ಕೊಂಡಿದ್ದರು. ಇದೀಗ ಇದೇ ಶುಕ್ರವಾರ ಲಕ್ಕಿಮ್ಯಾನ್ ಚಿತ್ರ ತೆರೆಗೆ ಬರ್ತಿದೆ.   ಆದರೆ ಅದಕ್ಕಿಂತ ಒಂದು ದಿನ ಮೊದಲು ಬೆಂಗಳೂರು, ಮೈಸೂರಿನಲ್ಲಿ ಪ್ರೀಮಿಯರ್‌ ಶೋಗಳು ನಡೆಯಲಿದೆ. ಈಗಾಗಲೇ ಪ್ರೀಮಿಯರ್ ಶೋಗಳ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. 

ಪ್ರಭುದೇವ್, ಪುನೀತ್​ ಭರ್ಜರಿ ಸ್ಟೆಪ್​

ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭುದೇವ ಹಾಗೂ ಪವರ್ ಸ್ಟಾರ್ ಹಾಡೊಂದಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಅಪ್ಪು-ಪ್ರಭು ಡ್ಯಾನ್ಸ್ ಮಾಡಿರೋ ಬಾರೋ ರಾಜಾ ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಅದರ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿತ್ತು. ಅಪ್ಪು ಅಭಿಮಾನಿಗಳು ಈ ಸಣ್ಣ ವಿಡಿಯೋವನ್ನು ಮುಗಿಬಿದ್ದು ವೀಕ್ಷಿಸಿದ್ರು. ಇದೀಗ ತೆರೆಮೇಲೆ ತಮ್ಮ ಆರಾಧ್ಯ ದೈವ ಅಪ್ಪು ನೋಡಲು ಕಾತುರದಿಂದ ಕಾಯ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

ದೇವರಾಗಿ ಪುನೀತ್​ ದರ್ಶನ

ಪುನೀತ್ ರಾಜ್‌ಕುಮಾರ್ ದೇವರಾಗಿ ಬಹಳ ವಿಶೇಷ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಸ್, ಟೀಸರ್ ಹಾಗೂ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸಾಕ್ಷ್ಯಚಿತ್ರ 'ಗಂಧದಗುಡಿ' ಬಿಟ್ಟರೆ ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಅಪ್ಪು ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾಯುತ್ತಿದ್ದಾರೆ.

ತಮಿಳಿನ ಓ ಮೈ ಕಡವುಲೆ ರೀಮೆಕ್ ಆಗಿರುವ ಲಕ್ಕಿಮ್ಯಾನ್ ಚಿತ್ರಕ್ಕೆ ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ ಬಂಡವಾಳ ಹೂಡಿದ್ದಾರೆ. ನಾಗಭೂಷಣ್, ಸುಂದರ್‌ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಚಿತ್ರದ ತಾರಾ ಬಳಗದಲ್ಲಿ ಇದ್ದಾರೆ.

Luckyman Kannada film teaser released fans are happy to see puneeth rajkumar on screen
ಲಕ್ಕಿಮ್ಯಾನ್​


ಗುರುವಾರವೇ ಲಕ್ಕಿ ಮ್ಯಾನ್ ದರ್ಶನ 

ಶುಕ್ರವಾರ ರಾಜ್ಯಾದ್ಯಂತ ಲಕ್ಕಿ ಮ್ಯಾನ್​ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಗುರುವಾರವೇ ಲಕ್ಕಿಮ್ಯಾನ್ ಮೈಸೂರು ಹಾಗೂ ಬೆಂಗಳೂರಿನಲ್ಲಿ ದರ್ಶನ ಕೊಡಲಿದ್ದಾರೆ. ಲಕ್ಕಿಮ್ಯಾನ್ ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳು ಒಂದು ದಿನ ಮೊದಲೇ ಶುರುವಾಗಲಿದೆ. ಗುರುವಾರ ಸಂಜೆ ಪ್ರೇಕ್ಷಕರು ಸಿನಿಮಾ ನೋಡಬಹುದು. ಈಗಾಗಲೇ ಮೈಸೂರಿನ ಡಿಆರ್‌ಸಿ, ವುಡ್‌ಲ್ಯಾಂಡ್ಸ್ ಥಿಯೇಟರ್‌ಗಳು ಹಾಗೂ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ತಲಾ ಒಂದೊಂದು ಶೋಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇದನ್ನೂ ಓದಿ:Dhananjay: ನಟ ಧನಂಜಯ್​ಗೆ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಸ್ಪೆಷಲ್​ ವಿಶ್; ಡಾಲಿ ಅಭಿಮಾನಿಗಳಿಗೆ ಬರ್ತಡೇ ಗಿಫ್ಟ್​!

ಎಲ್ಲೆಡೆ ಲಕ್ಕಿಮ್ಯಾನ್ ಕಟೌಟ್ ವಾರಕ್ಕೂ ಮೊದಲೇ ಲಕ್ಕಿಮ್ಯಾನ್ ಸಿನಿಮಾ ಕಟೌಟ್‌ಗಳು ಸಿದ್ಧವಾಗ್ತಿದೆ. ಸದಾಶಿವನಗರದ ಪುನೀತ್ ರಾಜ್‌ಕುಮಾರ್ ನಿವಾಸದ ಸಮೀಪದಲ್ಲೂ ಒಂದು ಕಟೌಟ್ ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ವಿತರಣೆ ಹಕ್ಕು ಖರೀದಿಸಿದ ಜಾಕ್‌ ಮಂಜು 

ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್‌ ಮಂಜು ಲಕ್ಕಿಮ್ಯಾನ್ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್‌ಸೀಸ್‌ ಥ್ರಿಯೇಟ್ರಿಕಲ್ ರೈಟ್ಸ್‌  ಭಾರೀ ಮೊತ್ತದಲ್ಲಿ ಖರೀದಿಯಾಗಿದೆ.
Published by:Pavana HS
First published: