• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Sridevi-Boney Kapoor: ಬೋನಿ ಕಪೂರ್‌ರನ್ನು ಕಾಡ್ತಿದೆ ನಟಿ ಶ್ರೀದೇವಿ ನೆನಪು! ಹಳೇ ಫೋಟೋ ಜೊತೆಗೆ ಲವ್ ಸ್ಟೋರಿ ನೆನಪಿಸಿಕೊಂಡ ನಿರ್ಮಾಪಕ

Sridevi-Boney Kapoor: ಬೋನಿ ಕಪೂರ್‌ರನ್ನು ಕಾಡ್ತಿದೆ ನಟಿ ಶ್ರೀದೇವಿ ನೆನಪು! ಹಳೇ ಫೋಟೋ ಜೊತೆಗೆ ಲವ್ ಸ್ಟೋರಿ ನೆನಪಿಸಿಕೊಂಡ ನಿರ್ಮಾಪಕ

ಶ್ರೀದೇವಿ, ಬೋನಿ ಕಪೂರ್​

ಶ್ರೀದೇವಿ, ಬೋನಿ ಕಪೂರ್​

ಶ್ರೀದೇವಿ ಅವರೊಂದಿಗಿನ ಬೋನಿ ಕಪೂರ್ ತೆಗೆಸಿಕೊಂಡ ಮೊದಲ ಫೋಟೋವನ್ನು ನಿರ್ಮಾಪಕ ಬೋನಿ ಕಪೂರ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಶ್ರೀದೇವಿ ನೆನಪು ಬೋನಿ ಕಪೂರ್​​ನನ್ನು ಕಾಡ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ.

 • Trending Desk
 • 2-MIN READ
 • Last Updated :
 • Share this:

  ನಟಿ ಶ್ರೀದೇವಿ (Actress Sridevi) ನಿಧನರಾಗಿ 5 ವರ್ಷವಾದರೂ ಸಹ  ಅವರ ಗಂಡ, ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್ (Boney Kapoor) ಮತ್ತು ಮಗಳು ಜಾಹ್ನವಿ ಕಪೂರ್ (Janhvi Kapoor) ದಿವಂಗತ ನಟಿಯ ಜೊತೆಗೆ ಕಳೆದಿರುವ ಒಂದಲ್ಲ ಒಂದು ಸಂದರ್ಭವನ್ನು ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು. ಈಗ ಮತ್ತೊಮ್ಮೆ ದಿವಂಗತ ನಟಿಯ ಪತಿ ಬೋನಿ ಕಪೂರ್ ಅವರು ತಮ್ಮ ಆಲ್ಬಂನಲ್ಲಿರುವ ಮತ್ತೊಂದು ಥ್ರೋಬ್ಯಾಕ್ ಫೋಟೋವನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.


  ಇವರು ಈಗ ಹಂಚಿಕೊಂಡಿರುವ ಫೋಟೋ ತುಂಬಾನೇ ಹಳೆಯದಾಗಿದ್ದು, ಇದರಲ್ಲಿ ಬೋನಿ ಅವರ ದಿವಂಗತ ಪತ್ನಿ ಶ್ರೀದೇವಿ ಅವರನ್ನು ಸಹ ನಾವು ನೋಡಬಹುದು.
  ಇದು ಬೋನಿ ಕಪೂರ್ ಮತ್ತು ಶ್ರೀದೇವಿಯವರ ಮೊದಲ ಫೋಟೋವಂತೆ..


  ಅವರ ಇತ್ತೀಚಿನ ಅಪ್ಲೋಡ್ ನಲ್ಲಿ ಅಂತಹದ್ದೇನು ವಿಶೇಷವಿದೆ ಅಂತೀರಾ? ಯಾರಾದರೂ ಇದರ ಬಗ್ಗೆ ಏನು ವಿಶೇಷತೆ ಇದೆ ಅಂತ ಊಹೆ ಮಾಡಬಹುದೇ? ಇದು ನಟಿಯೊಂದಿಗಿನ ಅವರ ಮೊದಲ ಫೋಟೋವಂತೆ. ಇದು ಆಗಿನ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಆಗಿರುವುದರಿಂದ ಕಪ್ಪು ಮತ್ತು ಬಿಳುಪಿನ ಫ್ರೇಮ್ ನಲ್ಲಿದೆ, ಇಬ್ಬರೂ ಕ್ಯಾಮೆರಾಗೆ ಪೋಸ್ ನೀಡುವಾಗ ನಗುತ್ತಿರುವುದನ್ನು ಇದರಲ್ಲಿ ನಾವು ನೋಡಬಹುದು.


  ಈ ಫೋಟೋವನ್ನು ಇವರಿಬ್ಬರು 1984 ರಲ್ಲಿ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೋನಿ ಕಪೂರ್, ಈ ಫೋಟೋ ಹಂಚಿಕೊಳ್ಳುವುದರ ಜೊತೆಗೆ ಅದಕ್ಕೆ ಒಂದು ಶೀರ್ಷಿಕೆಯನ್ನು ಬರೆದಿದ್ದಾರೆ ನೋಡಿ. "ನನ್ನ ಮೊದಲ ಫೋಟೋ ... 1984" ಅಂತ ಚಿಕ್ಕದಾಗಿ ಬರೆದಿದ್ದಾರೆ ಬೋನಿ.


  ಈ ಫೋಟೋವು ಇತ್ತೀಚೆಗೆ ಬಿಡುಗಡೆಯಾದ ನೆಟ್‌ಫ್ಲಿಕ್ಸ್ ನ ಡಾಕ್ಯೂ ಸರಣಿ ‘ದಿ ರೊಮ್ಯಾಂಟಿಕ್ಸ್’ ಗೆ ದಾರಿ ಮಾಡಿಕೊಟ್ಟಿತು, ಈ ಹೊಸ ಸಿರೀಸ್ ಯಶ್ ಚೋಪ್ರಾ ಅವರ ಸಿನಿಮಾ ಪರಂಪರೆಯನ್ನು ಆಚರಿಸುತ್ತದೆ ಮತ್ತು ಕಳೆದ ಐದು ದಶಕಗಳಲ್ಲಿ ಚಲನಚಿತ್ರ ನಿರ್ಮಾಪಕರು ಹಿಂದಿ ಚಿತ್ರರಂಗದ ಮೇಲೆ ಬೀರಿದ ಪ್ರಭಾವವನ್ನು ತುಂಬಾನೇ ಸುಂದರವಾಗಿ ತೋರಿಸಿದೆ ಅಂತ ಹೇಳಲಾಗುತ್ತಿದೆ.


  ಶ್ರೀದೇವಿ-ಬೋನಿ ಮೊದಲ ಫೋಟೋಗೆ ಕೆಂಪು ಹೃದಯದ ಎಮೋಜಿಗಳನ್ನು ಹಾಕಿದ ಅಭಿಮಾನಿಗಳು..


  ಶ್ರೀದೇವಿ ಅವರೊಂದಿಗಿನ ಬೋನಿ ಕಪೂರ್ ತೆಗೆಸಿಕೊಂಡ ಮೊದಲ ಫೋಟೋವನ್ನು ನಿರ್ಮಾಪಕ ಬೋನಿ ಕಪೂರ್ ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕಾಮೆಂಟ್ ಗಳ ವಿಭಾಗವನ್ನು ಕೆಂಪು ಹೃದಯಗಳು ಮತ್ತು ಫೈರ್ ಎಮೋಜಿಗಳಿಂದ ತುಂಬಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಶ್ರೀದೇವಿ ಅವರು 2018 ರ ಫೆಬ್ರವರಿಯಲ್ಲಿ ದುಬೈನಲ್ಲಿ ಕುಟುಂಬ ವಿವಾಹದಲ್ಲಿ ಭಾಗವಹಿಸಲು ಹೋದಾಗ ನಿಧನರಾಗಿದ್ದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಹಿರಿಯ ನಟಿ ಲಮ್ಹೆ, ಚಾಂದನಿ, ಮಿಸ್ಟರ್ ಇಂಡಿಯಾ, ಜುದಾಯಿ, ಖುದಾ ಗವಾ, ನಗಿನಾ ಮತ್ತು ಸದ್ಮಾ ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


  ಶ್ರೀದೇವಿಯ ಸುಂದರವಾದ ಫೋಟೋಗಳನ್ನು ಹಂಚಿಕೊಂಡ ಪತಿ


  ಶ್ರೀದೇವಿಯ 5ನೇ ಪುಣ್ಯತಿಥಿಯ ಅಂಗವಾಗಿ, ಬೋನಿ ಕಪೂರ್ ನಟಿಯ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ."ನೀವು 5 ವರ್ಷಗಳ ಹಿಂದೆ ನಮ್ಮನ್ನು ತೊರೆದಿದ್ದೀರಿ... ನಿಮ್ಮ ಪ್ರೀತಿ ಮತ್ತು ನೆನಪುಗಳು ನಮ್ಮ ಜೊತೆಗಿವೆ ಮತ್ತು ಎಂದೆಂದಿಗೂ ನಮ್ಮೊಂದಿಗೆ ಈ ನೆನಪುಗಳು ಇರುತ್ತವೆ” ಎಂದು ಬರೆದಿದ್ದಾರೆ.


  ಇದನ್ನೂ ಓದಿ: Samantha: ಸಮಂತಾ ಕೈಗಳಿಂದ ಸುರೀತಿದೆ ರಕ್ತ! ಅಯ್ಯೋ ಸ್ಯಾಮ್​ಗೆ ಏನಾಯ್ತು ಅಂತಿದ್ದಾರೆ ಫ್ಯಾನ್ಸ್


  ಈ ಪೋಸ್ಟ್ ನ ಅಡಿಯಲ್ಲಿ ಕಾಮೆಂಟ್ ಮಾಡಿದ ಮೊದಲಿಗರಲ್ಲಿ ಸಂಜಯ್ ಕಪೂರ್ ಕೂಡ ಒಬ್ಬರು. ಅವರು ಕೆಂಪು ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಫಾಲೋ-ಅಪ್ ಪೋಸ್ಟ್ ನಲ್ಲಿ ಬೋನಿ ಕಪೂರ್ ಶ್ರೀದೇವಿ "ನಮ್ಮನ್ನು ನೋಡುತ್ತಿದ್ದಾರೆ" ಎಂದು ಹೇಳಿದರು. ಈಗ, ಶ್ರೀದೇವಿ ಪೋಸ್ ನೀಡಿದ "ಕೊನೆಯ ಚಿತ್ರ" ನೋಡಿ.


  ಇದನ್ನು ಬೋನಿ ಕಪೂರ್ ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ತಮ್ಮ ಮಗಳು ಖುಷಿ ಕಪೂರ್, ಬೋನಿ ಕಪೂರ್ ಸಹೋದರಿ ರೀನಾ ಕಪೂರ್ ಮತ್ತು ಕೆಲವು ಅತಿಥಿಗಳೊಂದಿಗೆ ಫ್ರೇಮ್ ಅನ್ನು ಹಂಚಿಕೊಂಡಿದ್ದಾರೆ.
  ಶ್ರೀದೇವಿ ಅವರ ಜೀವನಚರಿತ್ರೆ 'ಶ್ರೀದೇವಿ: ದಿ ಲೈಫ್ ಆಫ್ ಎ ಲೆಜೆಂಡ್' ನ ಪ್ರಕಟಣೆಯ ಹಕ್ಕುಗಳನ್ನು ವೆಸ್ಟ್ಲ್ಯಾಂಡ್ ಬುಕ್ಸ್ ಪಡೆದುಕೊಂಡಿದೆ ಎಂದು ಬೋನಿ ಕಪೂರ್ ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು. ಈ ಪುಸ್ತಕವನ್ನು ಧೀರಜ್ ಕುಮಾರ್ ಬರೆಯಲಿದ್ದಾರೆ.

  Published by:ಪಾವನ ಎಚ್ ಎಸ್
  First published: