ಸೂಪರ್ ಸ್ಟಾರ್(Super Star) ರಜಿನಿಕಾಂತ್ ಅಂದರೆ ಭಾರತೀಯ ಚಿತ್ರರಂಗ(Indian Cinema Industry)ದ ಧ್ರುವತಾರೆ(Polar Star). ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್ (Craze) ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್ (Rajinikanth). ಇವರ ಸಿನಿಮಾ ರಿಲೀಸ್ ಇರಲಿ, ಹೊಸ ಸಿನಿಮಾ ಸೆಟ್ಟೇರಿದರೂ ಸಾಕು ಅವರ ಅಭಿಮಾನಿಗಳು ಹಬ್ಬ(Festival)ವನ್ನೇ ಮಾಡುತ್ತಾರೆ. ಕೇವಲ ಫ್ಯಾನ್ಸ್ ಅಷ್ಟೇ ಅಲ್ಲ ನಿರ್ಮಾಪಕರು(Producers) ಕೂಡ ತಲೈವಾ ಜೊತೆ ಸಿನಿಮಾ ಮಾಡಲು ಕ್ಯೂನಲ್ಲಿ ನಿಂತಿರುತ್ತಾರೆ. ರಜನಿಕಾಂತ್ ಕಾಲ್ಶೀಟ್(Call Sheet)ಗಾಗಿ ಮನೆ ಬಾಗಿಲಲ್ಲೇ ಕಾಯುತ್ತಿರುತ್ತಾರೆ. ಯಾಕೆ ಗೊತ್ತಾ? ರಜನಿಕಾಂತ್ ಸಿನಿಮಾ ಒಂದು ವೇಳೆ ಹಿಟ್ ಆಗಲಿಲ್ಲ ಅಂದರೆ, ನಷ್ಟವನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರೇ ತುಂಬಿಕೊಡುತ್ತಾರೆ. ನಿರ್ಮಾಪಕ ಅನ್ನ ಹಾಕುವ ದೇವರು(God), ಅವರಿಗೆ ನಷ್ಟ ಆಗಬಾರದು ಎನ್ನುವುದು ರಜನಿ ಮಾತು. ಇದಕ್ಕೋಸ್ಕರವೇ ರಜನಿ ಜೊತೆ ಸಿನಿಮಾ ಮಾಡಲು ತಾ ಮುಂದೆ ನಾ ಮುಂದೆ ಎನ್ನುತ್ತಾರೆ ನಿರ್ಮಾಪಕರು.
ರಜನಿ ಸಿನಿಮಾ ರಿಜೆಕ್ಟ್ ಮಾಡಿದ ಬೋನಿ ಕಪೂರ್!
ಹೌದು, ರಜನಿಕಾಂತ್ ತಮ್ಮ 170 ನೇ ಸಿನಿಮಾವನ್ನುಅರುಣ್ ರಾಜ ಕಾಮರಾಜ್ ಜೊತೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.ಈ ಸಿನಿಮಾಗೆ ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ನಾಯಕ ನಟರು ಸಿನಿಮಾ ರಿಜೆಕ್ಟ್ ಮಾಡುವುದನ್ನು ಕೇಳಿದ್ದೀರಾ.. ನೋಡಿದ್ದೀರಾ.. ಆದರೆ, ಇಲ್ಲಿ ಉಲ್ಟಾ ಆಗಿದೆ. ರಜನಿಕಾಂತ್ ಸಿನಿಮಾವನ್ನೇ ಬೋನಿ ಕಪೂರ್ ರಿಜೆಕ್ಟ್ ಮಾಡಿದ್ದಾರೆ.
ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟ ಬೋನಿ ಕಪೂರ್!
ನಾನು, ರಜನಿಕಾಂತ್ ಅವರು ತುಂಬಾ ಒಳ್ಳೆ ಸ್ನೇಹಿತರು. ನಾವು ಸಿಕ್ಕಾಗೆಲ್ಲ ಸಿನಿಮಾ ಬಗ್ಗೆಯೆ ಮಾತನಾಡುತ್ತೇವೆ. ಒಂದು ವೇಳೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾದರೆ, ಮೊದಲಿಗೆ ನಾನೇ ನಿಮಗೆ ತಿಳಿಸುತ್ತೆನೆ ಎಂದು ಬೋನಿ ಕಪೂರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕಂಡು ರಜನಿ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಈ ಟ್ವೀಟ್ ಇಟ್ಟುಕೊಂಡು ಹಲವಾರು ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ಧಾರೆ.
Rajni Garu has been a friend for years. We meet regularly and keep exchanging ideas. Whenever we finalise a film to work together on, I shall be the first person to announce it. You will not have to get such ‘leaked ideas’.
— Boney Kapoor (@BoneyKapoor) February 20, 2022
ಇದನ್ನೂ ಓದಿ: ಮತ್ತೊಬ್ಬ ಯುವ ನಿರ್ದೇಶಕನಿಗೆ ಕಾಲ್ಶಿಟ್ ಕೊಟ್ಟ ರಜನಿಕಾಂತ್.. ಇದು ಬೇರೆ ಲೆವೆಲ್ ಸಿನಿಮಾ ಅಂತೆ!
ತಲೈವಾರ್ 170ಗೆ ಅರುಣ್ ರಾಜ್ ಕುಮಾರ್ ನಿರ್ದೇಶನ
ರಜನಿಕಾಂತ್ ಅವರ 170ನೇ ಸಿನಿಮಾಗೆ ಅರುಣ್ ರಾಜ ಕಾಮರಾಜ್ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಫೈನಲ್ ಆಗಿದೆ. ಈ ಹಿಂದೆ ನಾಯಕಿ ಪ್ರಧಾನ ಸಿನಿಮಾವಾದ ‘ಕನಾ’ ಸಿನಿಮಾವನ್ನು ಕಾಮರಾಜ್ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ‘ನೆಂಜುಕು ನೀಧಿ’ ಎಂಬ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದರು. ಜೊತೆಗೆ ಅರುಣ್ ರಾಜ್ ಕಾಮರಾಜ್ ಹಾಡುಗಾರ ಕೂಡ ಹೌದು, ಡಿಮೇಟ್ ಕಾಲೋನಿ ಸಿನಿಮಾದಲ್ಲಿ ಹಾಡಿದ್ದಾರೆ. ಇದೀಗ ರಜನಿಕಾಂತ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.
நாலு நாள்ல பட ரிலீஸ வச்சிட்டு கண்டவனுககூட நமக்கு சண்ட தேவையா மாம்ஸ் 😑 pic.twitter.com/HBjLS4KqFw
— 🌾 விவசாயி முருகன் 🌾 (@itismurugan04) February 20, 2022
ಇದನ್ನೂ ಓದಿ: `ಬೀಸ್ಟ್’ ನಿರ್ದೇಶಕನ ಜೊತೆ ರಜನಿಕಾಂತ್ ನೆಕ್ಸ್ಟ್ ಸಿನಿಮಾ.. ತಲೈವಾಗೆ ಹೇಳಿ ಮಾಡಿಸಿದ ಕಥೆಯಂತೆ!
ಬೋನಿ ಕಪೂರ್ ನಿರ್ಮಾಣದ ಸಿನಿಮಾ ‘ವಲಿಮೈ’
ಇನ್ನೂ ಬೋನಿ ಕಪೂರ್ ಯಾವಾಗ ರಜನಿ ಜೊತೆ ಸಿನಿಮಾ ಮಾಡುತ್ತಿಲ್ಲ ಎಂದಿದ್ದಾರೋ ಫುಲ್ ಟ್ರೋಲ್ ಆಗುತ್ತಿದ್ದಾರೆ. ನಾಳೆ ಅಜಿತ್ ನಟನೆಯ ಬೋನಿ ಕಪೂರ್ ನಿಮಾರ್ಣದ ‘ವಲಿಮೈ’ ಸಿನಿಮಾ ತೆರೆಕಾಣುತ್ತಿದೆ. ‘ಆ ಸಿನಿಮಾಗೆ ನೀವು ದುಡ್ಡು ಹಾಕುತ್ತೀರಾ. ರಜನಿ ಸಿನಿಮಾಗೆ ಹಾಕಲ್ವಾ?’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ