• Home
  • »
  • News
  • »
  • entertainment
  • »
  • Alia Bhatt: ‘ಗಂಗೂಬಾಯಿ‘ಗೆ ಕೊನೆಗೂ ರಿಲೀಫ್, ಬಾಂಬೆ ಹೈಕೋರ್ಟ್​ನಿಂದ ಅರ್ಜಿ ವಜಾ ಫೆ.25ಕ್ಕೆ ಸಿನಿಮಾ ರಿಲೀಸ್ ಪಕ್ಕಾ

Alia Bhatt: ‘ಗಂಗೂಬಾಯಿ‘ಗೆ ಕೊನೆಗೂ ರಿಲೀಫ್, ಬಾಂಬೆ ಹೈಕೋರ್ಟ್​ನಿಂದ ಅರ್ಜಿ ವಜಾ ಫೆ.25ಕ್ಕೆ ಸಿನಿಮಾ ರಿಲೀಸ್ ಪಕ್ಕಾ

ನಟಿ ಆಲಿಯಾ ಭಟ್

ನಟಿ ಆಲಿಯಾ ಭಟ್

'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್, ಚಿತ್ರ ರಿಲೀಸ್​ಗಿದ್ದ ಅಡ್ಡಿ ಆತಂಕ ದೂರ

  • Share this:

'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi)ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ (Bombay HC), ಚಿತ್ರದ ವಿರುದ್ಧದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿದೆ.  55 ಇತರ ಕಾಮಾಟಿಪುರ (Kamatipura) ನಿವಾಸಿಗಳ ಪರವಾಗಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಚಲನಚಿತ್ರದಿಂದಾಗಿ, ಆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು "ವೇಶ್ಯೆ ಎಂದು ಕರೆಯಲಾಗುವುದು ಮತ್ತು ಕುಟುಂಬಗಳು ಕಡಿಮೆ ಘನತೆಯಿಂದ ಬದುಕಬೇಕಾಗುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ (Amin Patel) ಕೂಡ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (PIL) ಸಲ್ಲಿಸಿದ್ದರು. ಈ ಕಥೆ ಕಥಿಯಾವಾಡಿ ಸಮುದಾಯ ಅಥವಾ ಯಾವುದೇ ಮಹಿಳೆಯನ್ನು ಕೆಟ್ಟದಾಗಿ ತೋರಿಸಲು ಉದ್ದೇಶಿಸಿಲ್ಲ ಎಂದು ಚಿತ್ರತಂಡ ಸ್ಪಷ್ಟೀಕರಣ ನೀಡಿದೆ.


ಚಿತ್ರ ನಿರ್ಮಾಪಕರಿಂದ ಸ್ಪಷ್ಟೀಕರಣ


ಯಾವುದೇ ಸಂದರ್ಭದಲ್ಲಿ ಕೃತಿಯು ಕಾಮಾಟಿಪುರದ ಸಂಪೂರ್ಣ ಪ್ರದೇಶವನ್ನು ಕೆಂಪು ದೀಪದ ಪ್ರದೇಶ ಎಂದು ಸೂಚಿಸುವುದಿಲ್ಲ ಎಂದು ಚಿತ್ರ ನಿರ್ಮಾಪಕರು ಸ್ಪಷ್ಟಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.ಈ ಎರಡು ಅರ್ಜಿಗಳಷ್ಟೇ ಅಲ್ಲ, ಟ್ರೇಲರ್‌ನಲ್ಲಿರುವ ದೃಶ್ಯವು ಈಶಾನ್ಯ ಜನರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಗೂಬಾಯಿ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.


ಫೆ.25ರಂದು ದೇಶಾದ್ಯಂತ ಸಿನಿಮಾ ರಿಲೀಸ್​


ಫೆ.25ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ಗಂಗೂಬಾಯಿ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಗಂಗೂಬಾಯಿ ಅವರ ಮೊಮ್ಮಗಳು ಭಾರತಿ ಆರೋಪ ಮಾಡಿದ್ದಾರೆ. ಅಲ್ಲದೇ ಹಣದಾಸೆಗೆ ಚಿತ್ರದಲ್ಲಿ ಸತ್ಯ ಮರೆಮಾಚಿ ತೇಜೋವಧೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: http://Alia Bhatt: ಮುಗಿಯದ `ಗಂಗೂಬಾಯಿ’ ಸಂಕಷ್ಟ! ಕೋರ್ಟ್ ಮೆಟ್ಟಿಲೇರಿದ ಕಾಮಾಟಿಪುರದ ಶಾಸಕ


ಬಾಂಬೆ ಹೈ ಕೋರ್ಟ್​ನಲ್ಲಿ ಅರ್ಜಿ ಹಾಕಿದ ಶಾಸಕ ಅಮಿನ್ !


ಹೌದು, ಗಂಗೂಬಾಯಿ ಕಾಥಿಯಾವಾಡಿ ಸಿನಿಮಾಗೆ ತಡೆ ಕೋರಿ, ಶಾಸಕ ಅಮಿನ್ ಪಟೇಲ್ ಹಾಗೂ ಕಾಮಾಟಿಪುರದ ನಿವಾಸಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ರು. ಕಾಮಾಟಿಪುರದಲ್ಲಿ ಈ ಹಿಂದೆ ಹಲವು ವೇಶ್ಯಾಗೃಹಗಳಿದ್ದವು. ಆದರೆ ಕಾಲಾಂತರದಲ್ಲಿ ಎಲ್ಲವೂ ನಿಷ್ಕಿಯವಾದವು. ಹಿಂದೆ ಕಾಮಾಟಿಪುರದ ರಾಣಿಯಂತಿದ್ದ ಗಂಗೂಬಾಯಿಯ ನಿಜ ಜೀವನದ ಕತೆಯನ್ನೇ ಆಧರಿಸಿ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ಮಾಡಲಾಗಿದೆ.


ಸಿನಿಮಾ ಕನಸು ಹೊತ್ತು ಬಂದ ಯುವತಿಯ ಕಥೆ!


ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.


ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್


ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ


ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡಿರುವ ಬಾಬು ರಾವ್‍ಜೀ ಶಾ ಮತ್ತು ಮೊಮ್ಮಗಳು ಭಾರತಿ ಚಿತ್ರದ ಟ್ರೇಲರ್ ನೋಡಿ ಕೋಪಕೊಂಡಿದ್ದಾರೆ.“ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಜನರು ಈಗ ನನ್ನ ತಾಯಿಯ ಬಗ್ಗೆ  ಇಲ್ಲ ಸಲ್ಲದ ಮಾತುಗಳನ್ನು ಆಡತೊಡಗಿದ್ದಾರೆ” ಎಂದು ಬಾಬು ರಾವ್‍ಜೀ ಶಾ ಮಾಧ್ಯಮವೊಂದಕ್ಕೆ ತಿಳಿಸಿದ್ರು. 2020ರಲ್ಲಿ, ಗಂಗೂಬಾಯಿ ಅವರ ಕುರಿತು ಸಿನಿಮಾ ಮಾಡಲಾಗುತ್ತಿದೆ ಎಂಬುವುದು ಗೊತ್ತಾದ ದಿನದಿಂದ, ಆಕೆಯ ಕುಟುಂಬ ತಲೆ ಮರೆಸಿಕೊಳ್ಳುತ್ತಾ ಮತ್ತು ಮನೆಗಳನ್ನು ಬದಲಾಯಿಸುತ್ತಾ ಬಂದಿದೆ ಎಂದು ಆ ಕುಟುಂಬದ ವಕೀಲ ನರೇಂದ್ರ ಹೇಳಿದ್ರು

Published by:Pavana HS
First published: