Rajinikanth: ಮನೆಯನ್ನು ಸ್ಪೋಟಿಸುತ್ತೇವೆ ಎಂದು ಸೂಪರ್ ಸ್ಟಾರ್ ರಜನಿ​ಕಾಂತ್​ಗೆ ಬೆದರಿಕೆ..!

ರಜನಿಕಾಂತ್ ಸಿರುತೈ ಶಿವ ನಿರ್ದೇಶನದ ಅಣ್ಣಾತೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದು, ಲಾಕ್​ಡೌನ್ ಕಾರಣದಿಂದ ಸಿನಿಮಾ ಶೂಟಿಂಗ್​ಗೆ ಬ್ರೇಕ್ ನೀಡಲಾಗಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬೂ, ಸೂರಿ, ಪ್ರಕಾಶ್ ರಾಜ್, ಸಿದ್ದಾರ್ಥ್ ದೊಡ್ಡ ತಾರಾ ಬಳಗವೇ ಕಾಣಿಸಿಕೊಳ್ಳಲಿದೆ.

ರಜನಿಕಾಂತ್

ರಜನಿಕಾಂತ್

 • Share this:
  ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ರಜನಿ ಮನೆಯನ್ನು ಪೊಲೀಸರು ಶೋಧಿಸಿದ್ದು, ಆ ಬಳಿಕ ಇದೊಂದು ಹುಸಿ ಕರೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

  ರಾಜ್ಯದೆಲ್ಲೆಡೆ ಕೊರೋನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ರಜನಿಕಾಂತ್ ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯುತ್ತಿರುವುದನ್ನು ವಿರೋಧಿಸಿದ್ದರು. ಅಲ್ಲದೆ ಮದ್ಯದ ಅಂಗಡಿ ಓಪನ್ ಮಾಡಿದ್ರೆ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾರೋ ಹುಸಿ ಕರೆ ಮಾಡಿ ಬೆದರಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಪೊಲೀಸರು.

  ಇನ್ನು ಮನೆಯನ್ನು ಸ್ಪೋಟಿಸುವುದಾಗಿ ಕರೆ ಮಾಡಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬೆದರಿಕೆಯೊಡ್ಡಿದವನನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಇನ್ನು ರಜನಿಕಾಂತ್​ಗೆ ಬೆದರಿಕೆ ಸುದ್ದಿ ಹೊರಬರುತ್ತಿದ್ದಂತೆ, ಸೂಪರ್ ಸ್ಟಾರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

  ಸದ್ಯ ರಜನಿಕಾಂತ್ ಸಿರುತೈ ಶಿವ ನಿರ್ದೇಶನದ ಅಣ್ಣಾತೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದು, ಲಾಕ್​ಡೌನ್ ಕಾರಣದಿಂದ ಸಿನಿಮಾ ಶೂಟಿಂಗ್​ಗೆ ಬ್ರೇಕ್ ನೀಡಲಾಗಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬೂ, ಸೂರಿ, ಪ್ರಕಾಶ್ ರಾಜ್, ಸಿದ್ದಾರ್ಥ್ ದೊಡ್ಡ ತಾರಾ ಬಳಗವೇ ಕಾಣಿಸಿಕೊಳ್ಳಲಿದೆ.
  First published: