Thalapathy Vijay: ದಳಪತಿ ವಿಜಯ್​ ಮನೆಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ!

Vijay: ನಟ ದಳಪತಿ ವಿಜಯ್​ ಚೆನ್ನೈನ ಸಾಲಿಗ್ರಾಮ್​ನಲ್ಲಿ ವಾಸಿಸುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬ ನಡುರಾತ್ರಿ ಅಲ್ಲಿನ ಪೊಲೀಸರಿಗೆ ಕರೆ ಮಾಡಿ ವಿಜಯ್​ ಮನೆಗೆ ಬಾಂಬ್​ ಇಟ್ಟಿದ್ದೇನೆ ಎಂದು ಕರೆಯಲ್ಲಿ ಹೇಳುತ್ತಾನೆ. ತಕ್ಷಣವೇ ಪೊಲೀಸರು ಎಚ್ಚೆತ್ತುಕೊಂಡು ವಿಜಯ್​ ಮನೆಗೆ ತೆರಳುತ್ತಾರೆ. ನಡುರಾತ್ರಿಯೇ ವಿಜಯ್​ ಅವರ ಮನೆಯನ್ನೆಲ್ಲಾ ಹುಡುಕಾಡುತ್ತಾರೆ. ಕೊನೆಗೆ ಇದೊಂದು ಹುಸಿ ಬಾಂಬ್​ ಕರೆ ಎಂದು ತಿಳಿದು ಬರುತ್ತದೆ.

news18-kannada
Updated:July 5, 2020, 8:56 PM IST
Thalapathy Vijay: ದಳಪತಿ ವಿಜಯ್​ ಮನೆಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ!
ದಳಪತಿ ವಿಜಯ್
  • Share this:
ಇತ್ತೀಚೆಗೆ ತಮಿಳಿನ ಸೂಪರ್​ ಸ್ಟಾರ್​ ರಜನಿ ಕಾಂತ್​ ಮನೆಗೆ ಕರೆಯೊಂದು ಬರುತ್ತದೆ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಹಾಕುತ್ತಾನೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಜನಿಕಾಂತ್​​​ ಅವರ ಮನೆಯನ್ನು ಪರೀಕ್ಷಿಸುತ್ತಾರೆ. ಆನಂತರ ಅದು ಹುಸಿ ಬಾಂಬ್​ ಕರೆ ಎಂದು ತಿಳಿದುಬರುತ್ತದೆ. ಅಷ್ಟಕ್ಕೆ ಸುಮ್ಮನಾಗದ ಪೊಲೀಸರು ಆ ಹುಸಿ ಬಾಂಬ್​ ಕರೆ ಮಾಡಿದ ವ್ಯಕ್ತಿಯ ಮೂಲವನ್ನು ಹುಡುಕಲು ಮುಂದಾಗುತ್ತಾರೆ. ಆದರೆ ಕೊನೆಗೆ ಸಿಕ್ಕಿದ್ದು 8ನೇ ತರಗತಿ ವಿದ್ಯಾರ್ಥಿ!. ಇದೀಗ ಅಂತಹದೇ ಮತ್ತೊಂದು ಘಟನೆ ನಟ ದಳಪತಿ ವಿಜಯ್​ಗೂ ಎದುರಾಗಿದೆ. ಮನೆಗೆ ಬಾಂಬ್​ ಇಡುವಂತೆ ಹುಸಿ ಕರೆಯೊಂದು ಬಂದಿದೆ.

ನಟ ದಳಪತಿ ವಿಜಯ್​ ಚೆನ್ನೈನ ಸಾಲಿಗ್ರಾಮ್​ನಲ್ಲಿ ವಾಸಿಸುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬ ನಡುರಾತ್ರಿ ಅಲ್ಲಿನ ಪೊಲೀಸರಿಗೆ ಕರೆ ಮಾಡಿ ವಿಜಯ್​ ಮನೆಗೆ ಬಾಂಬ್​ ಇಟ್ಟಿದ್ದೇನೆ ಎಂದು ಕರೆಯಲ್ಲಿ ಹೇಳುತ್ತಾನೆ. ತಕ್ಷಣವೇ ಪೊಲೀಸರು ಎಚ್ಚೆತ್ತುಕೊಂಡು ವಿಜಯ್​ ಮನೆಗೆ ತೆರಳುತ್ತಾರೆ. ನಡುರಾತ್ರಿಯೇ ವಿಜಯ್​ ಅವರ ಮನೆಯನ್ನೆಲ್ಲಾ ಹುಡುಕಾಡುತ್ತಾರೆ. ಕೊನೆಗೆ ಇದೊಂದು ಹುಸಿ ಬಾಂಬ್​ ಕರೆ ಎಂದು ತಿಳಿದು ಬರುತ್ತದೆ.ಅಷ್ಟಕ್ಕೂ ಪೊಲೀಸರು ಸುಮ್ಮನಾಗಲಿಲ್ಲ. ಫೋನ್​ ಕರೆಯ ಮೂಲವನ್ನು ಕಂಡು ಹಿಡಿಯಲು ಮುಂದಾಗುತ್ತಾರೆ. ಕೊನೆಗೆ ಹುಸಿ ಬಾಂಬ್​ ಕರೆ ಮಾಡಿದ್ದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಮಿಲ್ಲುಪುರಂನ ಮೂಲದ 21 ವರ್ಷದ ಯುವಕ ಈ ಕರೆ ಮಾಡಿದ್ದಾನೆ. ಆದರೆ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು,  ಈ ಹಿಂದೆಯೂ ಸಾಕಷ್ಟು ಹುಸಿ ಕರೆಯನ್ನು ಮಾಡಿದ್ದಾನೆ.

ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯ ಲಲಿತಾ, ಪುದುಚೆರಿ ಮುಖ್ಯಮಂತ್ರಿಯಾದ ನಾರಾಯಣ ಸ್ವಾಮಿ, ಗವರ್ನರ್​​​ ಕಿರಣ್​ ಬೇಡಿ ಅವರ ಮನೆಗೆ ಕರೆ ಮಾಡಿ ಬಾಂಬ್​​ ಇಟ್ಟಿರುವುದಾಗಿ ಹೇಳಿದ್ದ.

ಮನೆಯವರು ಪೋನ್​ ತೆಗೆದು ಅದರ ಮೂಲಕ ಕರೆ ಮಾಡಿ ಈ ರೀತಿಯ ಹುಸಿ ಬಾಂಬ್​ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ವಿಚಾರಣೆ ವೇಳೆ ತಿಳಿದುಬಂದಿದೆ.

Sushant Singh: ಸುಶಾಂತ್​ ಸಿಂಗ್​ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೆಚಾರ‘ ಟ್ರೇಲರ್​ ಬಿಡುಗಡೆಗೆ ಡೇಟ್​ ಫಿಕ್ಸ್​​! 

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಜ್​ ಬಿ ಶೆಟ್ಟಿ; ವೆಟರ್ನರಿ ಡಾಕ್ಟರ್​ಗೆ 777 ಚಾರ್ಲಿ ಚಿತ್ರತಂಡದಿಂದ ಹೀಗೊಂದು ಉಡುಗೊರೆ
Published by: Harshith AS
First published: July 5, 2020, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading