news18 Updated:July 18, 2020, 10:24 PM IST
ನಟ ಅಜಿತ್
- News18
- Last Updated:
July 18, 2020, 10:24 PM IST
ಇತ್ತೀಚಿನ ದಿನಗಳಲ್ಲಿ ಕಾಲಿವುಡ್ ನಟರ ಮನೆಗೆ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿವೆ. ಕಳೆದ ಒಂದು ತಿಂಗಳಿನ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆನಂತರ ದಳಪತಿ ವಿಜಯ್ಗೂ ಇಂತಹದೇ ಕರೆಯೊಂದು ಬಂದಿತ್ತು . ಇದೀಗ ನಟ ಅಜಿತ್ ಮನೆಗೂ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಕರೆಯೊಂದು ಬಂದಿದೆ.
ಅನಾಮಿಕ ವ್ಯಕ್ತಿಯೊಬ್ಬ ಚೆನ್ನೈ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ, ನಟ ಅಜಿತ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳುತ್ತಾನೆ. ನಂತರ ತಕ್ಷಣ ಫೋನ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ.
ಅನಾಮಿಕ ವ್ಯಕ್ತಿಯ ಫೋನ್ ಕರೆಗೆ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಇಂಜಂಬಕ್ಕಮ್ನಲ್ಲಿರುವ ಅಜಿತ್ ಮನೆಗೆ ಧಾವಿಸಿ ಶೋಧ ಕಾರ್ಯ ನಡೆಸಿದ್ದಾರೆ. ಗಂಟೆಗಳ ಕಾಲ ಪರಿಶೀಲಿಸಿದ್ದಾರೆ. ನಂತರ ಇದೊಂದು ಹುಸಿ ಕರೆ ಎಂದು ತಿಳಿದುಬಂದಿದೆ.
ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆ ಕರೆ ಎಲ್ಲಿಂದ ಬಂದಿದೆ ಎಂದು ತಿಳಿಯಲು ಮುಂದಾಗುತ್ತಾರೆ. ಅನಾಮಿಕ ವ್ಯಕ್ತಿ ತಮಿಳುನಾಡಿನ ಮಿಲ್ಲುಪುರಂ ಜಿಲ್ಲೆಯಿಂದ ಕರೆ ಮಾಡಿದ್ದಾನೆ. ಆದರೆ ಆತ ಯಾರೆಂಬುದು ತಿಳಿದುಬಂದಿಲ್ಲ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಳೆದ ತಿಂಗಳು ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಜನಿಕಾಂತ್ ಅವರ ಮನೆಯನ್ನು ಪರೀಕ್ಷಿಸುತ್ತಾರೆ. ಆನಂತರ ಅದು ಹುಸಿ ಬಾಂಬ್ ಕರೆ ಎಂದು ತಿಳಿದುಬರುತ್ತದೆ. ಅಷ್ಟಕ್ಕೆ ಸುಮ್ಮನಾಗದ ಪೊಲೀಸರು ಆ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯ ಮೂಲವನ್ನು ಹುಡುಕಲು ಮುಂದಾಗುತ್ತಾರೆ. ಕೊನೆಗೆ ಕರೆ ಮಾಡಿದ್ದು, 8ನೇ ತರಗತಿ ವಿದ್ಯಾರ್ಥಿ ಎಂದು ತಿಳಿದು ಬರುತ್ತದೆ.
ಅದರಂತೆ ಜು. 5 ರಂದು ನಟ ವಿಜಯ್ ಮನೆಗೂ ಬಾಂಬ್ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಹುಸಿ ಕರೆ ಮಾಡಿದ್ದ. ಅನಂತರ ತನಿಖೆ ಬಿಗಿಗೊಳಿಸಿದ ಪೊಲೀಸರು ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚುತ್ತಾರೆ. ಮಿಲ್ಲುಪುರಂನ ಮೂಲದ 21 ವರ್ಷದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಯುವಕನೋರ್ವ ಹುಸಿ ಕರೆ ಮಾಡಿದ್ದು ಎಂದು ತಿಳಿದು ಬರುತ್ತದೆ.
Published by:
Harshith AS
First published:
July 18, 2020, 10:24 PM IST