Hero: ರಿಷಭ್​ ಶೆಟ್ಟಿ ಅಭಿನಯದ ಹೀರೋ ಶೂಟಿಂಗ್ ವೇಳೆ ಅವಘಡ: ವಿಡಿಯೋ ವೈರಲ್​..!

Rishab Shetty: ಸಿನಿಮಾ ರಿಲೀಸ್​ಗೆ ನಾಲ್ಕು ದಿನಗಳು ಬಾಕಿ ಉಳಿದಿರುವಾಗಲೇ ಹೀರೋ ಸಿನಿಮಾಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಅದು ಚಿತ್ರೀಕರಣದಲ್ಲಿ ಬಾಂಬ್​ ಸಿಡಿಯುವ ದೃಶ್ಯವೊಂದು ಇದೆ. ಇದರ ಶೂಟಿಂಗ್​ ವೇಳೆ ನಡೆದಿರುವ ಎಡವಟ್ಟಿನ ವಿಡಿಯೋ ಇದಾಗಿದೆ. 

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ-ಗಾನವಿ ಲಕ್ಷ್ಮಣ್​

ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ-ಗಾನವಿ ಲಕ್ಷ್ಮಣ್​

  • Share this:
ರಿಷಭ್​ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಸಿನಿಮಾ ಹೀರೋ. ಇನ್ನೇನು ಈ ಸಿನಿಮಾದ ಬಿಡುಗಡೆಗೆ ದಿನ ಗಣನೆ ಆರಂಭವಾಗಿದೆ. ಸಿನಿಮಾದ ಟ್ರೇಲರ್​ ಹಾಗೂ ಹಾಡುಗಳನ್ನು ನೋಡಿದ ನಂತರ ಸಿನಿಪ್ರಿಯರಲ್ಲಿ ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇದೇ ತಿಂಗಳು ಅಂದರೆ ಮಾ.5ರಂದು ಹೀರೋ ಸಿನಿಮಾ ರಿಲೀಸ್ ಆಗಲಿದೆ. ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲೂ ಹೀರೋ ಅಬ್ಬರಿಸಲಿದ್ದಾನೆ. ಇದೇ ಶುಕ್ರವಾರ ಬಿಡುಗಡೆಯಾಗಲಿರುವ ಶೆಟ್ರ ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ರಿಷಭ್​ ಶೆಟ್ಟಿ ಹಾಗೂ ಅವರ ತಂಡ  ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ನಿತ್ಯ ಒಂದೊಂದು ಹೊಸ ವಿಡಿಯೋ ಹಾಗೂ ತಂತ್ರಗಳೊಂದಿಗೆ ಸಮಾಜಿಕ ಜಾಲತಾಣದಲ್ಲಿ ಜನರನ್ನು ತಲುಪ ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ಈ ಸಿನಿಮಾ ರೊಮ್ಯಾಂಟಿಕ್​ ಹಾಡನ್ನೂ ಸಹ ರಿಲೀಸ್​  ಮಾಡಲಾಗಿತ್ತು. 

ಸಿನಿಮಾ ರಿಲೀಸ್​ಗೆ ನಾಲ್ಕು ದಿನಗಳು ಬಾಕಿ ಉಳಿದಿರುವಾಗಲೇ ಹೀರೋ ಸಿನಿಮಾಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಅದು ಚಿತ್ರೀಕರಣದಲ್ಲಿ ಬಾಂಬ್​ ಸಿಡಿಯುವ ದೃಶ್ಯವೊಂದು ಇದೆ. ಇದರ ಶೂಟಿಂಗ್​ ವೇಳೆ ನಡೆದಿರುವ ಎಡವಟ್ಟಿನ ವಿಡಿಯೋ ಇದಾಗಿದೆ.

Hero Movie Bomb blast video, Rishab Shetty injured in bomb blast, ಹೀರೋ ಸಿನಿಮಾದ ಬಾಂಬ್​ ಬ್ಲಾಸ್ಟ್ ವಿಡಿಯೋ, ಪಾರಾದ ರಿಷಭ್ ಶೆಟ್ಟಿ, Hero Movie release date, Ganavi Lakshman, hero releasing on march 5th, Hero Movie Trailer, rishabs hetty films, ರಿಷಭ್​ ಶೆಟ್ಟಿ, ಹೀರೋ ಸಿನಿಮಾ, ಮಾರ್ಚ್​ 5ಕ್ಕೆ ಹೀರೋ ಎಂಟ್ರಿ, ganavi laxman, ಹೀರೋ ಸಿನಿಮಾ ಟ್ರೇಲರ್​, ರಿಷಭ್​ ಶೆಟ್ಟಿ, ಗಾನವಿ ಲಕ್ಷ್ಮಣ್​, ಅಜನೀಶ್​ ಲೋಕನಾಥ್​, ajaneesh lokanath, Bharat Raj M Director, hero movie, m, Rishab shetty movies, hero movie, rishab shetty starrer new movie, Rishab Shetty starrer hero movie first look and title poster is released, sandalwood, first look poster of hero, ಹೀರೋ, ರಿಷಭ್​ ಶೆಟ್ಟಿ ಸಿನಿಮಾ, ಸ್ಯಾಂಡಲ್​ವುಡ್​, ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ, ಭರತ್​ ರಾಜ್​ ಎಂ ನಿರ್ದೇಶನ ಸಿನಿಮಾ ಹೀರೋ, rishab shetty, Rachana Inder, thapaswini poonacha, thapaswini poonacha photos, thapaswini poonacha instagram, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, ರಿಷಭ್​ ಶೆಟ್ಟಿ, ಸ್ಯಾಂಡಲ್​ವುಡ್​, ರಣ್​ವಿತ್ ಶೆಟ್ಟಿ, ಶ್ರೀಕೃಷ್ಣ ಜನ್ಮಾಷ್ಠಮಿ, ರಣ್​ವಿತ್ ಶೆಟ್ಟಿಯ ಕ್ಯೂಟ್​ ಫೋಟೋಗಳು, ಹರಿಕಥೆ ಅಲ್ಲ ಗಿರಿಕಥೆ, ತಪಸ್ವಿನಿ ಪೂಣಚ್ಚ, ರಚನಾ ಇಂದರ್​
ಹೀರೋ ಸಿನಿಮಾದಲ್ಲಿ ರಿಷಭ್​ ಶೆಟ್ಟಿ-ಗಾನವಿ ಲಕ್ಷ್ಮಣ್​


ಈ ಹಿಂದೆ ರಿಲೀಸ್ ಆದ ಸಿನಿಮಾದ ಟ್ರೇಲರ್​ನಲ್ಲೂ ಈ ದೃಶ್ಯವಿದೆ. ಇದರಲ್ಲಿ ನಾಯಕಿ ಗಾನವಿ ಲಕ್ಷ್ಮಣ್​ ಹಾಗೂ ರಿಷಭ್​ ಶೆಟ್ಟಿ ಪುಟ್ಟ ಕಾಲುವೆಯೊಂದರಲ್ಲಿ ಧುಮುಕುತ್ತಾರೆ. ಆಗಲೇ ಅಲ್ಲಿ ಬಾಂಬ್​ ಸಿಡಿಯುತ್ತದೆ.ಸದ್ಯ ಲೀಕ್​ ಆಗಿರುವ ವಿಡಿಯೋದಲ್ಲಿ ಈ ಬಾಂಬ್​ ಸಿಡಿಯುವ ದೃಶ್ಯದ ಕೊಂಚ ಮುಂದುವರಿದ ಭಾಗವೂ ಕಾಣ ಸಿಗುತ್ತದೆ. ಬಾಂಬ್​ ಸಿಡಿಯುತ್ತಿದ್ದಂತೆಯೇ ಅದರ ಬೆಂಕಿ ರಿಷಭ್​ ಶೆಟ್ಟಿ ಅವರ ಬೆನ್ನಿಗೂ ತಾಗುತ್ತದೆ. ಆದರೆ ಅದೃಷ್ಟವಶಾತ್​ ಯಾವುದೇ ಅನಾಹುತ ಆಗುವುದಿಲ್ಲ. ಈ ಘಟನೆ ನಡೆದಾಗ ರಿಷಭ್​ ತಕ್ಷಣ ಎಚ್ಚೆತ್ತುಕೊಂಡು ಕೆಸರಿಗೆ ಧುಮುಕಿದ್ರಿಂದ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತದೆ.ಇದು ಬೇಲೂರಿನ ಬಳಿ ಶೂಟಿಂಗ್ ನಡೆಸುತ್ತಿದ್ದ ವೇಳೆ ನಡೆದ ಘಟನೆಯಾಗಿದೆ. ಕಳೆದ ಜುಲೈನಲ್ಲಿ ನಡೆದ ಚಿತ್ರೀಕರಣದ ವೇಳೆ ಆಗಿರುವ ಅವಘಡ. ಸಾಹಸ ನಿರ್ದೇಶಕ ವಿಕ್ರಂ ನೇತೃತ್ವದಲ್ಲಿ ಶೂಟಿಂಗ್ ನಡೆದಿತ್ತು. ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ರೂ ಕೊನೆಯ ಕ್ಷಣದಲ್ಲಿ ಈ ಎಡವಟ್ಟಾಗಿ. ಆ ವೇಳೆ ರಿಷಭ್ ಜೊತೆ ಗಾನವಿ ಲಕ್ಷ್ಮಣ್​ ಸಹ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ರು. ಈ ಘಟನೆಯಲ್ಲಿ ರಿಷಭ್​ ಅವರ ಬೆನ್ನಿಗೆ ಸ್ವಲ್ಪ ಸುಟ್ಟ ಗಾಯಗಳಾಗಿವೆ ಎಂದೂ ಹೇಳಲಾಗುತ್ತಿದೆ.

ಜುಲೈನಲ್ಲಿ ಆಗಿರುವ ಸಿನಿಮಾದ ಈ ವಿಡಿಯೋ ಈಗ ಇದ್ದಕ್ಕಿದ್ದಂತೆ ಹರಿದಾಡಲಾರಂಭಿಸಿದೆ. ಇನ್ನು ಈ ಸಿನಿಮಾದಲ್ಲಿ ಪ್ರಮೋದ್​ ಶೆಟ್ಟಿ ವಿಲನ್​ ಪಾತ್ರದಲ್ಲಿ ನಟಿಸಿದ್ದಾರೆ. ರಿಷಭ್​ ಶೆಟ್ಟಿ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್​ ಎಂ ನಿರ್ದೇಶಿಸಿದ್ದಾರೆ. ಭರತ್​ ರಾಜ್​ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ.

ಇದನ್ನೂಓದಿ: Hero The Film: ಇಂದು ರಿಲೀಸ್ ಆಗಲಿದೆ ಹೀರೋ ಸಿನಿಮಾದ ಹಾಡು ನೆನಪಿನ ಹುಡುಗಿಯೇ..!

ಇನ್ನು ರಿಷಭ್​ ಶೆಟ್ಟಿ ಸದ್ಯ ಹರಿಕಥೆ ಅಲ್ಲ ಗಿರಿಕಥೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಿಷಭ್​ ಶೆಟ್ಟಿ ಅವರ ಕೈಯಲ್ಲಿರುವ ಪ್ರಾಜೆಕ್ಟ್​ಗಳ ವಿಷಯಕ್ಕೆ ಬಂದರೆ, ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಬೆಲ್‌ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Published by:Anitha E
First published: