• Home
  • »
  • News
  • »
  • entertainment
  • »
  • Arun Bali Passes away: ರಶ್ಮಿಕಾ ಜೊತೆ ಗುಡ್​​ ಬೈನಲ್ಲಿ ನಟಿಸಿದ್ದ ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇನ್ನಿಲ್ಲ

Arun Bali Passes away: ರಶ್ಮಿಕಾ ಜೊತೆ ಗುಡ್​​ ಬೈನಲ್ಲಿ ನಟಿಸಿದ್ದ ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇನ್ನಿಲ್ಲ

ಅರುಣ್ ಬಾಲಿ

ಅರುಣ್ ಬಾಲಿ

ಬಾಲಿವುಡ್ ಹಿರಿಯ ನಟ ಅರುಣ್ ಬಾಲಿ ಅವರು ತಮ್ಮ ಕೊನೆಯ ಸಿನಿಮಾ ಗುಡ್ ಬೈ ರಿಲೀಸ್ ದಿನವೇ ನಿಧನರಾಗಿದ್ದಾರೆ. ಅವರ ಅಭಿಮಾನಿಗಳು ಹಿರಿಯ ನಟನ ಕಳೆದುಕೊಂಡು ಕಂಬನಿ ಮಿಡಿಯುತ್ತಿದ್ದಾರೆ.

  • Share this:

ಸ್ವಾಭಿಮಾನ್ ಚಿತ್ರದಲ್ಲಿ ಕುನ್ವರ್ ಸಿಂಗ್ ಪಾತ್ರ ಮಾಡಿ ಖ್ಯಾತಿ ಗಳಿಸಿ ಹೆಸರುವಾಸಿಯಾಗಿದ್ದ ಹಿರಿಯ ನಟ ಅರುಣ್ ಬಾಲಿ (Arun Bali) ಶುಕ್ರವಾರ 79 ನೇ ವಯಸ್ಸಿನಲ್ಲಿ ನಿಧನರಾದರು. ಸುದ್ದಿ ಸಂಸ್ಥೆ ANI ಪ್ರಕಾರ, ನಟ ಮುಂಬೈನಲ್ಲಿ  (Mumbai) ನಿಧನರಾದರು. ಅವರ ಕೊನೆಯ ಚಿತ್ರ ಗುಡ್ ಬೈ (Good Bye) ಅಕ್ಟೋಬರ್ 7 ರಂದು (ಇಂದು) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅವರ ನಿಧನದ ಸುದ್ದಿ ತಿಳಿದ ಅಭಿಮಾನಿಗಳು ಟ್ವಿಟರ್‌ನಲ್ಲಿ (Twitter) ನಿಧನರಾದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. ಪ್ರತಿ ಪಾತ್ರದಲ್ಲೂ ತುಂಬಾ ಚೆನ್ನಾಗಿ ಅವರು ಕಾಣಿಸಿಕೊಂಡಿದ್ದರು ಎಂದು ಅಭಿಮಾನಿಯೊಬ್ಬರು ಟ್ವೀಟ್ (Tweet) ಮಾಡಿದ್ದಾರೆ. ಅವರು ಅಂತಹ ಸಹಜ ನಟ. RIP ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅವರು ಜೀವನ್ಮರಣದ ಹೋರಾಟವನ್ನು ನೋಡಿದರು. ರೀಲ್‌ನಲ್ಲಿ ಬದುಕುಳಿದರು, ಆದರೆ ಸಿನಿಮಾ ಬಿಡುಗಡೆಯ ದಿನದಂದು ಅವರು ನಮಗೆ ವಿದಾಯ ಹೇಳಿದರು ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.


ಶುಕ್ರವಾರ ಬಿಡುಗಡೆಯಾದ ಗುಡ್ ಬೈ ಚಿತ್ರದಲ್ಲಿ ಅರುಣ್ ಬಾಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ, ಸುನಿಲ್ ಗ್ರೋವರ್, ಪಾವೈಲ್ ಗುಲಾಟಿ, ಆಶಿಶ್ ವಿದ್ಯಾರ್ಥಿ, ಎಲ್ಲಿ ಅವ್ರಾಮ್, ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಅಭಿಷೇಖ್ ಖಾನ್ ನಟಿಸಿದ್ದಾರೆ.

Published by:Divya D
First published: