ಬಾಲಿವುಡ್‌ನಲ್ಲಿ ದಿ ಕೇರಳ ಸ್ಟೋರಿ ರಿಲೀಸ್ (The Kerala Story Movie) ಆಗಿದೆ. ವಿವಾದಾತ್ಮಕ ಸಿನಿಮಾ ಅನ್ನುವ ಹಣೆ ಪಟ್ಟಿನೂ ಚಿತ್ರಕ್ಕಿದೆ. ಆದರೆ ರಿಲೀಸ್ ಮುಂಚೇನೆ ಹೀಗೆಲ್ಲ ವಿವಾದ ಎಬ್ಬಿಸಿದ್ದ ಈ ಚಿತ್ರದ ಬಗ್ಗೆ ಒಂದು ಅನುಮಾನ ಕೂಡ (Vipul Amrutlal Shah) ಇತ್ತು. ಚಿತ್ರದ ಪ್ರಚಾರಕ್ಕೆ ಹೀಗೆಲ್ಲ ಸಿನಿಮಾ ತಂಡ ಮಾಡ್ತಿದೆ ಅನ್ನುವ ಗುಮಾನಿ ಅದಾಗಿತ್ತು. ಆದರೆ ಸಿನಿಮಾ ಬಂದ್ಮೇಲೆ ಆಗಿರೋದೇ ಬೇರೆ. ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ (Bollywood The Kerala Story) ಬಂದಿದೆ. ಹೆಣ್ಣುಮಕ್ಕಳ ಪೋಷಕರಿಗೆ ಒಂದು ಎಚ್ಚರಿಕೆ ಸಂದೇಶವನ್ನು ಚಿತ್ರ ನೀಡಿದೆ. ಇದಕ್ಕೂ ಹೆಚ್ಚಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಇದರಿಂದ (The Kerala Story Review) ಚಿತ್ರದ ನಿರ್ಮಾಪಕ ಫುಲ್ ಖುಷ್ ಆಗಿದ್ದಾರೆ.
ಆ ಖುಷಿಯನ್ನ ವಿಡಿಯೋ ಮೂಲಕ ಇದೀಗ ಹಂಚಿಕೊಂಡಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರಕ್ಕೆ ಅತ್ಯುತ್ತಮ ವಿಶ್ಲೇಷಣೆ
ದಿ ಕೇರಳ ಸ್ಟೋರಿ ನಿಜಕ್ಕೂ ಒಳ್ಳೆ ಸಂದೇಶ ಇರೋ ಸಿನಿಮಾ ಅನ್ನುವ ರಿವ್ಯೂ ಬಂದಿದೆ. ಮೊದಲ ದಿನವೇ ಚಿತ್ರ ಅತ್ಯುತ್ತಮ ವಿಶ್ಲೇಷಣೆ ಕೂಡ ಪಡೆದುಕೊಂಡಿದೆ. ಇದರಿಂದ ಇಡೀ ಸಿನಿಮಾ ಟೀಮ್ ಫುಲ್ ಖುಷಿಯಲ್ಲಿಯೇ ಇದೆ.
ದಿ ಕೇರಳ ಸ್ಟೋರಿ-ಜನ ಮೆಚ್ಚುತ್ತಿರೋ ಸಿನಿಮಾ
ಚಿತ್ರದಲ್ಲಿರೋ ಕಂಟೆಂಟ್‌ನಿಂದ ಸಿನಿಮಾ ರಿಲೀಸ್ ಆಗ್ತದೋ ಇಲ್ವೋ ಅನ್ನೋ ಡೌಟ್ ಇತ್ತು. ಆದರೂ ಸಿನಿಮಾ ಎಲ್ಲೆಡೆ ರಿಲೀಸ್ ಆಗಿದೆ. ಜನರಿಂದ ಮತ್ತು ವಿಮರ್ಶಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡು ಎಲ್ಲರ ಮನದಲ್ಲಿ ಜಾಗೃತಿ ಮೂಡಿಸಿದೆ.
ಚಿತ್ರದಲ್ಲಿ ಐಸಿಸ್ ಸೇರೋ ಹೆಣ್ಣುಮಕ್ಕಳ ಅಸಲಿ ಕಥೆ
ಡೈರೆಕ್ಟರ್ ಸುದಿಪ್ತೋ ಸೇನ್ ತಮ್ಮ ಈ ಚಿತ್ರದಲ್ಲಿ ಐಸಿಸ್ ಸೇರೋ ಹಿಂದೂ ಯುವತಿಯರ ಕಥೆ ಹೇಳಿದ್ದಾರೆ. ಅವರು ಹೇಗೆಲ್ಲ ಮುಸ್ಲಿಂ ಧರ್ಮಕ್ಕೆ ಮಾತಾಂತರ ಹೊಂದುತ್ತಾರೆ ಅನ್ನೋದು ಕೂಡ ಇಲ್ಲಿ ಚಿತ್ರಿತವಾಗಿದೆ. ಇಷ್ಟೆ ಅಲ್ಲ, ಲವ್ ಜಿಹಾದ್ ಸತ್ಯವೂ ಇಲ್ಲಿ ಸ್ಪಷ್ಟವಾಗಿಯೇ ಹೇಳಲಾಗಿದೆ.
ಭಯೋತ್ಪಾದನೆಗೆ ಹೇಗೆಲ್ಲ ಹಿಂದೂ ಯುವತಿರನ್ನ ತಳ್ಳಲ್ಪಡಲಾಗುತ್ತದೆ ಅನ್ನೋದೇ ಇಡಿ ಚಿತ್ರದ ಕಥೆ ಆಗಿದೆ. ಹಾಗೇನೂ ಇಲ್ಲ, ಈ ಚಿತ್ರದಲ್ಲಿರೋದೆಲ್ಲ ಸುಳ್ಳು ಎಂದು ಕೇರಳ ಸಿ.ಎಂ ಹೇಳಿದ್ದರು. ಇಲ್ಲಿಯ ನಾಯಕರೂ ಅದನ್ನ ಹೇಳಿದ್ದರು.
— Adah Sharma (@adah_sharma) May 5, 2023
ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನ ಆಡಿದ್ದಾರೆ. ದಿ ಕೇರಳ ಸ್ಟೋರಿ ಭಯೋತ್ಪಾದನೆಯ ತಂತ್ರ-ಕುತಂತ್ರದ ಚಿತ್ರಣ ನೀಡಿದೆ. ಈ ಚಿತ್ರ ಭಯೋತ್ಪಾದನೆಯ ಅಸಲಿ ಕುತಂತ್ರವನ್ನೆ ಬಿಚ್ಚಿಟ್ಟಿದೆ.
ಕಾಂಗ್ರೆಸ್ ದಿ ಕೇರಳ ಸ್ಟೋರಿ ವಿರೋಧಿಸಿದ್ಯಾಕೆ?
ಇಂತಹ ಚಿತ್ರವನ್ನ ಕಾಂಗ್ರೆಸ್ ವಿರೋಧಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯನ್ನ ಬೆಂಬಲಸುತ್ತಿದೆ ಅಂತ ಮೋದಿ ಹೇಳಿದ್ದರು. ಮೋದಿ ಅವರ ಈ ಒಂದು ಮಾತಿನಿಂದ ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ತುಂಬಾನೇ ಖುಷಿಪಟ್ಟಿದ್ದಾರೆ.
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ನಿರ್ಮಾಪಕ ವಿಪುಲ್ ಷಾ
ಪ್ರಧಾನಿ ಮೋದಿ ಅವರು ತಮ್ಮ ಚಿತ್ರದ ಕುರಿತು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಅವರಿಗೆ ಮನದುಂಬಿ ನನ್ನ ಧನ್ಯವಾದಗಳು ಅಂತಲೂ ಹೇಳಿಕೊಂಡಿದ್ದಾರೆ. ನಮ್ಮ ಸಿನಿಮಾ ಮಹಿಳೆಯರ ಉಳಿಸುವ ಉದ್ದೇಶದ ಸಿನಿಮಾ ಆಗಿದೆ. ಹೆಣ್ಣುಮಕ್ಕಳ ರಕ್ಷಣೆಯ ವಿಚಾರವನ್ನ ಇದು ಹೇಳುತ್ತಿದೆ ಅಂತ ತಮ್ಮ ವಿಶೇಷ ವಿಡಿಯೋದಲ್ಲಿ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ತಿಳಿಸಿದ್ದಾರೆ.
ಅದಾ ಶರ್ಮಾ ಟ್ಯಾಗ್ ಮಾಡಿದ ವಿಡಿಯೋ ಯಾವುದು?
ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ಅವರ ಈ ಒಂದು ವಿಡಿಯೋವನ್ನ ಚಿತ್ರದ ನಾಯಕಿ ಅದಾ ಶರ್ಮಾ ತಮ್ಮ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿಕೊಂಡಿದ್ದಾರೆ. ಈ ಹಿಂದೇನೆ ಅದಾ ಶರ್ಮಾ ತಮ್ಮ ಚಿತ್ರ ಸೆನ್ಸಿಬಲ್ ಆಗಿಯೇ ಇದೆ.
ಇದನ್ನೂ ಓದಿ: Prabhas: ಪ್ರಭಾಸ್ ಅಭಿನಯದ ಸಲಾರ್ ಸೆಟ್ನಿಂದ ಫೋಟೋ ಲೀಕ್!
ಇದು ಯಾವುದೇ ಎಲೆಕ್ಷನ್‌ನ ಅಜೆಂಡಾ ಅಲ್ಲಾ ಅಂತ ಹೇಳಿದ್ದರು. ಇದೀಗ ನಿರ್ಮಾಪಕ ವಿಡಿಯೋ ಶೇರ್ ಮಾಡಿ ಚಿತ್ರದ ಅಸಲಿ ವಿಷಯವನ್ನ ಈ ಮೂಲಕ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ