Adah Sharma: ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ ಎನರ್ಜಿ ಸೀಕ್ರೆಟ್ ರಿವೀಲ್

ಜನ್ಮ ದಿನದ ಸಂಭ್ರಮದಲ್ಲಿ ಅದಾ ಶರ್ಮಾ ಏನ್ ಮಾಡಿದ್ರು ಗೊತ್ತೆ?

ಜನ್ಮ ದಿನದ ಸಂಭ್ರಮದಲ್ಲಿ ಅದಾ ಶರ್ಮಾ ಏನ್ ಮಾಡಿದ್ರು ಗೊತ್ತೆ?

ದಿ ಕೇರಳ ಸ್ಟೋರಿ ನಾಯಕಿ ಅದಾ ಶರ್ಮಾ ಎನರ್ಜಿಯ ಗುಟ್ಟೇನು? ಜನ್ಮ ದಿನದಂದು ಬಿಚ್ಚಿಟ್ಟ ಆ ರಹಸ್ಯ ಯಾವುದು? ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬಾಲಿವುಡ್‌ನ ದಿ ಕೇರಳ ಸ್ಟೋರಿ (Adah Sharma Video) ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ದಿನೇ ದಿನೇ ಈ ಚಿತ್ರದ ಕಲೆಕ್ಷನ್ ಕೂಡ ಜೋರಾಗುತ್ತಿದೆ. ಚಿತ್ರದ ಕಂಟೆಂಟ್ ಇಡೀ ಸಿನಿಮಾರಂಗದಲ್ಲಿ (The Keral Story Movie) ಹೊಸ ಅಲೆ ಎಬ್ಬಿಸಿದೆ. ಸಿನಿಮಾ ಪ್ರೇಮಿಗಳು ದಿ ಕೇರಳ ಸ್ಟೋರಿ ಚಿತ್ರ ನೋಡುವ ಅವಕಾಶವನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ಥಿಯೇಟರ್‌ಗೆ ಹೋಗಿಯೆ ಸಿನಿಮಾ ನೋಡುವ ಉತ್ಸಾಹದಲ್ಲಿಯೇ (Bollywood the Keral Story) ಕಂಡು ಬರುತ್ತಿದ್ದಾರೆ. ಹಾಗೇನೆ ಈ ಚಿತ್ರದ ಕಲಾವಿದರೂ ಈಗ ವಿಶೇಷವಾಗಿ ಎಲ್ಲರನ್ನ ಸೆಳೆದು ಬಿಟ್ಟಿದ್ದಾರೆ. ಅದರಲ್ಲೂ ಚಿತ್ರದ ಮುಖ್ಯ ಭೂಮಿಕೆಯಲ್ಲಿರೋ ಅದಾ ಶರ್ಮಾ  ಕೊಂಚ ಡಿಫರಂಟ್ ಆಗಿಯೇ ಇದ್ದಾರೆ. ಆಫ್‌ ಸ್ಕ್ರೀನ್ ಒಂದು ರೀತಿ ಇದ್ರೆ, ಆನ್‌ ಸ್ಕ್ರೀನ್ ಇನ್ನೂ ಒಂದು ರೀತಿ ಇರ್ತಾರೆ.


ಬಾಲಿವುಡ್ ಅದಾ ಶರ್ಮಾ ಶಿವನ ಪರಮ ಭಕ್ತೆ


ಹೌದು, ಅದಾ ಶರ್ಮಾ ಎಲ್ಲ ಕಲಾವಿದರ ರೀತಿ ಕಂಡು ಬರೋದಿಲ್ಲ. ಕೊಂಚ ಯುನಿಕ್ ಕ್ಯಾರೆಕ್ಟರ್ ಅಂತೀವಲ್ಲ ಹಾಗೆ ಇರೋದು. ಸಿಕ್ಕಾ ಪಟ್ಟೆ ಎನರ್ಜಿ ಇರೋ ಕಲಾವಿದೆ ಅಂದ್ರೆ ಯಾರೂ ತಪ್ಪು ತಿಳಿಯೋದಿಲ್ಲ. ಅಷ್ಟು ವಿಶೇಷ ಅನಿಸೋ ಅದಾ ಶರ್ಮಾ ತಮ್ಮ ಉಡುಪು ಮತ್ತು ನಡೆಯಿಂದಲೂ ಅತಿ ಹೆಚ್ಚು ಗಮನ ಸೆಳೆಯೋದು ಇದೆ.


Bollywood The Keral Story Movie Actress Adah Sharma Latest Video Viral
ಬಾಲಿವುಡ್ ಅದಾ ಶರ್ಮಾ ಶಿವನ ಪರಮ ಭಕ್ತೆ


ಅದಾ ಶರ್ಮಾ ಪ್ರಾಣಿ ಪ್ರಿಯೆ ಕೂಡ ಹೌದು, ನೆಚ್ಚಿನ ಸಾಕು ಪ್ರಾಣಿಗಳ ಜೊತೆಗೆ ಇರೋಕೆ ಹೆಚ್ಚು ಇಷ್ಟಪಡ್ತಾರೆ. ಇದಲ್ಲದೇ ಅದಾ ಶರ್ಮಾ ಮಾಡ್ರನ್ ಆಗಿಯೂ ಇದ್ದಾರೆ. ಆದರೆ ಸಂಪ್ರದಾಯಗಳೂ ಗೊತ್ತಿವೆ. ಅದರಲ್ಲೂ ಶಿವನ ಭಕ್ತ ಈ ಅದಾ ಶರ್ಮಾ ಅನ್ನೋದು ಇದೀಗ ಶೇರ್ ಆಗಿರೋ ವಿಡಿಯೋದಿಂದಲೇ ನಾವು-ನೀವು ತಿಳಿಯಬಹುದು ನೋಡಿ.




ಜನ್ಮ ದಿನದ ಸಂಭ್ರಮದಲ್ಲಿ ಅದಾ ಶರ್ಮಾ ಏನ್ ಮಾಡಿದ್ರು ಗೊತ್ತೆ?


ಅಂದ್ಹಾಗೆ ಅದಾ ಶರ್ಮಾ ಇವತ್ತು ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಮೇ-11ರಂದು ಜನ್ಮ ದಿನ ಆಚರಿಸಿಕೊಳ್ಳುವ ಅದಾ ಶರ್ಮಾ ಇದರ ಪ್ರಯುಕ್ತ ಈ ದಿನ ಶಿವನ ದೇವಸ್ಥಾನಕ್ಕೂ ಹೋಗಿದ್ದರು. ಅಲ್ಲಿ ಎಲ್ಲರಂತೆ ಪೂಜೆ ಮಾಡಿಸಿಕೊಂಡು ಪ್ರಸಾದ ಕೂಡ ಪಡೆದಿದ್ದಾರೆ.




ಆದರೆ ಅದಾ ಶರ್ಮಾ ಇಲ್ಲಿ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಶಿವನ ಆರಾಧನೆಯನ್ನ ಮಂತ್ರ ಪಠಿಸೋ ಮೂಲಕ ಇಲ್ಲಿ ಮಾಡಿದ್ದಾರೆ. ಶಿವನ ಧ್ಯಾನವನ್ನೂ ಮಾಡುತ್ತಲೇ ಜೋರು ಜೋರಾಗಿಯೇ ಮಂತ್ರ ಪಠಣ ಮಾಡಿದ್ದಾರೆ.


ಶಿವನ ಧ್ಯಾನದಲ್ಲಿ ತಲ್ಲೀನ ದಿ ಕೇರಳ ಸ್ಟೋರಿ ನಾಯಕಿ


ಇದರೊಟ್ಟಿಗೆ ಅದಾ ಶರ್ಮಾ ಇನ್ನೂ ಒಂದು ಸತ್ಯವನ್ನ ಕೂಡ ಬಿಚ್ಚಿಟ್ಟಿದ್ದಾರೆ. " ನನ್ನ ಎನರ್ಜಿಯ ರಹಸ್ಯ ಶಿವನ ಧ್ಯಾನ ಮತ್ತು ಶಿವನಿಗಾಗಿಯೇ ಪಠಿಸುವ ಮಂತ್ರವೇ ಆಗಿದೆ" ಎಂದು ಅದಾ ಶರ್ಮಾ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.









View this post on Instagram






A post shared by Adah Sharma (@adah_ki_adah)





ಇದನ್ನ ಕಂಡ ಅದಾ ಶರ್ಮಾ ಫ್ಯಾನ್ಸ್ ತುಂಬಾ ಖುಷಿಪಟ್ಟಿದ್ದಾರೆ. ಅದಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋಕ್ಕೆ ಮನದುಂಬಿ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದ್ದಾರೆ.


Bollywood The Keral Story Movie Actress Adah Sharma Latest Video Viral
ಶಿವನ ಧ್ಯಾನದಲ್ಲಿ ತಲ್ಲೀನ ದಿ ಕೇರಳ ಸ್ಟೋರಿ ನಾಯಕಿ


ಅಪ್ಪು ಜೊತೆಗೆ ಅದಾ ಶರ್ಮಾ ನಟನೆ


ಅದಾ ಶರ್ಮಾ ಸದ್ಯ ದಿ ಕೇರಳ ಸ್ಟೋರಿ ಚಿತ್ರದಿಂದಲೇ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ಉತ್ತರದ ಚಿತ್ರಗಳಲ್ಲದೇ ದಕ್ಷಿಣದ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲೂ ಅದಾ ಶರ್ಮಾ ನಟಿಸಿದ್ದಾರೆ.


ಕನ್ನಡ ಸಿನಿಮಾದ ಲೆಕ್ಕವನ್ನ ತೆಗೆದುಕೊಳ್ಳೋದಾದ್ರೆ, ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ಅಭಿನಯಿಸಿದ್ದರು.


ಇದನ್ನೂ ಓದಿ: Naveen Shankar: ಹೊಯ್ಸಳ ಚಿತ್ರದ ವಿಲನ್ ಜೊತೆ ಸ್ಪೆಷಲ್ ಟಾಕ್! ಹೊಸ ಸಿನಿಮಾ ಮಾಹಿತಿ ಕೊಟ್ಟ ನವೀನ್ ಶಂಕರ್


ಕನ್ನಡದ ಈ ಚಿತ್ರ ಆದ್ಮೇಲೆ ಬಾಲಿವುಡ್‌ನ ಅದಾ ಶರ್ಮಾ ಅವರನ್ನ ಕನ್ನಡಕ್ಕೆ ಕರೆತರೋ ಕೆಲಸ ಮತ್ಯಾರೂ ಮಾಡಲಿಲ್ಲ. ದಿ ಕೇರಳ ಸ್ಟೋರಿ ಸಿನಿಮಾ ಹಿಟ್ ಆಗಿದೆ. ಈಗ ಆ ಕೆಲಸವನ್ನ ಯಾರಾದ್ರು ಮಾಡಿದ್ರು ಮಾಡಬಹುದು ಅಂತಲೇ ಹೇಳಬಹುದು.

top videos
    First published: