• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • The Keral Story: ದಿ ಕೇರಳ ಸ್ಟೋರಿ ಕ್ರೇಜ್​, ಹುಡುಗಿಯರೇ ಹಂಚುತ್ತಿದ್ದಾರೆ ಫೋಸ್ಟರ್! ನಟಿ ಅದಾ ಏನಂದ್ರು?

The Keral Story: ದಿ ಕೇರಳ ಸ್ಟೋರಿ ಕ್ರೇಜ್​, ಹುಡುಗಿಯರೇ ಹಂಚುತ್ತಿದ್ದಾರೆ ಫೋಸ್ಟರ್! ನಟಿ ಅದಾ ಏನಂದ್ರು?

ಬೀದಿ ಗೋಡೆಗೆ ಚಿತ್ರದ ಪೋಸ್ಟರ್ ಹಚ್ಚಿದ ಹುಡುಗಿಯರು

ಬೀದಿ ಗೋಡೆಗೆ ಚಿತ್ರದ ಪೋಸ್ಟರ್ ಹಚ್ಚಿದ ಹುಡುಗಿಯರು

ದಿ ಕೇರಳ ಸ್ಟೋರಿ ಸಿನಿಮಾ ಒಂದು ವಿಡಿಯೋ ವೈರಲ್ ಆಗಿದೆ. ಇದು ನಿಜಕ್ಕೂ ವಿಶೇಷವಾಗಿಯೇ ಇದೆ. ಈ ಸ್ಪೆಷಲ್ ವಿಡಿಯೋದ ಸ್ಟೋರಿ ಇಲ್ಲಿದೆ ಓದಿ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬಾಲಿವುಡ್‌ನಲ್ಲಿ ಬೇರೆ ಯಾವುದೇ (The Keral Story Cinema) ಸಿನಿಮಾ ಚರ್ಚೆ ಸದ್ಯಕ್ಕಿಲ್ಲ. ಎಲ್ಲರ ಬಾಯಲ್ಲೂ ದಿ ಕೇರಳ ಸ್ಟೋರಿ ಚಿತ್ರದ ಮಾತಿದೆ. ಕರ್ನಾಟಕದಲ್ಲಿ ಎಲೆಕ್ಷನ್ ಸದ್ದು-ಗದ್ದಲ ಇದ್ದರೂ ಕೂಡ ಜನ ಈ ಚಿತ್ರದ ಕುರಿತು (Cinema Craze got Ful Viral) ಮಾತು ಆಡುತ್ತಿದ್ದಾರೆ. ಬೇರೆ ರಾಜ್ಯದಲ್ಲೂ ದಿ ಕೇರಳ ಸ್ಟೋರಿ ಚಿತ್ರದ ಬಗ್ಗೆ ಚರ್ಚೆ ಆಗುತ್ತಿವೆ. ಕೇರಳದಲ್ಲಂತೂ ವಿರೋಧಿಗಳೂ ಕೆಂಡಕಾರುತ್ತಿದ್ದಾರೆ. ಆದರೂ (The Kerala Story Updates) ಈ ಚಿತ್ರದ ಕ್ರೇಜ್ ಒಂಚೂರು ಕಡಿಮೆ ಆಗಿಲ್ಲ. ದಿನೇ ದಿನೇ ದಿ ಕೇರಳ ಸ್ಟೋರಿ ಕ್ರೇಜ್ ತಾರಕ್ಕೇರುತ್ತಿದೆ. ಕಲೆಕ್ಷನ್ ವಿಷಯದಲ್ಲೂ ದಿ ಕೇರಳ ಸ್ಟೋರಿ ಸೋಲು ಕಂಡಿಲ್ಲ. ಈ ಒಂದು (Adah Sharma Tweet) ಖುಷಿಯಲ್ಲಿ ಈಗ ಒಂದು ಬೆಳವಣಿಗೆ ಆಗಿದೆ.


ಟ್ವಿಟರ್‌ನಲ್ಲಿ ಶೇರ್ ಆಗಿರೋ ಆ ವಿಡಿಯೋದಲ್ಲಿ ಏನಿದೆ?


ದಿ ಕೇರಳ ಸ್ಟೋರಿ ನಾಯಕಿ ಅದಾ ಶರ್ಮಾ ಈಗೊಂದು ವಿಡಿಯೋ ನೋಡಿದ್ದಾರೆ. ಅದಕ್ಕೆ ರಿಪ್ಲೈ ಕೂಡ ಕೊಟ್ಟಿದ್ದಾರೆ. ವಿಶೇಷವೆಂದ್ರೆ ಆ ವಿಡಿಯೋ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸಂಬಂಧಿಸಿದ್ದೇ ಆಗಿದೆ.


Bollywood The Kerala Story Cinema Craze Video got Ful Viral
ದಿ ಕೇರಳ ಸ್ಟೋರಿ ಮೆಚ್ಚುತ್ತಿರೋ ಯುವತಿಯರು!


ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್‌ಗಳನ್ನ ಯುವತಿಯರು ಎಲ್ಲೆಡೆ ಅಂಟಿಸುತ್ತಿದ್ದಾರೆ. ಎಲ್ಲಿ ಸಾಧ್ಯವೋ ಅಲ್ಲಿ ಚಿತ್ರದ ಪೋಸ್ಟರ್ ಅಂಟಿಸಿ ಸಿನಿಮಾದೆಡೆಗೆ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದಾರೆ.
ಅದಾ ಶರ್ಮಾ ಹೊಸ ಟ್ವಿಟರ್ ಪೋಸ್ಟರ್ ವೈರಲ್


ಟ್ವಿಟರ್‌ನಲ್ಲಿ ಅತಿ ಹೆಚ್ಚು ಗಮನ ಸೆಳೆಯತ್ತಿರೋ ಈ ಒಂದು ವಿಡಿಯೋ ವಿಶೇಷವಾಗಿಯೇ ಇದೆ. ಅಹಮದ್ ನಗರನಲ್ಲಿ ಕೆಲವು ಯುವತಿಯರು ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್‌ನ್ನ ಎಲ್ಲೆಡೆ ಅಂಟಿಸುತ್ತಿದ್ದಾರೆ. ಇದನ್ನ ಕಂಡ ರಾಗಿಣಿ ಅನ್ನೋ ಟ್ವಿಟರ್ ಬಳಕೆದಾರೆ ಶೇರ್ ಮಾಡಿದ್ದಾರೆ.
ಹುಡುಗಿಯರೇ ನಮ್ಮ ಚಿತ್ರದ PR ಎಂದ ಅದಾ ಶರ್ಮಾ


ಅದೇ ವಿಡಿಯೋವನ್ನ ಟ್ವಿಟರ್‌ನಲ್ಲಿ ಕಂಡ ನಟಿ ಅದಾ ಶರ್ಮಾ, ಸೂಪರ್ ಆಗಿಯೇ ಒಂದು ಸಾಲು ಬರೆದಿದ್ದಾರೆ. ಅದು ಇಂತಿದೆ ನೋಡಿ. "When the audience is your films PR " ಜನ ನಿಮ್ಮ ಚಿತ್ರ ಮೆಚ್ಚಿದರೆ ಮುಗಿತು. ಅವರೇ ಚಿತ್ರವನ್ನ ಈ ರೀತಿ ಪ್ರಚಾರ ಮಾಡ್ತಾರೆ ಅನ್ನೋ ಅರ್ಥದಲ್ಲಿಯೇ ಅದಾ ಶರ್ಮಾ ಹೇಳಿಕೊಂಡಿದ್ದಾರೆ.


ದಿ ಕೇರಳ ಸ್ಟೋರಿ ಮೆಚ್ಚುತ್ತಿರೋ ಯುವತಿಯರು!


ದಿ ಕೇರಳ ಸ್ಟೋರಿ ನಿಜಕ್ಕೂ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು ಅನ್ನೋದನ್ನ ಸಾರಿ ಸಾರಿ ಹೇಳುತ್ತದೆ. ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್ ಅಷ್ಟು ಗಟ್ಟಿ ವಿಷಯವನ್ನ ಇಟ್ಟುಕೊಂಡೆ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ತೋರಿರೋ ವಿಷಯಕ್ಕೆ ಅನೇಕ ಹೆಣ್ಣುಮಕ್ಕಳು ಕನೆಕ್ಟ್ ಕೂಡ ಆಗುತ್ತಿದ್ದಾರೆ.


Bollywood The Kerala Story Cinema Craze Video got Ful Viral
ಹುಡುಗಿಯರೇ ನಮ್ಮ ಚಿತ್ರದ PR ಎಂದ ಅದಾ ಶರ್ಮಾ


ಬೀದಿ ಗೋಡೆಗೆ ಚಿತ್ರದ ಪೋಸ್ಟರ್ ಹಚ್ಚಿದ ಹುಡುಗಿಯರು


ಆದ್ದರಿಂದಲೇ ಸಿನಿಮಾದ ಮೇಲಿನ ಅಪಾರ ಪ್ರೀತಿಗೆ, ಅಹಮದ್‌ನಗರದ ಯುವತಿಯರು ಪೊಸ್ಟರ್ ಹಚ್ಚುತ್ತಿದ್ದಾರೆ.


ಇದರಿಂದ ತುಂಬಾನೇ ಖುಷಿಪಟ್ಟಿರೋ ನಾಯಕಿ ಅದಾ ಶರ್ಮಾ ತಮ್ಮ ಮನಸ್ಸಿನ ಮಾತುಗಳನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆ ಹೇಳೋದಾದ್ರೆ, ದಿ ಕೇರಳ ಸ್ಟೋರಿ ಸಿನಿಮಾ ಹೆಣ್ಣು ಮಕ್ಕಳಿಗೆ ಬಹುವಾಗಿಯೇ ಇಷ್ಟ ಆಗಿದೆ.


ದೀದಿ ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗ್ಲಿಲ್ವೇ?


ಇದರ ಹೊರತಾಗಿ ದಿ ಕೇರಳ ಸ್ಟೋರಿ ದೀದಿ ರಾಜ್ಯದಲ್ಲಿ ರಿಲೀಸ್‌ಗೆ ಅವಕಾಶ ಕೊಟ್ಟೇ ಇಲ್ಲ. ಇದರಿಂದ ಸಿನಿಮಾ ತಂಡ ಕಾನೂನು ಮೊರೆ ಹೋಗಿರೋ ಸುದ್ದಿನೂ ಇದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್‌ಗೂ ಮುಂಚೇನೆ ವಿರೋಧಗಳನ್ನ ಎದುರಿಸಿದೆ.


ಸಿನಿಮಾದ ಮೊದಲ ಟೀಸರ್ ಹೊರ ಬಂದಾಗ ಎಲ್ಲೆಡೆ ಭಾರೀ ಚರ್ಚೆ ಆಯಿತು. ಸಿನಿಮಾ ಬ್ಯಾನ್ ಮಾಡಬೇಕು ಅನ್ನೋ ಕೂಗು ಕೇರಳ ರಾಜ್ಯದಲ್ಲಿ ಕೇಳಿ ಬಂತು. ಸ್ವತಃ ಸಿ.ಎಂ. ಈ ಚಿತ್ರವನ್ನ ಬ್ಯಾನ್ ಮಾಡಬೇಕು ಅಂತ ಹೇಳಿದ್ದರು. ಆದರೆ ಕೋರ್ಟ್ ಸಿನಿಮಾ ತಂಡದ ಪರವಾಗಿಯೇ ಇತ್ತು.


ಇದನ್ನೂ ಓದಿ: Ram Gopal Varma: ಆರ್​ಜಿವಿ ಸ್ಪೆಷಲ್ ಫೋಟೋ ವೈರಲ್! ಇದ್ಯಾರಪ್ಪಾ ಜೊತೆಗಿರೋದು?


ಈ ಒಂದು ಕಾರಣದಿಂದಲೇ ದಿ ಕೇರಳ ಸ್ಟೋರಿ ಸಿನಿಮಾ ಬ್ಯಾನ್ ಆಗಲಿಲ್ಲ. ರಿಲೀಸ್ ಆದ ಮೊದಲ ದಿನ ಒಳ್ಳೆ ರಿವ್ಯೂ ಕೂಡ ಬಂದಿತ್ತು. ಆದರೆ ಕಲೆಕ್ಷನ್ ವಿಷಯದಲ್ಲಿ ನಿಧಾನಕ್ಕೆ ಇದ್ದರೂ ಈಗ ಬಲು ಜೋರಾಗಿಯೇ ಮುನ್ನುಗುತ್ತಿದೆ.

First published: