Arjun Kapoor-Malaika Arora ನಡುವೆ ಬ್ರೇಕಪ್​? ಅಂತೆ-ಕಂತೆ ಪುರಾಣ ಜಾಸ್ತಿಯಾಗೋದು ಬೇಡ ಎಂದಿದ್ಯಾಕೆ ಈ ಜೋಡಿ?

ಬ್ರೇಕಪ್ ಅನ್ನೋ ಸೌಂಡ್​ ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಅರೋರಾ(Malaika Arora) ಪ್ರೀತಿಯ ಬಂಗಲೆಯಿಂದ ಕೇಳಿ ಬರುತ್ತಿದೆ. ಆದರೆ, ಇದೆಲ್ಲಾ ಶುದ್ಧ ಸುಳ್ಳು, ನಾವ್ಯಾಕೆ ಬ್ರೇಕಪ್​ ಆಗೋಣ, ನಾವು ಯಾವಾಗ್ಲೂ ಸ್ವೀಟ್ ಕಪಲ್(Sweet Couple) ಅನ್ನೋ ರೀತಿ ಅರ್ಜುನ್​ ಕಪೂರ್ ತಮ್ಮ ಮನದನ್ನೆ ಮಲೈಕಾ ಜೊತೆಗಿನ ಫೋಟೋವನ್ನು ಇನ್​ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಲೈಕಾ ಅರೋರಾ, ಅರ್ಜುನ್​ ಕಪೂರ್​

ಮಲೈಕಾ ಅರೋರಾ, ಅರ್ಜುನ್​ ಕಪೂರ್​

  • Share this:
ಬಾಲಿವುಡ್​(Bollywood)ಗೂ ಬ್ರೇಕ​ಪ್(Breakup)​ ಸ್ಟೋರಿಗೂ ದೊಡ್ಡ ನಂಟೇ ಇದೆ. ಇಲ್ಲಿ ಡೇಟಿಂಗ್ ಎಷ್ಟು ಸದ್ದಾಗುತ್ತೋ ಬ್ರೇಕಪ್​ ಕೂಡ ಅಷ್ಟೇ ಸುದ್ದಿಯಾಗುತ್ತೆ. ಸದ್ಯ ಬ್ರೇಕಪ್ ಅನ್ನೋ ಸೌಂಡ್​ ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಅರೋರಾ(Malaika Arora) ಪ್ರೀತಿಯ ಬಂಗಲೆಯಿಂದ ಕೇಳಿ ಬರುತ್ತಿದೆ. ಆದರೆ, ಇದೆಲ್ಲಾ ಶುದ್ಧ ಸುಳ್ಳು, ನಾವ್ಯಾಕೆ ಬ್ರೇಕಪ್​ ಆಗೋಣ, ನಾವು ಯಾವಾಗ್ಲೂ ಸ್ವೀಟ್ ಕಪಲ್(Sweet Couple) ಅನ್ನೋ ರೀತಿ ಅರ್ಜುನ್​ ಕಪೂರ್ ತಮ್ಮ ಮನದನ್ನೆ ಮಲೈಕಾ ಜೊತೆಗಿನ ಫೋಟೋವನ್ನು ಇನ್​ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಇಲ್ಲಿ ಕ್ಷುಲ್ಲಕ ವದಂತಿಗಳಿಗೆ ಸ್ಥಾನವಿಲ್ಲ. ನೀವೆಲ್ಲರೂ ಸುರಕ್ಷಿತವಾಗಿರಿ, ದೇವರ ಆಶೀರ್ವಾದವಿರಲಿ, ಎಲ್ಲರಿಗೂ ಶುಭವನ್ನು ಹಾರೈಸಿ, ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ' ಎಂದು ಶೀರ್ಷಿಕೆ ನೀಡಿದ್ದಾರೆ ಅರ್ಜುನ್ ಕಪೂರ್.ಇನ್ನು ಮಲೈಕಾ ಅರೋರಾ ಈ ಪೋಸ್ಟ್​ಗೆ ಹೃದಯದ ಎಮೋಜಿ(Heart Emoji)ಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೊನೆಗೂ ಈ ಪೋಸ್ಟ್​​ನಿಂದ ತಮ್ಮ ಬ್ರೇಕಪ್ ಸ್ಟೋರಿಗೆ ತೆರೆ ಎಳೆದಿದ್ದಾರೆ ಬಾಲಿವುಡ್ ಜೋಡಿ ಹಕ್ಕಿಗಳು. ಅಂತೂ ಇಂತೂ ನಿನ್ನೆಯಿಂದ ಬಾಲಿವುಡ್ ಸೇರಿದಂತೆ ಎಲ್ಲರ ಮೊಬೈಲ್​ಗಳನ್ನು ಹ್ಯಾಂಗ್ ಮಾಡಿದ್ದ ಮಲೈಕಾ ಮತ್ತು ಅರ್ಜುನ್ ಬ್ರೇಕ್​ ಅಪ್​ ಸ್ಟೋರಿ ಶುಭಂ ಕಂಡಿದೆ.

ಗಾಸಿಪ್​ ಸುದ್ದಿಗಳಿಗೆ ಬ್ರೇಕ್​ ಹಾಕಿದ ಅರ್ಜುನ್​ ಕಪೂರ್!

ಬಾಲಿವುಡ್​ ವಿಭಿನ್ನ ಪ್ರೇಮ ಕಥೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸ್ಟೋರಿ ಸ್ವಲ್ಪ ಡಿಫರೆಂಟ್. ಇವರಿಬ್ಬರ ಬಗ್ಗೆ ಚರ್ಚೆಗಳು ಬಂದಾಗೆಲ್ಲಾ ವಯಸ್ಸಿನ ಅಂತರದ ವಿಷಯವೇ ಮೊದಲಿಗೆ ಎಲ್ಲರಿಗೂ ಬೆರಗು ಮೂಡಿಸುತ್ತದೆ. 36ರ ಹರೆಯದ ಅರ್ಜುನ್ 48ರ ವಯಸ್ಸಿನ ಮಲೈಕಾ ಪ್ರೀತಿ ಇವತ್ತಿಗೂ ಚರ್ಚೆಯಲ್ಲಿಯೇ ಇದೆ. ಆದರೂ ಇದೆಲ್ಲರ ಮಧ್ಯೆ ಈ ಜೋಡಿಯ ಆತ್ಮೀಯತೆ, ಹೊಂದಾಣಿಕೆ ಕಪಲ್​ ಗೋಲ್ಸ್​​ ಸೆಟ್ ಮಾಡಿಕೊಟ್ಟಿದೆ.‘ಚಯ್ಯಾ ಚಯ್ಯಾ’ ಬೆಡಗಿ  ಮಲೈಕಾ ಅರೋರಾ, ಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ 19 ವರ್ಷಗಳ ಕಾಲ ಸತಿ ಪತಿಯಾಗಿದ್ದರು.  ಆ ನಂತರ 2017ರಲ್ಲಿ ವಿಚ್ಚೇದನವನ್ನು ಪಡೆದರು. ಈ ದಂಪತಿಗಳಿಗೆ  ಅರ್ಹಾನ್ ಖಾನ್ ಎನ್ನುವ 18 ವರ್ಷದ ಮಗನಿದ್ದಾರೆ. ಸದ್ಯ ಉನ್ನತ ಶಿಕ್ಷಣಕ್ಕಾಗಿ ಅರ್ಹಾನ್​ ಖಾನ್ ವಿದೇಶದಲ್ಲಿ ನೆಲೆಸಿದ್ದಾರೆ.








View this post on Instagram






A post shared by Arjun Kapoor (@arjunkapoor)





2018ರಿಂದ ಡೇಟಿಂಗ್​ ಮಾಡ್ತಿರುವ ಜೋಡಿ!

ವಿಚ್ಚೇದನದ ಬಳಿಕ ಮಲೈಕಾ 'ಟೂ ಸ್ಟೇಟ್ಸ್​​' ಸಿನಿಮಾ ಖ್ಯಾತಿಯ ನಟ ಅರ್ಜುನ್ ಕಪೂರ್ ಜೊತೆಯಾದರು. 2018ರಿಂದ ಈ ಇಬ್ಬರು  ಡೇಟಿಂಗ್​ನಲ್ಲಿದ್ದಾರೆ. ಪ್ರತಿ ಬಾರಿ ತಮ್ಮ ಪ್ರೀತಿ, ಪ್ರವಾಸ, ಔತಣಕೂಟ ಸೇರಿದಂತೆ ಹಲವಾರು ಅದ್ಭುತ ಕ್ಷಣಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಪ್ರತಿ ಪೋಸ್ಟ್​ಗಳು ಅದಕ್ಕೆ ನೀಡುವ ಶೀರ್ಷಿಕೆಗಳು ಇವರಿಬ್ಬರ ಪ್ರೀತಿಯ ಅಗಾಧತೆಗೆ ಸಾಕ್ಷಿಯಾಗಿವೆ.'ಇಂಡಿಯಾಸ್ ಬೆಸ್ಟ್​ ಡ್ಯಾನ್ಸರ್'​ ಶೋನಲ್ಲಿ ಮಲೈಕಾ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ನೃತ್ಯ ಸಂಯೋಜಕರಾದ ಟೆರೆನ್ಸ್ ಲೂಯಿಸ್ ಮತ್ತು ಗೀತಾ ಕಪೂರ್​ರೊಂದಿಗೆ ಮಲೈಕಾ ಕೂಡ ಈ ಡ್ಯಾನ್ಸ್​​ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು.

ಇದನ್ನು ಓದಿ : ‘ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಪಡೆದ ‘ಬಜರಂಗಿ ಭಾಯಿಜಾನ್​’ ಮುನ್ನಿ: ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ಬಾಲನಟಿ!

ಇನ್ನು ಮಲೈಕಾ ನರ್ತಿಸಿರುವ ಚಯ್ಯಾ ಚಯ್ಯಾ, ಮುನ್ನಿ ಬದ್ನಾಮ್ ಹುಯಿ, ಅನಾರ್ಕಲಿ ಡಿಸ್ಕೋ ಚಲಿ ಮತ್ತು ಹಲೋ ಹಲೋ  ಹಾಡುಗಳು ಸೂಪರ್​ ಹಿಟ್ ಆಗಿದೆ. ಇಂದಿಗೂ ಈ ಹಾಡಿನ ಡ್ಯಾನ್ಸ್​ ಕ್ಲಿಪ್​ಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್, ಶೇರ್ ಮತ್ತು ಪ್ರತಿಕ್ರಿಯೆಗಳನ್ನು ಗಿಟ್ಟಿಸಿಕೊಳ್ಳುತ್ತಿವೆ.ಅಲ್ಲದೆ 'ಸೂಪರ್ ಮಾಡೆಲ್ ಆಫ್ ಇಯರ್ 2' ಶೋನಲ್ಲಿ ಮಿಲಿಂದ್​ ಸೋಮನ್ ಮತ್ತು ಅನುಷಾ ದಂಡೇಕರ್ ಜೊತೆಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು ಮಲೈಕಾ.

ಇದನ್ನು ಓದಿ: ಬ್ರೇಕಪ್ ನಂತರ ಮೂರನೇ ಮಗುವನ್ನು ದತ್ತು ಪಡೆದ ನಟಿ.. ನಿಜವಾಗಿಯೂ ನೀವು ದೇವತೆ ಅಂದಿದ್ಯಾಕೆ ನೆಟ್ಟಿಗರು?

ಇನ್ನು ಅರ್ಜುನ್ ಕಪೂರ್ 'ಟೂ ಸ್ಟೇಟ್ಸ್'​ ಸಿನಿಮಾದಿಂದ ಭರಸವೆ ಮೂಡಿಸಿದವರು. ಸೈಫ್ ಅಲಿ ಖಾನ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಜೊತೆಗೆ ಭೂತ್ ಪೊಲೀಸ್​​ನಲ್ಲೂ ಹೆಸರು ಮಾಡಿದ್ದಾರೆ. ಕಳೆದ ವರ್ಷ 'ಸಂದೀಪ್ ಔರ್ ಪಿಂಕಿ ಫರಾರ್' ಸಿನಿಮಾದಲ್ಲಿ ಪರಿಣಿತಿ ಚೋಪ್ರಾ ಜೊತೆಗೆ ಕಾಣಿಸಿಕೊಂಡಿದ್ದರು. 'ಸರ್ದಾರ್​ ಕಾ ಗ್ರ್ಯಾಂಡ್' ಸನ್ ಚಿತ್ರದಲ್ಲೂ ಮ್ಯಾಜಿಕ್ ಮಾಡಿದ್ದರು. 'ಏಕ್ ವಿಲನ್' ಅವರ ಮುಂದಿನ ಚಿತ್ರವಾಗಿದ್ದು ದಿಶಾ ಪಟಾನಿ, ತಾರಾ ಸುತಾರಿಯಾ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಭೂಮಿ ಪಡ್ನೇಕರ್ ಜೊತೆಗೆ 'ಲೇಡಿ ಕಿಲ್ಲರ್'​​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Published by:Vasudeva M
First published: