RRR ಸಿನಿಮಾ ಹೊಗಳಿದ ಸಲ್ಮಾನ್​ ಖಾನ್​, ಸೌತ್​ ಸಿನಿಮಾದ ಸಕ್ಸಸ್​ ಕಂಡು ಗರಂ ಆದ `ಬಜರಂಗಿ ಭಾಯ್​ಜಾನ್’!

‘ಚಿರಂಜೀವಿ ಅವರನ್ನು ಬಹಳ ದಿನಗಳಿಂದ ಬಲ್ಲೆ.. ಅವರು ಒಳ್ಳೆಯ ಸ್ನೇಹಿತ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಒಳ್ಳೆಯ ಗೆಳೆಯ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ RRR ನಲ್ಲಿ ರಾಮ್ ಚರಣ್ ಅವರ ಅಭಿನಯಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಿದ್ದಾರೆ.

ರಾಮ್​ಚರಣ್​, ಸಲ್ಮಾನ್​ ಖಾನ್​, ಜೂನಿಯರ್​ ಎನ್​ಟಿಆರ್​

ರಾಮ್​ಚರಣ್​, ಸಲ್ಮಾನ್​ ಖಾನ್​, ಜೂನಿಯರ್​ ಎನ್​ಟಿಆರ್​

  • Share this:
ರಾಜಮೌಳಿ(Rajamouli), ಎನ್‌ಟಿಆರ್‌(NTR), ರಾಮಚರಣ್‌(Ramcharan) ಕಾಂಬಿನೇಷನ್‌ನ ಆರ್‌ಆರ್‌ಆರ್‌(RRR) ಸಿನಿಮಾ ಟಾಲಿವುಡ್‌(Tollywood) ಜೊತೆಗೆ ಇತರ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ. ಬಾಲಿವುಡ್(Bollywood) ಪ್ರೇಕ್ಷಕರು ಕೂಡ ಚಿತ್ರಕ್ಕೆ ಮುಗಿ ಬೀಳುತ್ತಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್(Salman Khan) RRR ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. IIFA 2022 ಬಿಡುಗಡೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ಗಾಡ್ ಫಾದರ್(God Father) ಚಿತ್ರದಲ್ಲಿ ಚಿರಂಜೀವಿ(Chiranjeevi) ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಪ್ರತಿಕ್ರಿಯಿಸಿದ್ದಾರೆ. ‘ಚಿರಂಜೀವಿ ಅವರನ್ನು ಬಹಳ ದಿನಗಳಿಂದ ಬಲ್ಲೆ.. ಅವರು ಒಳ್ಳೆಯ ಸ್ನೇಹಿತ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಒಳ್ಳೆಯ ಗೆಳೆಯ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ RRR ನಲ್ಲಿ ರಾಮ್ ಚರಣ್ ಅವರ ಅಭಿನಯಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಿದ್ದಾರೆ.

ನಮ್ಮ ಸಿನಿಮಾಗಳು ಸೌತ್​ನಲ್ಲಿ ಸೌಂಡ್ ಮಾಡುತ್ತಿಲ್ಲ ಎಂದ ಸಲ್ಲು!

ಈ ಸಂದರ್ಭದಲ್ಲಿ ‘ರಾಮ್​ ಚರಣ್ ಅವರನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಯಿತು’ ಎಂದು ಸಲ್ಮಾನ್ ಖಾನ್​ ಹೇಳಿದ್ದಾರೆ. ಇನ್ನೂ ಇದೇ ವೇಳೆ ಸಲ್ಮಾನ್ ಖಾನ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಆರ್‌ಆರ್‌ಆರ್ ಸೇರಿದಂತೆ ದಕ್ಷಿಣ ಚಲನಚಿತ್ರಗಳ ಯಶಸ್ಸಿನ ಕುರಿತು ಮಾತನಾಡಿದ್ದಾರೆ. ಸೌತ್ ಸಿನಿಮಾಗಳು ಬಾಲಿವುಡ್​​ನಲ್ಲಿ ಚೆನ್ನಾಗಿ  ಕಮಾಲ್​ ಮಾಡುತ್ತಿದೆ.  ಆದರೆ, ಇಲ್ಲಿನ ಸಿನಿಮಾಗಳು ಸೌತ್​ನಲ್ಲಿ ಯಾಕೆ ಸದ್ದು ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಬಾಲಿವುಡ್​ನಲ್ಲೂ ಸೌತ್ ಸಿನಿಮಾಗಳದ್ದೇ ಹವಾ!

ಬಾಹುಬಲಿ 1 ಮತ್ತು ಬಾಹುಬಲಿ 2 ಜೊತೆಗೆ ಕಳೆದ ವರ್ಷ ಬಿಡುಗಡೆಯಾದ ಅಲ್ಲು ಅರ್ಜುನ್ 'ಪುಷ್ಪ' ಕೂಡ ಬಾಲಿವುಡ್‌ನಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಆರ್ ಆರ್ ಆರ್ ಕೂಡ ಬಾಲಿವುಡ್ ಬಾಕ್ಸ್ ಆಫೀಸ್ ಬುಡಮೇಲು ಮಾಡಿದೆ. ಹೀಗಾಗಿ ಸಲ್ಮಾನ್ ಖಾನ್​ ಈ ರೀತಿ ಹೇಳಿದ್ದಾರೆ.

ಇದನ್ನೂ ಓದಿ: The Kashmir Files ಸಿನಿಮಾ ನೋಡಿದ ಸಲ್ಲು ಭಾಯ್​ ಹೇಳಿದ್ದೇನು? ಮತ್ತೊಂದು ವಿವಾದ ಸೃಷ್ಟಿಯಾಯ್ತಾ?

ನಾಲ್ಕನೇ ದಿನವೂ ಭರ್ಜರಿ ಕಲೆಕ್ಷನ್​ ಮಾಡಿದ ಆರ್​ಆರ್​ಆರ್​!

ಬಿಡುಗಡೆಯಾದ ನಾಲ್ಕನೇ ದಿನವೂ ಆರ್​ಆರ್​ಆರ್​ ಕಲೆಕ್ಷನ್‌ಗಳ ಭರ್ಜರಿಯಾಗಿವೆ. ತೆಲುಗು ರಾಜ್ಯಗಳ ಜೊತೆಗೆ ಸಾಗರೋತ್ತರ, ಹಿಂದಿ, ಕನ್ನಡ ಮತ್ತು ತಮಿಳಿನಲ್ಲೂ ದಾಖಲೆಯ ಕಲೆಕ್ಷನ್ ಮಾಡಿದೆ. ರಾಜಮೌಳಿ ಮತ್ತೊಮ್ಮೆ ಭಾರತೀಯ ಚಿತ್ರರಂಗದ ದಾಖಲೆಗಳನ್ನು ಮುರಿಯುತ್ತಿದ್ದಾರೆ.  ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೀರೋಗಳಲ್ಲಿ ನಟಿಸಿರುವ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ಕಲೆಕ್ಷನ್‌ ಮಾಡಿದೆ. 4 ದಿನದಲ್ಲಿ 317 ಕೋಟಿ ಶೇರ್.. 565 ಕೋಟಿ ಕಲೆಕ್ಷನ್. ಭಾರತೀಯ ಸಿನಿಮಾ ಈ ಮಟ್ಟದಲ್ಲಿ ಗಳಿಕೆ ಮಾಡಲಿದೆಯೇ ಎಂಬ ವಿಚಾರದಲ್ಲಿ ಚಿತ್ರ ಪ್ರಚೋದನಕಾರಿಯಾಗಿದೆ.

ಇದನ್ನೂ ಓದಿ: ಜೂನಿಯರ್​ NTR ಮದ್ವೆಗೆ ಖರ್ಚಾಗಿದ್ದೆಷ್ಟು? ಈಗ್ಯಾಕೆ ಈ ಮ್ಯಾಟರ್​ ಅಂತೀರಾ? ಕಾರಣ ಇದೆ ನೋಡಿ..

‘ದಿ ಕಾಶ್ಮೀರ್​ ಫೈಲ್ಸ್’​ ನೋಡಿದ ಸಲ್ಮಾನ್ ಖಾನ್​!

ಬಾಲಿವುಡ್​ ಬಜರಂಗಿ ಭಾಯ್​ಜಾನ್​ ದಿ ಕಾಶ್ಮೀರ್​ ಫೈಲ್ಸ್​​ ಸಿನಿಮಾವನ್ನು ನೋಡಿದ್ದಾರೆ. ಹಾಗಿದ್ದರೆ ಈ ಸಿನಮಾ ನೋಡಿ ಸಲ್ಮಾನ್​ ಖಾನ್​ ಹೇಳಿದ್ದೇನು?. ನಟ ಸಲ್ಮಾನ್ ಖಾನ್ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಹೊಗಳಿದ್ದಾರೆ.ಸಿನಿಮಾದಲ್ಲಿ ನಟಿಸಿರುವ ಅನುಪಮ್ ಖೇರ್, ಸಲ್ಮಾನ್ ಖಾನ್ ಸಿನಿಮಾವನ್ನು ವೀಕ್ಷಿಸಿ ತಮಗೆ ಕರೆ ಮಾಡಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ನಟ ಸಲ್ಮಾನ್ ಖಾನ್ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಬಳಿಕ ನನಗೆ ಕರೆ ಮಾಡಿದ್ದರು. ಸಿನಿಮಾವನ್ನು ಅವರು ಬಹುವಾಗಿ ಹೊಗಳಿದರು. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆ'' ಎಂದಿದ್ದಾರೆ.
Published by:Vasudeva M
First published: