ಪ್ರತಿದಿನ ಗೋಮೂತ್ರ ಕುಡಿಯುತ್ತಾರಂತೆ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್!
ನಟ ಅಕ್ಷಯ್ ಕುಮಾರ್ ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುವುದು, ರಾತ್ರಿ 9 ಗಂಟೆಗೆ ಮಲಗುವುದು, ಧೂಮಪಾನ, ಮದ್ಯಪಾನಗಳಿಂದ ದೂರ ಇರುವುದು. ಯೋಗಾಭ್ಯಾಸ, ಸಮರಕಲೆಗಳಲ್ಲಿ ಪರಿಣಿತಿ ಹೊಂದಿರುವುದರ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಅವರು ಪ್ರತಿದಿನ ಗೋಮೂತ್ರ ಸೇವಿಸುತ್ತಿರುವ ವಿಷಯವನ್ನು ತಿಳಿದು ಅವರ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ.
ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್.
ಬಾಲಿವುಡ್ನ ಖಿಲಾಡಿ, ಭಾರತದ ಅತಿದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಪ್ರತಿದಿನ ಹಸುವಿನ ಗಂಜಲ ಕುಡಿಯುತ್ತಾರಂತೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣವೂ ಹಲವರನ್ನು ಆಶ್ಚರ್ಯಗೊಳಿಸಿದೆ....ಒಬ್ಬ ಸೂಪರ್ಸ್ಟಾರ್, ನೂರಾರು ಕೋಟಿ ರೂಪಾಯಿಯ ಒಡೆಯ, ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅಕ್ಷಯ್ ಕುಮಾರ್ ಕೇಳಿದರೆ ಅಮೃತವನ್ನೂ ಕೊಡಿಸುವವರಿದ್ದಾರೆ. ಹೀಗಿರುವಾಗ ಹಸುವಿನ ಗಂಜಲ ಯಾಕೆ ಕುಡಿಯುತ್ತಾರೆ? ಅಂದರೆ ನಂಬುವುದು ಅಸಾಧ್ಯವೇ ಸರಿ. ಆದರೆ ಖುದ್ದು ಅಕ್ಷಯ್ ಕುಮಾರ್ ಅವರೇ ಈ ಕುರಿತು ತುಟಿ ಬಿಚ್ಚಿದ್ದಾರೆ.
ಹೌದು. ಅದಕ್ಕೆ ಕಾರಣ ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದ ಶೂಟಿಂಗ್ ಕೆಲ ದಿನಗಳ ಹಿಂದಷ್ಟೇ ಬಂಡೀಪುರದಲ್ಲೇ ನಡೆದಿತ್ತು. ಒಂದು ದಿನ ತಲೈವಾ ರಜಿನಿಕಾಂತ್ ಬೇರ್ ಗ್ರಿಲ್ಸ್ ಜೊತೆ ಕಾಡನ್ನು ಅಲೆದಿದ್ದರೆ ಮತ್ತೊಂದು ದಿನ ಅಕ್ಷಯ್ ಕುಮಾರ್ ಬೇರ್ ಗ್ರಿಲ್ಸ್ಗೆ ಸಾಥ್ ನೀಡಿದ್ದರು. ಈಗಾಗಲೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಕಾರ್ಯಕ್ರಮ ಪ್ರಸಾರವಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯ ಅಕ್ಷಯ್ ಕುಮಾರ್ ಜೊತೆಗೆ ಕಾಡಿನಲ್ಲಿ ಸುತ್ತಿರುವ ಕಾರ್ಯಕ್ರಮ ಪ್ರಸಾರಗೊಳ್ಳಲು ರೆಡಿಯಿದೆ.
ಹೀಗಾಗಿಯೇ ಅಕ್ಷಯ್ ಕುಮಾರ್ ಮತ್ತು ಬೇರ್ ಗ್ರಿಲ್ಸ್ ಇಬ್ಬರೂ ಶೂಟಿಂಗ್ ಸಮಯದಲ್ಲಾದ ಅನುಭವಗಳ ಕುರಿತು ವಿಡಿಯೋ ಲೈವ್ ಚಾಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಬೇರ್ ಗ್ರಿಲ್ಸ್ ಆನೆಯ ಮಲದಲ್ಲಿ ಮಾಡಿದ ಟೀ ಕುಡಿದಿದ್ದು ಹೇಗಿತ್ತು? ಅಂತ ಕೇಳಿದ್ದಾರೆ. ಅದಕ್ಕೆ ಅಕ್ಷಯ್ ಕುಮಾರ್, ನಾನು ಪ್ರತಿದಿನ ಗೋವಿನ ಗಂಜಲ ಕುಡಿಯುತ್ತಿದ್ದ ಕಾರಣ ಅದೇನೂ ಸಮಸ್ಯೆ ಆಗಲಿಲ್ಲ" ಎಂದು ಉತ್ತರಿಸಿದ್ದಾರೆ.
ಆಯುರ್ವೇದದಲ್ಲಿ ಗೋಮೂತ್ರಕ್ಕೆ ಹಲವು ಔಷಧೀಯ ಗುಣಗಳಿರುವ ಬಗ್ಗೆ ಉಲ್ಲೇಖವಿದ್ದು, ಅದೇ ಕಾರಣ ಎಂದೂ ಹೇಳಿಕೊಂಡಿದ್ದಾರೆ ನಟ ಅಕ್ಷಯ್ ಕುಮಾರ್. 53ರ ವಯಸ್ಸಿನಲ್ಲೂ ಎಂತಹ ಯುವಕರೂ ನಾಚುವಷ್ಟು ಫಿಟ್ ಆಗಿದ್ದಾರೆ ಅವರು. ಬಾಲಿವುಡ್ನ ಅತ್ಯಂತ ಫಿಟ್ಟೆಸ್ಟ್ ಸೂಪರ್ ಸ್ಟಾರ್ ಎಂಬ ಬಿರುದನ್ನೂ ಪಡೆದಿದ್ದಾರೆ. ಅದಕ್ಕೆ ಕಾರಣ ಆರೋಗ್ಯದ ಬಗ್ಗೆ ಅವರು ವಹಿಸಿರುವ ಕಾಳಜಿ.
ನಟ ಅಕ್ಷಯ್ ಕುಮಾರ್ ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುವುದು, ರಾತ್ರಿ 9 ಗಂಟೆಗೆ ಮಲಗುವುದು, ಧೂಮಪಾನ, ಮದ್ಯಪಾನಗಳಿಂದ ದೂರ ಇರುವುದು. ಯೋಗಾಭ್ಯಾಸ, ಸಮರಕಲೆಗಳಲ್ಲಿ ಪರಿಣಿತಿ ಹೊಂದಿರುವುದರ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಅವರು ಪ್ರತಿದಿನ ಗೋಮೂತ್ರ ಸೇವಿಸುತ್ತಿರುವ ವಿಷಯವನ್ನು ತಿಳಿದು ಅವರ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ