ಬಾಲಿವುಡ್ ಕಿಂಗ್ ಶಾರುಖ್ (Shahrukh Khan Viral Post) ಖಾನ್ಗೆ ಅವರ ಪಠಾಣ್ ಚಿತ್ರದ ಮೂಲಕ ಹಲ್ಚಲ್ ಎಬ್ಬಿಸಿ ಆಗಿದೆ. ಸಿನಿಮಾದ ಒಂದೇ ಒಂದು 'ಬೇಶರಮ್ ರಂಗ್' ವಿವಾದದ ಅಲೆಯನ್ನೆ ಎಬ್ಬಿಸಿದೆ. ಅದರಿಂದ ಸಿನಿಮಾಗೆ ನೆಗೆಟಿವ್ (Negative Publicity) ಪಬ್ಲಿಸಿಟಿನೇ ಆಗಿದೆ. ಇದರಿಂದ ಯಾರಿಗೆ ಲಾಭ ಆಯಿತೋ ಏನೋ. ವಿವಾದ ಎದ್ದದ್ದು ಮಾತ್ರ ನಿಜವೇ ಆಗಿದೆ. ಆದರೆ ಇದರಿಂದ ಶಾರುಖ್ ಖಾನ್ ತಲೆಕಡೆಸಿಕೊಂಡಂತಿಲ್ಲ. ಇರಲಿ ಬಿಡಿ ಹೇಗೋ (Cinema Promotion) ಪ್ರಮೋಷನ್ ಆಯಿತಲ್ವೇ ಅಂತಲೋ ಏನೋ ಸುಮ್ನಿದ್ದಾರೆ. ಆದರೆ ಈಗ ಇದೇ ಕಿಂಗ್ (Shah Rukh Khan) ಖಾನ್ ತಮ್ಮ ಅಭಿಮಾನಿಗಳು ಕೇಳೋ ಪ್ರಶ್ನೆಗೆ ಏನೇನೋ ಹೇಳಿದ್ದಾರೆ. ಅದುವೇ ಈಗ ಹೆಚ್ಚು ಗಮನ ಸೆಳೆದಿದೆ. ಅದರ ವಿವರ ಇಲ್ಲಿದೆ.
ಶಾರುಖ್ ಖಾನ್ ಹಿಂಗ್ಯಾಕೆ-ಫ್ಯಾನ್ಸ್ ಬೇಡ್ವಾದ್ರಾ?
ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಭಾರೀ ಸುದ್ದಿಯಲ್ಲಿಯೇ ಇದೆ. ಅದು ನೆಗೆಟಿವ್ ವಿಚಾರದಲ್ಲಿ ಅನ್ನೋದೇ ಹೆಚ್ಚು. ಸಿನಿಮಾದ ಒಂದೇ ಒಂದು ಹಾಡು ಎಲ್ಲೆಡೆ ಬೇಜಾನ್ ವಿವಾದ ಕ್ರಿಯೇಟ್ ಮಾಡಿದೆ.
'ಬೇಶರಮ್ ರಂಗ್' ಹಾಡು ತುಂಬಾನೇ ಮಾದಕವಾಗಿಯೇ ಇದೆ. ಶಾರುಖ್ ಖಾನ್ ಕೂಡ ಈ ಒಂದು ಹಾಡಿನಲ್ಲಿ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಮಸ್ತ್ ಫಿಜಿಕ್ ಮೂಲಕ ನೋಡುಗರಲ್ಲೂ ಕಿಚ್ಚು ಹಚ್ಚಿದ್ದಾರೆ.
ಪಠಾಣ್ ಚಿತ್ರಕ್ಕಾಗಿ ಶಾರುಖ್ ಬೇಜಾನ್ ತಯಾರಿ!
ಶಾರುಖ್ ಖಾನ್ ಈ ಒಂದು ಚಿತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ಮಾಡಿದ್ದಾರೆ. ದೇಹವನ್ನ ಕೂಡ ತುಂಬಾ ದಂಡಿಸಿದ್ದಾರೆ. ಅದರ ಫಲವೇ ಬೇಶರಮ್ ರಂಗ್ ಹಾಡಿನಲ್ಲಿ ಶಾರುಖ್ ಖಾನ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.
ಇದರಿಂದಲೋ ಏನೋ, ಶಾರುಖ್ ಫ್ಯಾನ್ಸ್ ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಥ್ರಿಲ್ ಆಗಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಅಷ್ಟೇ ಉತ್ಸುಕತೆಯಿಂದಲೇ ಪ್ರಶ್ನೆಗಳನ್ನೂ ಕೇಳಿದ್ದಾರೆ. ಅದಕ್ಕೆ ಮಿಸ್ಟರ್ ಶಾರುಖ್ ಹೇಳಿದ್ದನೂ ಗೊತ್ತೇ? ಇಲ್ಲಿದೆ ನೋಡಿ.
ಬಾಲಿವುಡ್ ಕಿಂಗ್ ಖಾನ್ ಹಿಂಗ್ಯಾಕ್ ಆಗೋದ್ರು?
ಮನೆ ಬಳಿ ಬರೋ ಅಭಿಮಾನಿಗಳಿಗೆ ಶಾರುಖ್ ಖಾನ್ ತುಂಬಾನೇ ಗೌರವ ಕೊಡ್ತಾರೆ. ಅಭಿಮಾನಿಗಳು ಬಂದಿದ್ದಾರೆ ಅಂದ ಕೂಡಲೇ, ಹೊರಗಡೆ ಬಂದು ಒಂದು ಫ್ಲಾಯಿಂಗ್ ಕಿಸ್ ಕೂಡ ಕೊಡ್ತಾರೆ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಗೋ ಫ್ಯಾನ್ಸ್ ಮೇಲೆ ಶಾರುಕ್ ಖಾನ್ಗೆ ಪ್ರೀತಿ ಇದ್ದಂತೆ ಕಾಣೋದಿಲ್ಲ. ಅವರು ಕೇಳುವ ಪ್ರಶ್ನೆಗೆ ಉಡಾಫೆ ಉತ್ತರವನ್ನೂ ಕೊಟ್ಟಿದ್ದಾರೆ. ಇದರಿಂದ ಯಾರು ಬೇಸರಗೊಂಡ್ರೋ ಇಲ್ವೋ, ಶಾರುಖ್ ಉತ್ತರ ವೈರಲ್ ಆಗುತ್ತಿದೆ.
ನನ್ನ ಇಷ್ಟ ನನ್ನ ಟ್ರೈಲರ್-ಶಾರುಖ್ ಹಿಂಗ್ಯಾಕ್ ಹೇಳಿದ್ರು?
ಶಾರುಖ್ ಭಾಯ್ ನಿಮ್ಮ ಪಠಾಣ್ ಚಿತ್ರದ ಟ್ರೈಲರ್ ರಿಲೀಸ್ ಆಗಿಲ್ಲ. ಯಾಕೆ ಆಗಿಲ್ಲ. ಯಾವಾಗ ರಿಲೀಸ್ ಆಗುತ್ತದೆ? ಹೀಗೆ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ಉತ್ತರ ಕೊಟ್ಟಿದ್ದಾರೆ.
"Ha ha Meri marzi!!!" ಅಂದ್ರೆ ನನ್ನ ಇಷ್ಟ. ಅದು ಬರಬೇಕಾದಾಗಲೇ ಬರುತ್ತದೆ ಅಂತಲೇ ಹೇಳಿದ್ದಾರೆ. ಹೀಗೆ ಹೇಳಿದ್ದ ಶಾರುಖ್ ಅದನ್ನ ನಗ್ತಾನೇ ಹೇಳಿ ಮಜಾ ಕೂಡ ತೆಗೆದುಕೊಂಡಿದ್ದಾರೆ. ಇದರಿಂದ ಶಾರುಖ್ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ ಬಿಡಿ.
ನೀವು ಚಾಪರ್ ಚಲಾಯಿಸೋದನ್ನ ಯಾವಾಗ ಕಲಿತದ್ದು?
ಪಠಾಣ್ ಚಿತ್ರದ ಒಂದು ಸೀನ್ನಲ್ಲಿ ಶಾರುಕ್ ಚಾಪರ್ ಓಡಿಸೋ ಸೀನ್ ಕೂಡ ಇದೆ. ಇದರ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಕೇಳಿಯೇ ಬಿಟ್ಟಿದ್ದಾರೆ. ನೀವು ಯಾವಾಗ ಚಾಪರ್ ಓಡಿಸೋದನ್ನ ಕಲಿತದ್ದು ಅಂತಲೇ ಕೇಳಿದ್ದಾರೆ.
ಈ ಒಂದು ಪ್ರಶ್ನೆಗೂ ಶಾರುಖ್ ಉತ್ತರ ವ್ಯಂಗ್ಯವಾಗಿಯೂ ಇದೆ. ಅಲ್ಲೂ ಕೇಳಿದ ಪ್ರಶ್ನೆಗೆ ಉತ್ತರವೂ ಸಿಗದೇ ಪಾಸ್ ಆನ್ ಆಗಿದೆ. ಹೌದು, ಶಾರುಖ್ ಖಾನ್ ಹೀಗೆ ಉತ್ತರ ಕೊಟ್ಟಿದ್ದಾರೆ. ನಾನು ಸೈಕಲ್ ಚಲಾಯಿಸೋದನ್ನ ಕಲಿಯೋವಾಗ್ಲೆ ಚಾಪರ್ ಓಡಿಸೋದನ್ನ ಕಲಿತು ಬಿಟ್ಟೆ ಅಂತಲೇ ಶಾರುಖ್ ಹೇಳಿದ್ದಾರೆ.
ಇದನ್ನೂ ಓದಿ: Pruthvi Ambaar: ಉತ್ತರ ಕನ್ನಡದಲ್ಲಿ ಪೃಥ್ವಿ ಅಂಬಾರ್! ಏನ್ಮಾಡ್ತಿದ್ದಾರೆ ನೋಡಿ
ನೀವು ಇಷ್ಟೊಂದು ಹ್ಯಾಂಡ್ಸಮ್ ಇದ್ದೀರಾ ಏನು ಕಾರಣ?
ಶಾರುಖ್ ಖಾನ್ ಈ ವಯಸ್ಸಿನಲ್ಲೂ ಸಖತ್ ಆಗಿಯೇ ಇದ್ದಾರೆ. ಮಕ್ಕಳು ಎದೆ ಎತ್ತರಕ್ಕೆ ಬೆಳೆದಿದ್ದರೂ ಕೂಡ ಶಾರುಖ್ ಖಾನ್ ಈಗಲೂ ಚಿರ ಯುವಕನಂತೆ ಕಾಣುತ್ತಾರೆ. ಅದರ ಹಿನ್ನೆಲೆಯಲ್ಲಿಯೇ ಅಭಿಮಾನಿ ಪ್ರೀತಿಯಿಂದಲೇ ಕೇಳಿದ್ದಾರೆ. ನೀವೂ ಇಷ್ಟೊಂದು ಹ್ಯಾಂಡ್ಸಮ್ ಆಗಿ ಯಾಕೆ ಇದ್ದೀರಾ ಅಂತಲೇ ಕೇಳಿದ್ದಾರೆ. ಇದಕ್ಕೂ ಮಿಸ್ಟರ್ ಶಾರುಖ್ ಉತ್ತರ ಕೊಟ್ಟಿದ್ದಾರೆ.
ನಾನು ಚೆನ್ನಾಗಿರಲು ಒಂದು ಕಾರಣ ಇದೆ. ನನ್ನ ಅಪ್ಪ-ಅಮ್ಮನ ಜೀನ್ಸ್ ಚೆನ್ನಾಗಿತ್ತು. ಅದಕ್ಕೇನೆ ನಾನು ಚೆನ್ನಾಗಿದ್ದೇನೆ ಅಂತಲೇ ಶಾರುಖ್ ರಿಪ್ಲ್ರೈ ಮಾಡಿದ್ದಾರೆ. ಅಲ್ಲಿಗೆ ಶಾರುಖ್ ಹೀಗೆ ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿಯೂ ಉತ್ತರಿಸಂದಂತೆ ರಿಯಾಕ್ಟ್ ಮಾಡಿದ್ದಾರೆ. ಅಷ್ಟೇ ಮಜಾನೂ ತಗೆದುಕೊಂಡಿದ್ದಾರೆ ಅಂತಲೇ ಹೇಳಬಹುದೇನೋ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ