Sanjay Dutt: ಬಾಲಿವುಡ್​ನಲ್ಲಿ `ಆ’ ರೀತಿಯ ಸಿನಿಮಾಗಳು ಮತ್ತೆ ಬರಲಿ! ಹಿಂಗ್ಯಾಕ್​ ಅಂದ್ರು ಸಂಜಯ್​ ದತ್​ ನೀವೇ ನೋಡಿ..

ಸಂಜಯ್ ದತ್ ಕೆಜಿಎಫ್: ಚಾಪ್ಟರ್ 2 ಚಿತ್ರದಲ್ಲಿ ಕನ್ನಡ ಚಿತ್ರೋದ್ಯಮದ ಜನಪ್ರಿಯ ಮತ್ತು ಬಹು ಬೇಡಿಕೆಯ ನಟನಾದ ಯಶ್ ಮತ್ತು ಬಾಲಿವುಡ್ ನಟಿ ರವೀನಾ ಟಂಡನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಏಪ್ರಿಲ್ 14 ರಂದು ದೇಶಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಂಜಯ್​ ದತ್​

ಸಂಜಯ್​ ದತ್​

 • Share this:
  ಬಾಲಿವುಡ್(Bollywood) ನಟ ಸಂಜಯ್ ದತ್(Sanjay Dutt) ಇಂದು 62ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಹೌದು ಇಂದು ಅವರ ಹುಟ್ಟುಹಬ್ಬ(Birthday). ಕಳೆದ ಮೂರು ದಶಕಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ ಅವರ ಅಭಿಮಾನಿಗಳಿಗೆ ಸಂತೋಷಗೊಳ್ಳಲು ಹಲವಾರು ಕಾರಣಗಳನ್ನು ಈ ಬಾಲಿವುಡ್ ನಟ(Bollywood Actor) ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ‘ಮುನ್ನಾಭಾಯಿ ಎಂಬಿಬಿಎಸ್’ ನಂತಹ ಅನೇಕ ಚಲನಚಿತ್ರಗಳಲ್ಲಿ ಹಾಸ್ಯ(Comedy) ಮತ್ತು ಗಂಭೀರ(Serious) ಮಿಶ್ರಣದ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಂಜಯ್ ದತ್ ಇಂದಿಗೂ ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

  ಬಾಲಿವುಡ್​ನಲ್ಲಿ ಈ ರೀತಿಯ ಸಿನಿಮಾ ಬರಬೇಕಂತೆ!

  ನಟ ಸಂಜಯ್ ದತ್ ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಇತ್ತೀಚೆಗೆ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಆನಂದಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಂಜಯ್ ಒಬ್ಬ ನಾಯಕ ನಟನ ಪಾತ್ರದ ಸಾರ ಮತ್ತು ಉದ್ಯಮದ ಮೇಲೆ ಅದರ ಪರಿಣಾಮದ ಬಗ್ಗೆ ಮಾತನಾಡಿದರು ಮತ್ತು ಇಷ್ಟೇ ಅಲ್ಲದೆ, ಬಾಲಿವುಡ್ ಮತ್ತೆ ಯಾವ ರೀತಿಯ ಚಲನಚಿತ್ರಗಳನ್ನು ತಯಾರಿಸಬೇಕು ಎಂಬುದನ್ನು ಮನಬಿಚ್ಚಿ ಹೇಳಿದ್ದಾರೆ ನೋಡಿ.

  ಆ್ಯಕ್ಷನ್​ ಸಿನಿಮಾಗಳು ಹೆಚ್ಚು ಹಿಟ್​ ಆಗುತ್ತಂತೆ!

  ಸಂದರ್ಶಕರು ಸಂಜಯ್ ಅವರನ್ನು ಇತ್ತೀಚಿನ ಚಲನಚಿತ್ರಗಳ ಕಥಾವಸ್ತು ಮತ್ತು ವಿಷಯವು ಬದಲಾಗುತ್ತಿದೆಯೇ ಅಥವಾ ಪ್ರೇಕ್ಷಕರ ಪ್ರತಿಕ್ರಿಯೆ ಬದಲಾಗುತ್ತಿದೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದರು. ಸಂಜಯ್ ದತ್ ಆ ಪ್ರಶ್ನೆಗೆ ಯಾವುದೇ ಹಿಂಜರಿಕೆಯಿಲ್ಲದೆ, “ಮನೋರಂಜಿಸುವವರು ಎಲ್ಲಿಯೂ ಹೋಗುವುದಿಲ್ಲ, ಅವರು ಚಿತ್ರೋದ್ಯಮದಲ್ಲಿಯೇ ಇರಬೇಕಾಗುತ್ತದೆ. ಆದರೆ ಜನರು ಮತ್ತು ಟ್ರೆಂಡ್ ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತವೆ” ಎಂದು ಹೇಳಿದರು. ಸಾಕಷ್ಟು ಶೌರ್ಯವನ್ನು ಪ್ರದರ್ಶಿಸುವ ಆ್ಯಕ್ಷನ್ ಭರಿತ ಚಲನಚಿತ್ರಗಳು ಎಂದಿಗೂ ಹೋಗುವುದಿಲ್ಲ ಎಂದು ಅವರು ಹೇಳಿದರು.

  ಶೋಲೆ ಥರ ಸಿನಿಮಾ ಬರಬೇಕು ಎಂದು ಸಂಜು!

  “ಶೋಲೆ ಮತ್ತು ಜಂಜೀರ್‌ನಂತಹ ಚಲನಚಿತ್ರಗಳಿಂದ ಬಾಲಿವುಡ್ ಸ್ಪೂರ್ತಿಯನ್ನು ಪಡೆಯಬೇಕು ಎಂದು ಹೇಳುತ್ತಾ ಅವರು ಚಿತ್ರೋದ್ಯಮವು ತಮ್ಮ ಮೂಲಗಳ ಬಗ್ಗೆ ಗಮನ ಹರಿಸಬೇಕು” ಎಂದು ಅವರು ಹೇಳಿದರು. ಮತ್ತೊಮ್ಮೆ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು ಆ ರೀತಿಯ ಚಲನಚಿತ್ರಗಳನ್ನು ಮಾಡಲು ಪ್ರಾರಂಭಿಸಬೇಕು ಎಂದು ಅವರು ಹೇಳಿದರು.

  ಇದನ್ನೂ ಓದಿ: ಎಲ್ಲಾ ಭಾಷೆಯಲ್ಲೂ ಸೌಂಡ್ ಮಾಡ್ತಿರೋ ಕೆಜಿಎಫ್​ 2 ಇಂಗ್ಲಿಷಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ ಯಶ್ ಹೀಗಂದ್ರು ನೋಡಿ

  ನಂತರ, ಸಂದರ್ಶಕರು ಮುನ್ನಾ ಭಾಯ್ ಅವರ ಮ್ಯಾಜಿಕ್ ಅನ್ನು ಮತ್ತೆ ನೋಡುವ ಅವಕಾಶವನ್ನು ಪಡೆಯುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ ಕುಮಾರ್ ಹಿರಾನಿಗೆ ಮತ್ತೊಮ್ಮೆ ನಿರ್ದೇಶಿಸುವಂತೆ ಹೇಳಿ ಎಂದು ಸಂಜಯ್ ನಗುತ್ತಾ ಹೇಳಿದರು. ಎಲ್ಲರೂ 'ಜಾದು ಕಿ ಜಪ್ಪಿ' ಗಾಗಿ ಕಾಯುತ್ತಿದ್ದಾರೆ ಎಂದು ಸಂದರ್ಶಕರು ಹೇಳಿದರು. ಇದನ್ನು ನೋಡಿ ಸಂಜಯ್ ನಕ್ಕರು.

  ಅಧೀರನಾಗಿ ಅಬ್ಬರಿಸಲಿರುವ ಸಂಜಯ್​ ದತ್​!

  ಸಂಜಯ್ ದತ್ ಕೆಜಿಎಫ್: ಚಾಪ್ಟರ್ 2 ಚಿತ್ರದಲ್ಲಿ ಕನ್ನಡ ಚಿತ್ರೋದ್ಯಮದ ಜನಪ್ರಿಯ ಮತ್ತು ಬಹು ಬೇಡಿಕೆಯ ನಟನಾದ ಯಶ್ ಮತ್ತು ಬಾಲಿವುಡ್ ನಟಿ ರವೀನಾ ಟಂಡನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಏಪ್ರಿಲ್ 14 ರಂದು ದೇಶಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  ಇದನ್ನೂ ಓದಿ: ಕಥೆ-ಪುರಾಣ ಬಿಟ್ಟು ಸಿನಿಮಾ ಸ್ಪೆಷಾಲಿಟಿ ಬಗ್ಗೆ ಹೇಳ್ರಿ ಎಂದ ವ್ಯಕ್ತಿ! ರಾಕಿ ಭಾಯ್​ ಕೊಟ್ಟ ಖಡಕ್​ ಉತ್ತರ ಇದು..

  ಈ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್: ಚಾಪ್ಟರ್ 2 ಅನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಮತ್ತು ಪ್ರಶಾಂತ್ ನೀಲ್ ಅವರು ಇದರ ಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಉದಯೋನ್ಮುಖ ಪ್ಯಾನ್-ಇಂಡಿಯಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್ ಮುಂದಿನ 2 ವರ್ಷಗಳಲ್ಲಿ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಸಲಾರ್' ಸೇರಿದಂತೆ ಭಾರತೀಯ ಚಿತ್ರರಂಗದ ಕೆಲವು ದೊಡ್ಡ ಚಲನಚಿತ್ರಗಳನ್ನು ಪ್ರದರ್ಶಿಸಲು ಸಜ್ಜಾಗಿದೆ.
  Published by:Vasudeva M
  First published: