ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವು ಚಿತ್ರಗಳಲ್ಲಿ ನಟಿಸಿದ್ದು, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಲ್ಮಾನ್ ಖಾನ್ ಡ್ಯಾನ್ಸ್, ಅವರ ಸ್ಟೈಲ್, ಲುಕ್ ಪ್ರತಿ ಚಿತ್ರದಲ್ಲೂ ಸಾಮಾನ್ಯವಾಗಿ ಬದಲಾಗುತ್ತಿರುತ್ತದೆ ಹಾಗೂ ವಿಭಿನ್ನವಾಗಿರುತ್ತದೆ. ಇದಕ್ಕೆ ಅಭಿಮಾನಿಗಳು ಸಹ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಹಾಗೂ ಅನೇಕರು ತಮ್ಮ ನೆಚ್ಚಿನ ಹೀರೋ ಸಲ್ಲು ಭಾಯ್ ಸ್ಟೈಲ್, ಲುಕ್ ಅನ್ನೇ ಫಾಲೋ ಮಾಡುತ್ತಾರೆ. ಇನ್ನು, ಬಾಲಿವುಡ್ ಚಿತ್ರಗಳು ಥಿಯೇಟರ್ನಲ್ಲಿ ಬಿಡುಗಡೆಯಾಗುತ್ತಿದ್ದಂತೆ ಇಂಟರ್ನೆಟ್ನಲ್ಲಿ ಲೀಕ್ ಆಗುವುದು ಹೊಸದೇನಲ್ಲ. ಇದೇ ರೀತಿ, ಶೂಟಿಂಗ್ ಸೆಟ್ನ ಅನೇಕ ಫೋಟೋಗಳು, ವಿಡಿಯೋಗಳು ಸಹ ಲೀಕ್ ಆಗುತ್ತಿರುತ್ತದೆ. ಈಗ, ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಚಿತ್ರದ ಲುಕ್ ಸಹ ಸೋರಿಕೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ 'ಟೈಗರ್ 3' ಗಾಗಿ ರಷ್ಯಾದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಸ್ಪೈ ಥ್ರಿಲ್ಲರ್ ಚಿತ್ರದ ಸೂಪರ್ ಸ್ಟಾರ್ ಸಲ್ಲು ಭಾಯ್ ಲುಕ್ ಲೀಕ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಸಲ್ಮಾನ್ ಖಾನ್ ಅಭಿಮಾನಿ 'salmanic_aryan' ಎಂಬ ಹೆಸರಿನ ಪೇಜ್ವೊಂದು ಟೈಗರ್ 3 ಚಿತ್ರದ ಕೆಲವು ಸ್ಟಿಲ್ಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ದಬಾಂಗ್ ಚಿತ್ರದ ನಟ ಕಾಣಿಸಿಕೊಂಡಿದ್ದಾರೆ. ಈ ಗೆಟಪ್ ವಿಭಿನ್ನವಾಗಿದ್ದು, ಇದು ನಿಜಕ್ಕೂ ಸಲ್ಮಾನ್ ಖಾನ್ ಹೌದಾ..? ಎಂದು ಈ ಫೋಟೋವನ್ನು ಮೊದಲನೇ ಬಾರಿಗೆ ನೋಡಿದವರಿಗೆ ಅನಿಸದೇ ಇರದು. ಇನ್ನು, 'salmanic_aryan' ಫ್ಯಾನ್ ಪೇಜ್ ಪ್ರಕಾರ ಕಾರ್ ಚೇಸ್ ಶೂಟಿಂಗ್ ರಷ್ಯಾದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಇದು ಆ ಸೀನ್ನ ಸೆಟ್ನ ದೃಶ್ಯ ಎಂದೂ ಹೇಳಿಕೊಳ್ಳಲಾಗಿದೆ.
55 ವರ್ಷದ ಸೂಪರ್ ಸ್ಟಾರ್ ಉದ್ದನೆಯ ಕೆಂಪು ಕಂದು ಕೂದಲು ಮತ್ತು ಗಡ್ಡವನ್ನು ಬಿಟ್ಟಿರುವುದನ್ನು ಕಂಡುಬರುತ್ತದೆ. ಅವರು ಈ ಲುಕ್ನಲ್ಲಿ ಬಿಳಿ ಟೀ ಶರ್ಟ್, ಜೀನ್ಸ್, ಕೆಂಪು ಜಾಕೆಟ್ ಮತ್ತು ಹೆಡ್ ಬ್ಯಾಂಡ್ ಧರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಸಲ್ಮಾನ್ ಖಾನ್ ಕೆಲವು ಅಭಿಮಾನಿಗಳೊಂದಿಗೆ ಪೋಸ್ ನೀಡುವುದನ್ನು ತೋರಿಸಿದೆ.
ಟೈಗರ್ 3 ಸೆಟ್ನಿಂದ ಸಲ್ಮಾನ್ ಖಾನ್ ನಟನೆಯ ಲೀಕ್ ಆಗಿರುವ ಚಿತ್ರಗಳನ್ನು ನೋಡಿ:
View this post on Instagram
ಇನ್ನು, ಟೈಗರ್ ಸರಣಿಯ ಮೂರನೇ ಭಾಗದ ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಕತ್ರೀನಾ ಕೈಫ್ ಸಹ ನಟಿಸಿದ್ದಾರೆ. ಇನ್ನು, ಜಾಗತಿಕವಾಗಿ ಕೋವಿಡ್ ಸಾಂಕ್ರಾಮಿಕ ಹರಡಿದ ಕಾರಣ ಟೈಗರ್ 3 ಚಿತ್ರದ ಶೂಟಿಂಗ್ ಅನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ