Godfather: ಮೆಗಾಸ್ಟಾರ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ವೆಲ್​ಕಮ್​ ಭಾಯ್​ ಎಂದ ಚಿರಂಜೀವಿ!

ಇನ್ನೂ ಸಲ್ಮಾನ್​ ಇದುವರೆಗೂ ದಕ್ಷಿಣ ಭಾರತ(South India)ದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಸಲ್ಲು ಭಾಯ್​ ಕಾಣಿಸಿಕೊಳ್ಳುತ್ತಿದ್ದಾರೆ.

ಸಲ್ಮಾನ್​ ಖಾನ್​, ಚಿರಂಜೀವಿ

ಸಲ್ಮಾನ್​ ಖಾನ್​, ಚಿರಂಜೀವಿ

  • Share this:
ಲ್ಮಾನ್​ ಖಾನ್ ​(Salman Khan) ಅಂದರೆ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್​ ಸುಲ್ತಾನ ಎಂದು ಎಲ್ಲರಿಗೂ ತಿಳಿದಿದೆ. ಅವರ ಸಿನಿಮಾಗಳು ಹೇಗಿದ್ದರೂ, ಕಲೆಕ್ಷನ್(Collection)​ಗೆ ಯಾವುದೇ ಮೋಸ ಇಲ್ಲ. ಬ್ಯಾಡ್ ಬಾಯ್​ ಅಂತಲೇ ಹೆಸರು ಮಾಡಿದ್ದ ಸಲ್ಲು ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿಯಾಗಿದ್ದರು. ಸಲ್ಮಾನ್‌ ಖಾನ್‌(Salman Khan)ಗೆ ವಯಸ್ಸು 56 ಆದ್ರೂ ಈಗಲೂ ಸಹ ಅವರನ್ನು ಬಾಲಿವುಡ್‌ನ ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌ (Most Wanted Bachelor) ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಅಲ್ಲದೆ, ಸಾಕಷ್ಟು ನಟಿಯರೊಂದಿಗೆ ಹಾಗೂ ಇತರ ಸೆಲೆಬ್ರಿಟಿಗಳೊಂದಿಗೆ ಬಾಲಿವುಡ್‌ ಬ್ಯಾಡ್‌ ಬಾಯ್‌ (Bollywood Bad Boy) ಸಲ್ಮಾನ್‌ ಖಾನ್‌ ಅನ್ನು ತಳುಕು ಹಾಕಲಾಗುತ್ತದೆ. ಇನ್ನೂ ಸಲ್ಮಾನ್​ ಇದುವರೆಗೂ ದಕ್ಷಿಣ ಭಾರತ(South India)ದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಸಲ್ಲು ಭಾಯ್​ ಕಾಣಿಸಿಕೊಳ್ಳುತ್ತಿದ್ದಾರೆ.

ಮೆಗಾ ಸ್ಟಾರ್​ ಸಿನಿಮಾದಲ್ಲಿ ಸಲ್ಲು ಭಾಯ್​!

ಮರಾಠಿಯ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಬಿಟ್ಟರೆ ಹಿಂದಿಯ ಹೊರತಾಗಿ ಬೇರೆ ಭಾಷೆಗಳಲ್ಲಿ ನಟಿಸಿಲ್ಲ ಸಲ್ಮಾನ್, ಆದರೆ ಈಗ ನಟ ಮೆಗಾಸ್ಟಾರ್ ಚಿರಂಜೀವಿಯ ಒತ್ತಾಯಕ್ಕೆ ಮಣಿದು ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.ನಟ ಚಿರಂಜೀವಿ ಜೊತೆ ಸಿನಿಮಾದಲ್ಲಿ ನಟಿಸಲು ಹೈದರಾಬಾದ್‌ಗೆ ಸಲ್ಮಾನ್ ಖಾನ್ ಆಗಮಿಸಿದ್ದು, ತಮ್ಮ ಚಿತ್ರರಂಗಕ್ಕೆ ಮೊದಲ ಬಾರಿಗೆ ಆಗಮಿಸಿದ ಸಲ್ಮಾನ್ ಖಾನ್ ಅನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ ಚಿರಂಜೀವಿ.

ಗಾಡ್‌ಫಾದರ್‌ಗೆ ಸ್ವಾಗತ ಭಾಯ್ ಎಂದ ಚಿರಂಜೀವಿ

ಸಲ್ಮಾನ್‌ ಖಾನ್​ ಹಾಗೂ ಚಿರಂಜೀವಿ, ಇಬ್ಬರು ಒಟ್ಟಿಗಿರುವ ಚಿತ್ರವನ್ನು ಟ್ವೀಟ್ ಮಾಡಿದ್ದು, ‘ಗಾಡ್‌ಫಾದರ್‌ಗೆ ಸ್ವಾಗತ ಭಾಯ್’ ಎಂದಿದ್ದಾರೆ. ಇನ್ನೂ ನಿಮ್ಮ ಎಂಟ್ರಿ ಎಲ್ಲರಿಗೂ ಶಕ್ತಿ ತುಂಬಿದೆ. ನಿಮ್ಮ ಆಗಮನದಿಂದ ಉತ್ಸಾಹ ಹೆಚ್ಚಾಗಿದೆ. ನಮ್ಮ ಸಿನಿಮಾದಲ್ಲಿ ನಿಮ್ಮ ಹಾಜರಿ ಪ್ರೇಕ್ಷಕರಿಗೆ ಬೇರೆ ಲೆವೆಲ್ ಕಿಕ್ ನೀಡುವುದರಲ್ಲಿ ಅನುಮಾನವೆ ಇಲ್ಲ‘ ಎಂದು ಬರೆದುಕೊಂಡು ಹೊಗಳಿದ್ದಾರೆ ಚಿರಂಜೀವಿ.


ಇದನ್ನೂ ಓದಿ: ಛೇ.. ಛೇ.. ಸ್ಟೇಜ್​ ಮೇಲೆ ಹಿಂಗಾ ಮಾಡೋದು ಸಲ್ಲು ಭಾಯ್​? ಪೂಜಾ ಹೆಗ್ಡೆಗೂ ಮುಜುಗರ ಮಾಡ್ಬಿಟ್ರಿ!

ಮಲಯಾಳ ಸಿನಿಮಾದ ರಿಮೇಕ್​ನಲ್ಲಿ ಚಿರಂಜೀವಿ!


2019ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ ‘ಲುಸಿಫರ್’ ರೀಮೇಕ್‌ನಲ್ಲಿ ಚಿರಂಜೀವಿ ನಟಿಸುತ್ತಿದ್ದು, ಸಿನಿಮಾಕ್ಕೆ ಗಾಡ್ ಫಾದರ್ ಎಂದು ಹೆಸರಿಡಲಾಗಿದೆ. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದೇ ಸಿನಿಮಾದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ.

ಇದನ್ನೂ ಓದಿ: ಕೇಳ್ರಪ್ಪೋ ಕೇಳಿ.. ಖ್ಯಾತ ನಟಿ ಜೊತೆ ಗುಟ್ಟಾಗಿ ಮದ್ವೆಯಾಗ್ಬಿಟ್ರಂತೆ ಸಲ್ಲು! ಫೋಟೋಗಳು ಸಿಕ್ಕಾಪಟ್ಟೆ ವೈರಲ್​

ಇತ್ತೀಚೆಗೆ ಸಖತ್​ ಟ್ರೋಲ್ ಆಗಿದ್ದ ಸಲ್ಮಾನ್​ ಖಾನ್​!

ಸಲ್ಮಾನ್​ ಖಾನ್​ ಜೊತೆ ನಟಿ ಪೂಜಾ ಹೆಗ್ಡೆ ಕೂಡ ದಬಂಗ್​ ಟೂರ್​ನಲ್ಲಿ ಭಾಗಿ ಆಗಿದ್ದರು. ಈ ಹಿಂದೆ ಸಲ್ಮಾನ್​ ಖಾನ್​ ಜೊತೆ ಜಾಕಲಿನ್ ಫರ್ನಾಂಡಿಸ್​ ಈ ದಂಬಾಗ್​ ಟೂರ್​​ನಲ್ಲಿ ಭಾಗಿಯಾಗುತ್ತಾರೆ ಅಂತ ಹೇಳಲಾಗಿತ್ತು. ಆದರೆ, ಜಾಕಲಿನ್​ ಫರ್ನಾಂಡಿಸ್​ ಕೊರಳಿಗೆ ಬಹು ಕೋಟಿ ವಂಚಕ ಸುಕೇಶ್​ ಚಂದ್ರಶೇಖರ್​ ಕೇಸ್​ ಸುತ್ತಿಕೊಂಡಿದೆ. ಹೀಗಾಗಿ ಜಾಕಲಿನ್​ನಿಂದ ಸಲ್ಲು ಭಾಯ್​ ಅಂತರ ಕಾಯ್ದುಕೊಂಡಿದ್ದಾರೆ. ಪೂಜಾ ಹೆಗ್ಡೆ ಅವರನ್ನು ಈ ಬಾರಿ ಸಲ್ಮಾನ್​ ಖಾನ್​ ದಬಂಗ್​ ಟೂರ್​ಗೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ.

Published by:Vasudeva M
First published: