Video: ವೈರಲ್​ ಆಗುತ್ತಿದೆ ಬಾಲಿವುಡ್​ ಕಲಾವಿದರ ಕಿಕಿ ಚಾಲೆಂಜ್​ ವಿಡಿಯೋ..!

news18
Updated:July 30, 2018, 3:18 PM IST
Video: ವೈರಲ್​ ಆಗುತ್ತಿದೆ ಬಾಲಿವುಡ್​ ಕಲಾವಿದರ ಕಿಕಿ ಚಾಲೆಂಜ್​ ವಿಡಿಯೋ..!
news18
Updated: July 30, 2018, 3:18 PM IST
ನ್ಯೂಸ್​ 18 ಕನ್ನಡ 

ಐಸ್‍ಬಕೆಟ್ ಚಾಲೆಂಜ್​, ಸ್ವಚ್ಛ ಭಾರತ್ ಚಾಲೆಂಜ್​, ಫಿಟ್ನೆಸ್ ಚಾಲೆಂಜ್​. ಇವೆಲ್ಲ ಹಳೆಯದಾಯಿತು. ಈಗ ಹೊಸದೊಂದು ಚಾಲೆಂಜ್ ಶುರುವಾಗಿದೆ. ಬಿ-ಟೌನ್ ಸೆಲೆಬ್ರಿಟಿಗಳೆಲ್ಲ ಅದರ ಹಿಂದೆ ಬಿದ್ದಿದ್ದಾರೆ. ಅದೇ 'kiki' ಚಾಲೆಂಜ್​.

ಫಿಟ್‍ನೆಸ್ ಚಾಲೆಂಜ್ ನಂತರ ಬಿ-ಟೌನ್ ಬೆಡಗಿಯರು ಈಗ 'ಕಿಕಿ' ಚಾಲೆಂಜ್ ಎಂಬ ಹೊಸದೊಂದು ಚಾಲೆಂಜ್‍ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ 'ಕಿಕಿ' ಚಾಲೆಂಜ್ ಅಂದರೆ ಚಲಿಸ್ತಾ ಇರೋ ವಾಹನದಿಂದ ಇಳಿದು ಡ್ಯಾನ್ಸ್ ಮಾಡುವುದು. ಇದನ್ನ ಕನ್ನಡದ ರಣವಿಕ್ರಮ ಖ್ಯಾತಿಯ ಅದಾ ಶರ್ಮಾ, ಬಾಹುಬಲಿಯ ಐಟಂ ಡ್ಯಾನ್ಸರ್ ನೋರಾ ಫತೇಹಿ, ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಈ ಚಾಲೆಂಜ್​ ಸ್ವೀಕರಿದಿದ್ದು ಈಗ ವೈರಲ್ ಆಗುತ್ತಿದ್ದಾರೆ.


ಅಂದಹಾಗೆ ಕೆನಡಿಯನ್ ರ‍್ಯಾಪರ್​ ಡಾರ್ಕೆ​ ಅವರ 'kiki' ಹಾಡಿಗೆ ಈ ಪರೋಕ್ಷವಾಗಿ ಚಾಲೆಂಜ್‍ಗೆ ಚಾಲನೆ ಕೊಟ್ಟ ಮೊದಲಿಗ. ಚಲಿಸುತ್ತಿರೋ ವಾಹನದಿಂದ ಇಳಿದು ಮಾಡುವ ಡ್ಯಾನ್ಸ್ ಇದಾಗಿರೋದ್ರಿಂದ ದುಬೈನಲ್ಲಿ ಇದನ್ನ ಬ್ಯಾನ್ ಕೂಡ ಮಾಡಲಾಗಿದೆಯಂತೆ. ಹಾಗೆ ಮುಂಬೈ ಪೊಲೀಸರು ಸಾರ್ವಜನಿಕವಾಗಿ ಇದನ್ನ ಮಾಡಬೇಡಿ ಅಂತ ಎಚ್ಚರಿಕೆ ಸಹ ನೀಡಿದ್ದಾರೆ ಆದರೂ ನಟನಟಿಯರು ಇದರ ಹಿಂದೆ ಬಿದ್ದಿದ್ದಾರೆ.
Loading...

 

 
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...