Suhana Khan: ಸೈಲೆಂಟ್​ ಆಗಿ ಸಿನಿ ಜಗತ್ತಿಗೆ ಕಾಲಿಟ್ಟ ಶಾರುಖ್​ ಮಗಳು; ನಟನೆಯಲ್ಲಿ ಅಂಕ ಗಿಟ್ಟಿಸಿಕೊಂಡ ಸುಹಾನಾ

ಸುಹಾನಾ ವಿಚಾರವಾಗಿ ಈ ಮೊದಲು ಶಾರುಖ್​ ಅನೇಕ ಬಾರಿ ಮಾತನಾಡಿದ್ದಿದೆ. ನಟನಾ ತರಬೇತಿ ಪಡೆಯುತ್ತಿರುವ ಅವರು, ಶೀಘ್ರವೇ ಬಾಲಿವುಡ್​ಗೂ ಕಾಲಿಡಲಿದ್ದಾರೆ ಎನ್ನಲಾಗಿದೆ.

Rajesh Duggumane | news18-kannada
Updated:November 18, 2019, 3:31 PM IST
Suhana Khan: ಸೈಲೆಂಟ್​ ಆಗಿ ಸಿನಿ ಜಗತ್ತಿಗೆ ಕಾಲಿಟ್ಟ ಶಾರುಖ್​ ಮಗಳು; ನಟನೆಯಲ್ಲಿ ಅಂಕ ಗಿಟ್ಟಿಸಿಕೊಂಡ ಸುಹಾನಾ
ಸುಹಾನ್​ ಖಾನ್​
  • Share this:
ಬಾಲಿವುಡ್​ ಸ್ಟಾರ್​ ನಟ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಲೇ ಇದೆ. ಈ ವಿಚಾರದ ಬಗ್ಗೆ ಇನ್ನೂ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬಿದ್ದಿಲ್ಲ. ಈ ಮಧ್ಯೆ ಸುಹಾನಾ ಸೈಲೆಂಟ್​ ಆಗಿ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದು, ಕಿರು ಚಿತ್ರದ ಮೂಲಕ.

‘ದಿ ಗ್ರೇ ಪಾರ್ಟ್​ ಆಫ್​ ಬ್ಲೂ’ ಹೆಸರಿನ ಕಿರುಚಿತ್ರದಲ್ಲಿ ಸುಹಾನಾ ನಟಿಸಿದ್ದಾರೆ. ಈ ಕಿರುಚಿತ್ರ ಈಗ ರಿಲೀಸ್​ ಆಗಿದ್ದು, ಸುಹಾನಾ ನಟನೆಯಲ್ಲಿ ಅಂಕ ಗಳಿಸಿಕೊಂಡಿದ್ದಾರೆ. ಸ್ಯಾಂಡಿ (ಸುಹಾನಾ) ಪ್ರಪ್ರಥಮ ಬಾರಿಗೆ ಆಕೆಯ ಗೆಳೆಯನನ್ನು ಭೇಟಿ ಮಾಡುತ್ತಾಳೆ. ನಂತರ ಏನಾಗುತ್ತದೆ ಎನ್ನುವುದು ಸಿನಿಮಾದ ಒಂದೆಳೆ.

ಕೆಲ ದೃಶ್ಯಗಳಲ್ಲಿ ಸುಹಾನಾ ಶಾರುಖ್​ನಂತೆ ಕಾಣುತ್ತಾರೆ. ಈ ವಿಚಾರವನ್ನು ಅನೇಕರು ಗಮನಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಇಂಗ್ಲಿಶ್​ ಕಿರುಚಿತ್ರವಾಗಿದ್ದು, ಥಿಯಡೋರೆ ಜಿಮೆನೋ ನಿರ್ದೇಶನ ಮಾಡಿದ್ದಾರೆ.ಸುಹಾನಾ ವಿಚಾರವಾಗಿ ಈ ಮೊದಲು ಶಾರುಖ್​ ಅನೇಕ ಬಾರಿ ಮಾತನಾಡಿದ್ದಿದೆ. ನಟನಾ ತರಬೇತಿ ಪಡೆಯುತ್ತಿರುವ ಅವರು, ಶೀಘ್ರವೇ ಬಾಲಿವುಡ್​ಗೂ ಕಾಲಿಡಲಿದ್ದಾರೆ ಎನ್ನಲಾಗಿದೆ.

ಶಾರುಖ್​ ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್​ ಇರಲಿದೆ ಎಂಬುದು ಮೂಲಗಳ ಮಾಹಿತಿ. ಈ ವಿಚಾರ ಈಗ ಶಾರುಖ್​ ಅಭಿಮಾನಿಗಳಿಗೆ ಸಿಹಿ ಖುಷಿ ಹೆಚ್ಚಿಸಿದೆ. ಈ ಸಿನಿಮಾ ಮಾರ್ಚ್​ನಲ್ಲಿ ಸೆಟ್ಟೇರಲಿದೆ.

First published:November 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...