Deepika Padukone: ರಣವೀರ್​ ಸಿಂಗ್​, ಡಿಪ್ಪಿನಾ ಪ್ರೀತಿಯಿಂದ ಏನಂಥಾ ಕರೀತಾರೆ ಗೊತ್ತಾ? ಸಖತ್​ ಕ್ಯೂಟ್​ ಇದೆ..

ಪ್ರತಿಯೊಬ್ಬರೂ ದೀಪಿಕಾ ಮತ್ತು ರಣವೀರ್‌ ಸಿಂಗ್ ಆದಷ್ಟು ಬೇಗ ವಿವಾಹ ಬಂಧನಕ್ಕೆ ಒಳಗಾಗಲಿ ಎಂದು ಬಯಸಿದವರೇ. ಕೊನೆಗೂ 2018ರಲ್ಲಿ ಬಾಲಿವುಡ್‍(Bollywood)ನ ಈ ಜೋಡಿ ಹಕ್ಕಿಗಳು ದಾಂಪತ್ಯ ಜೀವನ ಪ್ರವೇಶಿಸಿದರು.

ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ

ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ

  • Share this:
ದೀಪಿಕಾ ಪಡುಕೋಣೆ(Deepika Padukone) ಮತ್ತು ರಣವೀರ್ ಸಿಂಗ್(Ranveer SIngh) ಪತ್ನಿ ದೀಪಿಕಾಗೆ ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ ಗೊತ್ತೇ..? ದೀಪಿಕಾ - ರಣವೀರ್‌ ಭಾರತದ ಅತ್ಯಂತ ಜನಪ್ರಿಯ ಬಾಲಿವುಡ್ ದಂಪತಿಗಳಲ್ಲಿ ಒಬ್ಬರು. ಅವರಿಬ್ಬರು ಡೇಟಿಂಗ್(Dating) ಆರಂಭಿಸಿದ್ದ ದಿನಗಳಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು. ಈ ಜೋಡಿ ತಮ್ಮಿಬ್ಬರ ನಡುವಿನ ಸಂಬಂಧವನ್ನು ಜನರಿಂದ ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ, ಸಾರ್ವಜನಿಕ ಸಮಾರಂಭಗಳಲ್ಲಿನ ಅವರ ವರ್ತನೆಗಳು, ಅಭಿಮಾನಿಗಳ ಕುತೂಹಲ ಕೆರಳಿಸುತ್ತಿದ್ದವು. ಪ್ರತಿಯೊಬ್ಬರೂ ದೀಪಿಕಾ ಮತ್ತು ರಣವೀರ್‌ ಸಿಂಗ್ ಆದಷ್ಟು ಬೇಗ ವಿವಾಹ ಬಂಧನಕ್ಕೆ ಒಳಗಾಗಲಿ ಎಂದು ಬಯಸಿದವರೇ. ಕೊನೆಗೂ 2018ರಲ್ಲಿ ಬಾಲಿವುಡ್‍(Bollywood)ನ ಈ ಜೋಡಿ ಹಕ್ಕಿಗಳು ದಾಂಪತ್ಯ ಜೀವನ ಪ್ರವೇಶಿಸಿದರು.

ರಣವೀರ್​ ಸಿಂಗ್​ನ ಏನಂಥಾ ಕರೀತಾರೆ ಗೊತ್ತಾ ಡಿಪ್ಪಿ?

ಮದುವೆಗೂ ಮುನ್ನ ತಮ್ಮ ಜೀವನ ಹೇಗಿತ್ತು ಮತ್ತು ಮದುವೆಯ ನಂತರ ಹೇಗಿದೆ ಎಂಬುದರ ಕುರಿತು ರಣವೀರ್‌ ಮತ್ತು ದೀಪಿಕಾ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ತನ್ನ ಪತಿಯು ತನ್ನನ್ನು ಯಾವ ನಿಕ್‍ನೇಮ್‍ನಿಂದ ಕರೆಯುತ್ತಾರೆ ಎಂಬುದನ್ನು ಕೂಡ ದೀಪಿಕಾ ಪಡುಕೋಣೆ ಬಹಿರಂಗಪಡಿಸಿದ್ದರು.

ಪತ್ನಿ ದೀಪಿಕಾ ಕಂಡ್ರೆ ರಣವೀರ್​ಗೆ ಜಾಸ್ತಿ ಪ್ರೀತಿ!

ದೀಪಿಕಾ ಅವರಿಗೆ, ಒಂದೇ ಜಾಗದಲ್ಲಿ ಸುಮ್ಮನೇ ಕುಳಿತಿರದೆ ಮತ್ತು ನಿರಂತರವಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುವ ಅಭ್ಯಾಸ ಇದೆಯಂತೆ. ಪತ್ನಿಯ ಈ ಗುಣವನ್ನು ಕಂಡು ರಣವೀರ್‌ ಆಕೆಗೊಂದು ಅಡ್ಡ ಹೆಸರನ್ನು ಇಟ್ಟಿದ್ದಾರಂತೆ. ದೀಪಿಕಾರಂತ ನೀಳಕಾಯದ ಸುಂದರಿಗೆ, ಪತಿ ಯಾವ ಹೆಸರಿಟ್ಟಿರಬಹುದು ಎಂಬ ಕುತೂಹಲವೇ..?

ಡಿಪ್ಪಿಗೆ ಫಟ್​ ಫಟ್​ ಅಂತ ಕರೀತಾರಂತೆ ರಣವೀರ್​!

ಫಟ್ ಫಟ್..! ಹೌದು, ಇದು ರಣ್‍ವೀರ್ ಸಿಂಗ್ ತಮ್ಮ ಸುಂದರ ಪತ್ನಿಗೆ ಇಟ್ಟಿರುವ ಅಡ್ಡ ಹೆಸರು. ಯಾಕೆಂದರೆ, ತಮ್ಮ ಪತ್ನಿ ಒಂದೇ ಕಡೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ ಮತ್ತು ಆಕೆಗೆ ಮಾಡಲು ಏನಾದರೂ ಒಂದು ಕೆಲಸ ಬೇಕೇ ಬೇಕು ಎಂದು ರಣವೀರ್‌ಗೆ ಅನಿಸುತ್ತದೆಯಂತೆ. ರಣವೀರ್‌ ಕೊಟ್ಟಿರುವ ಈ ಅಡ್ಡ ಹೆಸರು ಮಜವಾಗಿದೆ, ಜೊತೆಗೆ ಮುದ್ದಾಗಿಯೂ ಇದೆ ಅಲ್ಲವೇ..?

ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ಅಭಿಷೇಕ್​ ಬಚ್ಚನ್​.. ಅಗ್ರಾ ಜೈಲಿನಲ್ಲಿ `ದಸ್ವಿ’ ಪ್ರೀಮಿಯರ್​ ಶೋ!

ಇದೇ ಸಂದರ್ಶನದಲ್ಲಿ, ದೀಪಿಕಾ ಪಡುಕೋಣೆ ಅವರು, ತನ್ನ ಪತಿ ರಣವೀರ್‌ ಒಂದು ಸೋಫಾದಂತೆ ಕಾಣುತ್ತಾರೆ ಎಂದು ಹೇಳಿದ್ದರು. ದೀಪಿಕಾ ಹಾಗೆ ಹೇಳಲು ಒಂದು ಕಾರಣವಿದೆ. ಅದೇನೆಂದರೆ, 2013 ರಲ್ಲಿ ಒಂದರ ಮೇಲೊಂದು ಒಟ್ಟು 4 ಹಿಟ್ ಸಿನಿಮಾಗಳನ್ನು ನೀಡಿದ ಖುಷಿಗೆ ದೀಪಿಕಾ ಪಾರ್ಟಿ ಒಂದನ್ನು ಆಯೋಜಿಸಿದ್ದರು. ಪಾರ್ಟಿಯ ಥೀಮ್ , ಕಪ್ಪು ಮತ್ತು ಚಿನ್ನದ ಬಣ್ಣವಾಗಿತ್ತು. ರಣವೀರ್‌ ಸಿಂಗ್ ಅವರಿಗೆ ಚಿತ್ರ ವಿಚಿತ್ರ ರೀತಿಯಲ್ಲಿ ಉಡುಪುಗಳನ್ನು ತೊಡುವ ಖಯಾಲಿ ಇದೆ ಎಂಬುವುದು ನಿಮಗೆಲ್ಲಾ ಗೊತ್ತೇ ಇದೆ. ಈ ಪಾರ್ಟಿಯಲ್ಲಿ ನಡೆದದ್ದು ಕೂಡ ಅದೇ.

ರಾಮ್​ ಲೀಲಾ ಸಿನಿಮಾದಲ್ಲಿ ಒಟ್ಟಿಗೆ ನಟನೆ!

ಗೋಲಿಯೋಂಕಿ ರಾಸ್‍ಲೀಲಾ-ರಾಮ್ ಲೀಲಾ ಸಿನಿಮಾದಲ್ಲಿ ಅವರಿಬ್ಬರು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದರು, ಅವರಿಬ್ಬರ ನಡುವೆ ಡೇಟಿಂಗ್ ಶುರುವಾಗಿದ್ದು ಕೂಡ ಅದೇ ಸಿನಿಮಾದಿಂದ. ಬಳಿಕ ಈ ಜೋಡಿ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾಪತ್ ಸಿನಿಮಾಗಳಲ್ಲಿ ಕೂಡ ಜೊತೆಯಾಗಿ ನಟಿಸಿತು. ಕೆಲವು ಸಮಯದ ಹಿಂದೆ ಬಿಡುಗಡೆ ಆಗಿದ್ದ, ರಣವೀರ್‌ ಅವರು ಕ್ರಿಕೆಟಿಗ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದ, 83 ಸಿನಿಮಾದಲ್ಲಿ ದೀಪಿಕಾ ಅವರು, ಕಪಿಲ್ ದೇವ್ ಅವರ ಪತ್ನಿ ರೋಮಿ ದೇವ್ ಪಾತ್ರವನ್ನು ನಿರ್ವಹಿಸಿದ್ದರು.

ಇದನ್ನೂ ಓದಿ: ಮೆಟಾವರ್ಸ್​ನಲ್ಲೂ ರಾಕಿ ಭಾಯ್​ದೇ ಹವಾ.. ಇಡೀ ವಿಶ್ವದಲ್ಲೇ ಹೊಸ ದಾಖಲೆ ಬರೆದ ಕೆಜಿಎಫ್​​ವರ್ಸ್!

ಡಿಪ್ಪಿ-ರಣವೀರ್​​ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಈ ದಂಪತಿ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಅವರ ಕೈಯಲ್ಲಿ ಪ್ರಸ್ತುತ, ಪಠಾಣ್, ಪ್ರಾಜೆಕ್ಟ್ ಕೆ, ಫೈಟರ್ ಮತ್ತು ದ ಇಂಟರ್ನ್ ಸಿನಿಮಾಗಳಿವೆ. ರಣವೀರ್‌ ಸಿಂಗ್ ಅವರು, ಜಯೇಶ್‍ಭಾಯ್ ಜೋರ್‍ದಾರ್, ಸರ್ಕಸ್ ಮತ್ತು ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Published by:Vasudeva M
First published: