Wajid Khan Passes Away: ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್​ ಖಾನ್​ ನಿಧನ

Wajid Khan Death: ಬಾಲಿವುಡ್​ಗೆ ಒಂದಾದರ ಮೇಲೆ ಒಂದರಂತೆ ಬರ ಸಿಡಿಲು ಬಂದಪ್ಪಳಿಸುತ್ತಿದೆ. ಇರ್ಫಾನ್​ ಖಾನ್​ ಹಾಗೂ ರಿಷಿ ಅವರನ್ನು ಕಳೆದುಕೊಂಡ ಬಡವಾಗಿದ್ದ ಬಾಲಿವುಡ್​ಗೆ ಈಗ ಮತ್ತೊಂದು ಬರ ಸಿಡಿಲು ಬಂದಪ್ಪಳಿಸಿದೆ.

news18-kannada
Updated:June 1, 2020, 8:35 AM IST
Wajid Khan Passes Away: ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್​ ಖಾನ್​ ನಿಧನ
ವಾಜಿದ್ ಖಾನ್ (ಜೂನ್ 1, 2020) : ಜೂನ್ ಮೊದಲ ದಿನವೇ ಬಾಲಿವುಡ್​ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು.
  • Share this:
ಮಹಾಮಾರಿ ಕೊರೊನಾ ವೈರಸ್​​ಗೆ ಇಡೀ ವಿಶ್ವವೇ ತತ್ತರಿಸಿದೆ. ವಿಶ್ವಾದ್ಯಂತ 3.70 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಈ ಸೋಂಕಿನಿಂದಾಗಿ ಈಗಲೂ ಲಕ್ಷಾಂತರ ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಭಾರತದಲ್ಲೂ ಕೊವಿಡ್ 19 ಅಟ್ಟಹಾಸಗೈಯುತ್ತಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 2 ಲಕ್ಷ ಸಮೀಪಿಸುತ್ತಿದ್ದು, ಸಾವಿಗೀಡಾದವರ ಸಂಖ್ಯೆ 5 ಸಾವಿರ ದಾಟಿದೆ. ಅದರ ಬೆನ್ನಲ್ಲೇ ಭಾರತೀಯರಿಗೆ ಅದರಲ್ಲೂ ಬಾಲಿವುಡ್​ಗೆ ಸಾವಿನ ಸುದ್ದಿಗಳು ಒಂದಾದ ಮೇಲೊಂದರಂತೆ ಬರಸಿಡಿಲಿನಂತೆ ಬಂದೆರಗುತ್ತಿವೆ.

ಹೌದು, ಕಳೆದ ಏಪ್ರಿಲ್ 29ರಂದು ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅನಾರೋಗ್ಯಕ್ಕೊಳಗಾಗಿ ವಿಧಿವಶರಾಗಿದ್ದರು. ಅದರ ನಂತರದ ದಿನವೇ ಅರ್ಥಾತ್ ಏಪ್ರಿಲ್ 30ರಂದು ಹಿರಿಯ ನಟ ರಿಷಿ ಕಪೂರ್ ಕೂಡ ಅಸ್ತಂಗತರಾಗಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಇಬ್ಬರು ಖ್ಯಾತನಾಮರನ್ನು ಕಳೆದುಕೊಂಡು ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸಾಕಷ್ಟು ನೊಂದಿದ್ದರು. ಇನ್ನೇನು ಲಾಕ್​ಡೌನ್ ಮುಗಿದು, ಕೆಲ ದಿನಗಳಲ್ಲೇ ಚಿತ್ರೀಕರಣ ಶುರುವಾಗುತ್ತೆ, ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳು ಮತ್ತೆ ಓಪನ್ ಆಗುತ್ತವೆ ಅಂತ ನಿಟ್ಟುಸಿರು ಬಿಟ್ಟಿದ್ದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತೆ ಉಸಿರು ಬಿಗಿಹಿಡಿದಿದ್ದಾರೆ. ಅದಕ್ಕೆ ಕಾರಣ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಸಾವು.

ವಾಜಿದ್ ಖಾನ್. ಸಾಜಿದ್ – ವಾಜಿದ್ ಜೋಡಿ ಅಂತಲೇ ಬಾಲಿವುಡ್​​ನಲ್ಲಿ ಹೆಸರು ಮಾಡಿದ್ದ ಸಹೋದರರು. 1998ರಲ್ಲಿ ಸಲ್ಮಾನ್ ಖಾನ್ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಈ ಜೋಡಿ ಮತ್ತೆ ಹಿಂದಿರುಗಿ ನೋಡಿರಲಿಲ್ಲ. ಆ ಬಳಿಕ 22 ವರ್ಷಗಳ ಸಂಗೀತಪಯಣದಲ್ಲಿ 50ಕ್ಕೂ ಹೆಚ್ಚು ಹಿಟ್, ಸೂಪರ್ಹಿಟ್ ಸಿನಿಮಾಗಳಿಗೆ ಹಲವು ಚಾರ್ಟ್ಬಸ್ಟರ್ ಸಂಗೀತ ನೀಡಿದ್ದರು. ಅದರಲ್ಲೂ ಸಲ್ಮಾನ್ ಖಾನ್ರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ, ‘ದಬಾಂಗ್’, ‘ಹಲೋ’, ‘ವೀರ್’, ‘ಪಾರ್ಟನರ್’, ‘ವಾಂಟೆಡ್’ , ‘ಏಕ್ ಥಾ ಟೈಗರ್’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ: ಚೀನಾ ವಿರುದ್ಧ ತಾರೆಯರ ವ್ಯಾಲೆಟ್ ಸಮರ!; ಅಷ್ಟಕ್ಕೂ ನಟ-ನಟಿಯರು ಮಾಡಿದ್ದೇನು ಗೊತ್ತಾ?

ಅವರು ಸಂಗೀತ ನೀಡಿದ ಕೊನೆಯ ಸಿನಿಮಾ ಕೂಡ ಸಲ್ಮಾನ್ ಖಾನ್ ನಾಯಕರಾಗಿದ್ದ ‘ದಬಾಂಗ್ 3’.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್, ಅವರನ್ನು ಕೆಲ ದಿನಗಳ ಹಿಂದೆ ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಪರಿಣಾಮ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ. ಲಾಕ್​ಡೌನ್ ಮುಗಿದು ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತೆ ಅಂತ ಎದುರು ನೋಡುತ್ತಿದ್ದ ಬಾಲಿವುಡ್ ಮಂದಿ ಮತ್ತೆ ಕಣ್ಣೀರಾಗಿದ್ದಾರೆ.
First published: June 1, 2020, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading