ಡಿ ಬಾಸ್ ಅಭಿಮಾನಿಗಳಿಗಿದು ಹೆಮ್ಮೆಯ ವಿಷಯ: ರೋಹಿತ್ ಶೆಟ್ಟಿ ಬಾಯಲ್ಲಿ ಚಾಂಲೆಂಜಿಂಗ್​ ಸ್ಟಾರ್ ಹೆಸರು..!

ಬಾಲಿವುಡ್​ನ ಸ್ಟಾರ್​ ನಿರ್ದೇಶಕ ರೋಹಿತ್ ಶೆಟ್ಟಿ ಕನ್ನಡದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಬಗ್ಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನು. ಕನ್ನಡದ ಸಿನಿಮಾ ಹಾಗೂ ಕನ್ನಡ ಸಿನಿಮಾಗಳ ಅಭಿಮಾನಿಗಳ ಬಗ್ಗೆ ಶೆಟ್ಟಿ ಹೇಳಿದ್ದೇನು..?

Anitha E | news18
Updated:March 16, 2019, 7:35 PM IST
ಡಿ ಬಾಸ್ ಅಭಿಮಾನಿಗಳಿಗಿದು ಹೆಮ್ಮೆಯ ವಿಷಯ: ರೋಹಿತ್ ಶೆಟ್ಟಿ ಬಾಯಲ್ಲಿ ಚಾಂಲೆಂಜಿಂಗ್​ ಸ್ಟಾರ್ ಹೆಸರು..!
ನಟ ದರ್ಶನ್​ ಬಗ್ಗೆ ಮಾತನಾಡಿದ ನಿರ್ದೇಶಕ ರೋಹಿತ್​ ಶೆಟ್ಟಿ
Anitha E | news18
Updated: March 16, 2019, 7:35 PM IST
ಬಿಟೌನ್ ಒಂದು ವಿಷಯದ ಬಗ್ಗೆ ಈಗ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ. ಅದು ದಕ್ಷಿಣ ಸಿನಿಮಾಗಳ ಕಲೆಕ್ಷನ್ ವಿಚಾರ. ಈ ವಿಚಾರ ಬಂದಾಗ ಖ್ಯಾತ ಬಾಲಿವುಡ್ ನಿರ್ದೇಶಕರು ಕನ್ನಡದ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಹೇಳಿದ್ದಾರೆ. ಯಾವ ನಿರ್ದೇಶಕ ಅದು ಚಾಲೆಂಜಿಂಗ್ ಸ್ಟಾರ್ ಬಗ್ಗೆ ಏನು ಹೇಳಿದ್ದಾರೆ ಅನ್ನೋ ಸ್ಟೋರಿ ಇಲ್ಲಿದೆ.

ಇದನ್ನೂ ಓದಿ: ಜಗ್ಗೇಶ್​ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಪ್ರೀಮಿಯರ್​ ಪದ್ಮಿನಿ..!

ಹೌದು, ಬಾಲಿವುಡ್‍ನಲ್ಲಿ ಈಗ ಚರ್ಚೆಗೆ ಹಾಟ್​ ಟಾಪಿಕ್​ ದಕ್ಷಿಣ ಭಾರತೀಯ ಸಿನಿಮಾಗಳ  ಅಬ್ಬರ. ಬಾಲಿವುಡ್ ಸಿನಿಮಾಗಳು ಇಡೀ ದೇಶದಲ್ಲೇ ತೆರೆ ಕಂಡರೂ 100 ಕೋಟಿ ಗಳಿಸೋಕೆ ಕಷ್ಟ ಪಡುವಾಗ, ದಕ್ಷಿಣ ಭಾರತದ ಸಿನಿಮಾಗಳು ಒಂದು ರಾಜ್ಯದಲ್ಲೇ ಹೇಗೆ ಸುಲಭವಾಗಿ ನೂರು ಕೋಟಿ ದಾಟುತ್ತಿವೆ ಅನ್ನೋ ವಿಚಾರ ಬಿಟೌನ್‍ನಲ್ಲಿ ಚರ್ಚೆಯಾಗುತ್ತಿದೆ. ಯಾಕೆ ಹೀಗೆ ಅನ್ನುವ ಪ್ರಶ್ನೆಗೆ ಬಾಲಿವುಡ್‍ನ ಸ್ಟಾರ್ ನಿರ್ದೇಶಕ  ರೋಹಿತ್ ಶೆಟ್ಟಿ ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರನ್ನು ಉದಾಹರಣೆಯಾಗಿ ನೀಡಿ ಮಾತನಾಡಿದ್ದಾರೆ.

ರೋಹಿತ್​ ಶೆಟ್ಟಿ ದರ್ಶನ್​ ಬಗ್ಗೆ ಹೇಳಿರುವ ವಿಷಯ  4.25  to 5:22 ರ ನಡುವೆ ಇದೆ.... ದರ್ಶನ್ ಹೆಸರು ನೆನಪಾಗದಿದ್ದರೂ ಅವರ ಹುಟ್ಟುಹಬ್ಬದ ವಿಡಿಯೋ ಬಗ್ಗೆ ಮಾತನಾಡಿದ್ದಾರೆ ರೋಹಿತ್​. 'ದಕ್ಷಿಣ ಭಾರತದ ನಟರೊಬ್ಬರ ಹುಟ್ಟುಹಬ್ಬದ ದಿನದ ಹಿಂದಿನ ರಾತ್ರಿ 12 ರಿಂದಲೇ ಅಭಿಮಾನಿಗಳು ಅವರ ಮನೆ ಮುಂದೆ ಸೇರುತ್ತಾರೆ. ಮರುದಿನ ರಾತ್ರಿಯವರೆಗೂ ತಮ್ಮ ನೆಚ್ಚಿನ ನಟನನ್ನು ನೋಡೋಕೆ ಕಾದು ಕುಳಿತಿರುತ್ತಾರೆ. ಆ ನಟ ಹುಟ್ಟುಹಬ್ಬಕ್ಕೆ ಸಾವಿರಾರು ಕೇಕ್ ಕಟ್ ಮಾಡುತ್ತಾರೆ. ಕನ್ನಡದ ನಟ ನನಗೆ ಅವರ ಹೆಸರು ನೆನಪಿಲ್ಲ ಆದರೆ ವಿಡಿಯೋ ನೋಡಿದೆ ಅಂತ ಹೇಳುವ ಮೂಲಕ ದಕ್ಷಿಣದ ನಟರಿಗಿರುವ ಇಂತಹ ಅಭಿಮಾನಿಗಳ ಅಭಿಮಾನವೇ ಸಿನಿಮಾಗಳು ಸುಲಭವಾಗಿ ನೂರು ಕೋಟಿ ಗಳಿಸೋಕೆ ಕಾರಣವಾಗುತ್ತಿವೆ. ಇಂತಹ ನಟರ ಸಿನಿಮಾಗಳನ್ನು ಅಭಿಮಾನಿಗಳು ಮೂರು ದಿನ ಚಿತ್ರಮಂದಿರದಲ್ಲಿ ಹಿಟ್ ಆಗುವಂತೆ ಮಾಡುತ್ತಾರೆ' ಅಂತ ಚೆನ್ನೈ ಎಕ್ಸ್​ಪ್ರೆಸ್ ನಿರ್ದೇಶಕ ಹೇಳಿದ್ದಾರೆ.
Loading...

ಅಲ್ಲದೆ ತೆಲುಗು ಹಾಗೂ ತಮಿಳು ಸಿನಿ ರಂಗದಲ್ಲೂ ನಟರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಭಿಮಾನಿಗಳಿಂದಲೇ ಈಗ ಸಿನಿಮಾ ಬ್ಯುಸಿನೆಸ್ ನಿರ್ಧಾರವಾಗುತ್ತೆ. 'ಬಾಹುಬಲಿ', 'ಕೆಜಿಎಫ್‍'ನಂತಹ ಸಿನಿಮಾಗಳು ಬಂದ ಮೇಲಂತೂ ಬಾಲಿವುಡ್ ಕೂಡ ದಕ್ಷಿಣ ಭಾರತೀಯ  ಸಿನಿಮಾಗಳ ಯಶಸ್ಸಿನ ಹಿಂದಿರೋ ರಹಸ್ಯದ ಬಗ್ಗೆ ಮತ್ತೆ ಮತ್ತೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಸೈನಾ ನೆಹ್ವಾಲ್​ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಬದಲಾಗಿ ಪರಿಣಿತಿ ಚೋಪ್ರಾ..!

ಕಾಲ ಬದಲಾಗಿದೆ, ದಕ್ಷಿಣ ಅಂದರೆ ಕನ್ನಡವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದ ದಿನಗಳಿದ್ದವು. ಈಗ ಬಿ-ಟೌನ್ ಕನ್ನಡ ಸಿನಿಮಾಗಳ ಬಗ್ಗೆಯೂ ಚರ್ಚಿಸುತ್ತಿದೆ. ಯಜಮಾನ ಟ್ರೈಲರ್ ಕೂಡ 5 ದಿನ 'ಯೂಟ್ಯೂಬ್ ಟ್ರೆಂಡಿಂಗ್' ನಂಬರ್ 1 ಸ್ಥಾನದಲ್ಲಿದ್ದು, ದಾಖಲೆ ಬರೆದಿತ್ತು. ಇದಲ್ಲವಾ ಕನ್ನಡದ ಪವರ್ ಅಂದರೆ.

PHOTOS: ನಟಿ ರಾಧಿಕಾ ಪಂಡಿತ್​ರ ಹೊಸ ಲುಕ್​​: ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರಾ ಯಶ್​ ಮಡದಿ..! 
First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...