Deepika Padukone: ಕೋಟಿಗಳ ಒಡತಿ ದೀಪಿಕಾ ಪಡುಕೋಣೆ ಹೋಟೆಲ್​ಗಳಲ್ಲಿ ಏನು​ ಕದಿಯುತ್ತಾರೆ ಗೊತ್ತಾ..!

Deepika Padukone: ವಿವಾಹವಾದ ನಂತರ ಗಂಡ ರಣವೀರ್ ಸಿಂಗ್​ ಜತೆ ಅಭಿನಯಿಸುತ್ತಿರುವ ಸಿನಿಮಾ 83. ಇದರಲ್ಲಿ ಗಂಡನಿಗಂತ ಹೆಚ್ಚಾಗಿ ದೀಪಿಕಾ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗಷ್ಟೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಇಂತಹ ನಟಿಯ ಬಗ್ಗೆ ಒಂದು ಆಸಕ್ತಿಕರ ವಿಷಯ ಹೊರ ಬಿದ್ದಿದೆ. 

Anitha E | news18
Updated:August 2, 2019, 3:56 PM IST
Deepika Padukone: ಕೋಟಿಗಳ ಒಡತಿ ದೀಪಿಕಾ ಪಡುಕೋಣೆ ಹೋಟೆಲ್​ಗಳಲ್ಲಿ ಏನು​ ಕದಿಯುತ್ತಾರೆ ಗೊತ್ತಾ..!
ದೀಪಿಕಾ ಪಡುಕೋಣೆ
  • News18
  • Last Updated: August 2, 2019, 3:56 PM IST
  • Share this:
ತಮ್ಮ ಅಭಿನಯ ಹಾಗೂ ಸೌಂದರ್ಯದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದರು ನಟಿ ದೀಪಿಕಾ ಪಡುಕೋಣೆ. ಬಿ-ಟೌನ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಹೌದು.ವಿವಾಹದ ನಂತರ ಗಂಡ ರಣವೀರ್ ಸಿಂಗ್​ ಜತೆ ಅಭಿನಯಿಸುತ್ತಿರುವ ಸಿನಿಮಾ '83'. ಇದರಲ್ಲಿ ಗಂಡನಿಗಂತ ಹೆಚ್ಚಾಗಿ ದೀಪಿಕಾ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗಷ್ಟೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಇಂತಹ ನಟಿಯ ಬಗ್ಗೆ ಒಂದು ಆಸಕ್ತಿಕರ ವಿಷಯ ಹೊರ ಬಿದ್ದಿದೆ.

ಹೌದು, ಕೋಟಿಗಳ ಒಡತಿ ದೀಪಿಕಾ ತಾವು ಉಳಿದುಕೊಳ್ಳುವ ಹೋಟೆಲ್​ಗಳಲ್ಲಿ ಇಡುವ ಶಾಂಪೂ ಬಾಟಲ್​ಗಳನ್ನು ಕದಿಯುತ್ತಾರಂತೆ. ಹೀಗೆಂದು ದೀಪಿಕಾ ಅವರ ಸ್ನೇಹಿತೆ ಸ್ನೇಹಾ ರಾಮಚಂದರ್​​ ಬರೆದುಕೊಂಡಿದ್ದಾರೆ. ಸ್ನೇಹಾ ತಾವು ಆರಂಭಿಸಿರುವ ವೆಬ್​ಸೈಟ್​ನಲ್ಲಿ ಪ್ರಕಟಿಸಿರುವ ದೀಪಿಕಾರ ಕುರಿತಾದ ಲೇಖನದಲ್ಲಿ ಡಿಪ್ಪಿಗೆ ಸಂಬಂಧಿಸಿದ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Bollywood star Deepika Padukone steals miniature shampoo bottles from hotels
ಸ್ನೇಹಾ ರಾಮಚಂದರ್​ ಅವರು ಬರೆದುಕೊಂಡಿರುವ ಲೇಖನ


ದೀಪಿಕಾ ಟ್ರಾವೆಲಿಂಗ್​ನಲ್ಲಿರುವಾಗ ಸದಾ ಅವರು ಉಳಿದುಕೊಳ್ಳುವ ಹೋಟೆಲ್​ನ ಕೊಠಡಿಗಳಿಂದ ಪುಟ್ಟ ಪುಟ್ಟ ಟ್ರಾವೆಲ್​ ಪ್ಯಾಕ್​​ ಶಾಂಪೂ ಬಾಟಲ್​ಗಳನ್ನು ಕದಿಯುತ್ತಾರಂತೆ. ಅದಂರೆ, ಅವುಗಳೆಂದರೆ ದೀಪಿಕಾಗೆ ತುಂಬಾ ಇಷ್ಟವಂತೆ ಅವು ಪ್ರಯಾಣದಲ್ಇ ಸಹ ಪಯಣಿಗರಿದ್ದಂತೆ ಅಂತೆ. ಅದಕ್ಕಾಗಿಯೇ ದೀಪಿಕಾ ಅವುಗಳನ್ನು ತೆಗೆದುಕೊಂಡು ಹೋಗುತ್ತಾರಂತೆ.

'ಛಪಾಕ್' ಚಿತ್ರದಲ್ಲಿ ದೀಪಿಕಾ- ವಿಕ್ರಾಂತ್​
ದೀಪಿಕಾ ಪಡುಕೋಣೆ ಮೇಘನಾ ಗುಲ್ಜಾರ್​ರ 'ಛಪಾಕ್​' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಜತೆಗೆ '83' ಸಿನಿಮಾದಲ್ಲೂ ಕಪಿಲ್​ ದೇವ್​ ಅವರ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ: ಪೂಜಾ ಹೆಗ್ಡೆಗೆ ನಕ್ಷತ್ರ ತೋರಿಸುತ್ತಿದ್ದಾರಾ ಲಿಲ್ಲಿ..?

 

HBD Tapsi: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ತಾಪ್ಸಿ ಪನ್ನು ಹಾಟ್​ ಚಿತ್ರಗಳು..!


 
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading