Rajkumar: ಅಂದು ಅಣ್ಣಾವ್ರನ ಕಂಡು ಓಡಿ ಬಂದಿದ್ರಂತೆ ಅಮಿತಾಭ್​ ಬಚ್ಚನ್​! ಹೀಗಿತ್ತು ಡಾ. ರಾಜ್​-ಬಿಗ್​ ಬಿ ಒಡನಾಟ

ಅಭಿಮಾನಿ (Fan) ಗಳನ್ನು ದೇವರು (God) ಎಂದು ಯಾವಾಗಲೂ ಹೇಳುವ ಡಾ. ರಾಜ್ ಕುಮಾರ್ ಈ ಸ್ಟಾರ್‌ಡಮ್ (Stardom) ಅನ್ನು ಎಂದಿಗೂ ಅವರ ತಲೆಗೆ ತೆಗೆದುಕೊಂಡಿರಲಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಮಿತಾಭ್​ ಬಚ್ಚನ್​, ಡಾ. ರಾಜ್​ಕುಮಾರ್​

ಅಮಿತಾಭ್​ ಬಚ್ಚನ್​, ಡಾ. ರಾಜ್​ಕುಮಾರ್​

  • Share this:
ನಿನ್ನೆಗೆ ಎಂದರೆ ಏಪ್ರಿಲ್ (April) 24ನೇ ತಾರೀಖಿಗೆ ಕನ್ನಡ ಚಲನಚಿತ್ರೋದ್ಯಮದ ಅಣ್ಣಾವ್ರು ಡಾ.ರಾಜ್ ಕುಮಾರ್ (Dr Rajkumar) ಅವರು ಬದುಕಿದ್ದರೆ, ಅವರಿಗೆ 93 ವರ್ಷ ವಯಸ್ಸಾಗುತ್ತಿತ್ತು. 1929 ರಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಎಂಬ ಹೆಸರಿನಿಂದ ಜನಿಸಿದ ಅವರು ರಾಜ್ ಕುಮಾರ್ ಎಂಬ ಹೆಸರಿನಿಂದ ಎಲ್ಲರ ಮನೆ ಮಾತಾದರು. ಕನ್ನಡ (Kannada) ಕಲೆ ಮತ್ತು ಸಾಹಿತ್ಯದಲ್ಲಿ ಅವರಿಗೆ ನಿರ್ವಿವಾದ ಸ್ಥಾನವಿದೆ. ಅವರ ಅಸಾಧಾರಣ ನಟನಾ ಕೌಶಲ್ಯದ ಜೊತೆಗೆ, ಅಣ್ಣಾವ್ರು ಎಂದು ಜನಪ್ರಿಯರಾಗಿದ್ದ ರಾಜ್ ಕುಮಾರ್ ಅವರು ತಮ್ಮ ವಿನಮ್ರತೆಗೆ ಹೆಸರುವಾಸಿಯಾಗಿದ್ದರು. ಅಭಿಮಾನಿ (Fan) ಗಳನ್ನು ದೇವರು (God) ಎಂದು ಯಾವಾಗಲೂ ಹೇಳುವ ಡಾ. ರಾಜ್ ಕುಮಾರ್ ಈ ಸ್ಟಾರ್‌ಡಮ್ (Stardom) ಅನ್ನು ಎಂದಿಗೂ ಅವರ ತಲೆಗೆ ತೆಗೆದುಕೊಂಡಿರಲಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಣ್ಣಾವ್ರ ಬಗ್ಗೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹೇಳಿದ್ದೇನು?

ಡಾ. ರಾಜ್ ಅವರು ಕನ್ನಡ ಚಿತ್ರರಂಗವನ್ನು ಹೊರತುಪಡಿಸಿ ಬೇರೆ ಚಿತ್ರೋದ್ಯಮದವರ ಜೊತೆಗೆ ಹೇಗೆ ಒಡನಾಟವನ್ನು ಹೊಂದಿದ್ದರು ಅಂತ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ. ಅಣ್ಣಾವ್ರ ಬಗ್ಗೆ ಮತ್ತು ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಒಡನಾಟ ಹೇಗಿತ್ತು ಮತ್ತು ಅವರಿಬ್ಬರು ಎಂದಾದರೂ ಪರಸ್ಪರ ಭೇಟಿಯಾಗಿದ್ದರೆ ಎಂಬ ಪ್ರಶ್ನೆ ನಮ್ಮ ನಿಮ್ಮೆಲ್ಲರ ತಲೆಯಲ್ಲಿ ಮೂಡಿರುತ್ತದೆ.

ಡಾ. ರಾಜ್​ ಕಂಡು ಅಂದು ಅಮಿತಾಭ್​ ಹೀಗ್ ಹೇಳಿದ್ರಂತೆ!

ಇದರ ಬಗ್ಗೆ ಇಲ್ಲೊಬ್ಬ ಹಾಸ್ಯ ನಟರು ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ ನೋಡಿ. ತಮ್ಮ ಮಿಮಿಕ್ರಿ ಕೌಶಲ್ಯಗಳಿಗೆ ಜನಪ್ರಿಯರಾಗಿರುವ ನಟ ದಯಾನಂದ್ ಅವರು ಅಣ್ಣಾವ್ರು ಅವರ ಮಗುವಿನಂತಹ ಗುಣವನ್ನು ಪ್ರದರ್ಶಿಸಿರುವ ಒಂದು ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರು ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ನಡುವಿನ ಭೇಟಿಯನ್ನು ಅವರು ನೆನಪಿಸಿಕೊಂಡರು, ಅವರು ಆಗ ಕರ್ನಾಟಕದಲ್ಲಿ ನಿರ್ದೇಶಕ ಕೆ.ವಿ.ರಾಜು ಅವರ ಇಂದ್ರಜೀತ್‌ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು.

ಇದನ್ನೂ ಓದಿ: Ram Charan ಗೆ ಹೆಂಡ್ತಿ ಕಂಡ್ರೆ ಭಯನಾ? ಅಪ್ಪನ ಕಂಡ್ರೆ ಭಯನಾ? ಇಬ್ರೂ ಅಲ್ಲ, ಅವ್ರನ್ನು ಕಂಡ್ರೆ ಹೆದರ್ತಾರಂತೆ!

"ಅಣ್ಣಾವ್ರು ಅವರೊಂದಿಗೆ ಪರಶುರಾಮ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ, ನಾವು ಅಮಿತಾಭ್ ಬಚ್ಚನ್ ಅವರನ್ನು ಅದೇ ಸ್ಥಳದಲ್ಲಿ ಭೇಟಿಯಾಗಬಹುದೇ ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು ಖಂಡಿತವಾಗಿಯೂ, ಅವರು ನಿಮಗೆ ಅನುಮತಿಸುತ್ತಾರೆ ಎಂದು ಹೇಳಿದೆ. ನಂತರ ಅವರು ಮತ್ತೆ 'ತುಂಬಾ ಸೆಕ್ಯೂರಿಟಿ ಇರಲ್ಲ ಅಲ್ಲ? ಎಂದರು. ನೋಡಿ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಲಾಗುತ್ತದೆಯೇ ಎಂದು ಯೋಚಿಸುತ್ತಿದ್ದ ಸಾಮಾನ್ಯ ಮನುಷ್ಯನಂತೆ ಅವರು ಇದ್ದರು. ಅವರು ಯಾವಾಗಲೂ ಹೀಗೆಯೇ ಇದ್ದರು" ಎಂದು ದಯಾನಂದ್ ಅವರು ಹೇಳಿದರು.

ಮಗುವಿನಂತೆ ಓಡಿ ಬಂದಿದ್ರಂತೆ ಬಿಗ್​ ಬಿ

ಅಣ್ಣಾವ್ರು ತಮ್ಮ ಶೂಟಿಂಗ್ ಸ್ಪಾಟ್‌ಗೆ ಭೇಟಿ ನೀಡಿದಾಗ ಅಮಿತಾಭ್ ಹೇಗೆ ಪ್ರತಿಕ್ರಿಯಿಸಿದ್ದರು ಎಂದು ಸಹ ದಯಾನಂದ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ ನೋಡಿ. "ಅಮಿತಾಭ್ ಬಚ್ಚನ್ ಅವರ ಸುತ್ತಲೂ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಅವರ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾರಿಗೂ ಅವಕಾಶವಿರಲಿಲ್ಲ. ಅಣ್ಣಾವ್ರನ್ನು ನೋಡಿದ ಕೂಡಲೇ, ಅವರು ಎಲ್ಲವನ್ನೂ ಒಮ್ಮೆಲೇ ನಿಲ್ಲಿಸಿ, ಶಾಲೆಯಿಂದ ಹೊರ ಬಂದ ನಂತರ ತನ್ನ ತಂದೆಯನ್ನು ನೋಡಿದ ಮಗುವಿನಂತೆ ಅವರ ಬಳಿಗೆ ಓಡಿ ಬಂದರು. ಅವರು ಅಣ್ಣಾವ್ರ ಹತ್ತಿರ ಬಂದು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. "ನೀವು ಹೇಳಿದ್ದರೆ, ನಾನೇ ಬಂದು ನಿಮ್ಮನ್ನು ಭೇಟಿಯಾಗುತ್ತಿದ್ದೆ” ಎಂದು ಅಮಿತಾಭ್ ಹೇಳಿದರಂತೆ ಎಂದು ದಯಾನಂದ್ ಹೇಳಿದರು.

ಇದನ್ನೂ ಓದಿ: ರಾಕಿ ಭಾಯ್​ನ ನೋಡ್ಲೇ ಬೇಕು ಅಂತ ಕಣ್ಣೀರಿಟ್ಟ ಬಾಲಕ! ವಿಡಿಯೋ ನೋಡಿ ಯಶ್​ ಹೇಳಿದ್ದು ಹೀಗೆ

“ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸರ್ ಎಂದು ಖುದ್ದು ಅಮಿತಾಭ್ ಅವರೇ ಅಣ್ಣಾವ್ರ ಬಗ್ಗೆ ಆಡಿದ ಆ ಮಾತು ಇನ್ನೂ ನನಗೆ ಚೆನ್ನಾಗಿ ನೆನಪಿದೆ” ಎಂದು ದಯಾನಂದ್ ಅವರು ಹೇಳಿದರು. “ಇಂಗ್ಲೀಷ್‌ನಲ್ಲಿ ಅಣ್ಣಾವ್ರು ಆ ದಿನ ಅಮಿತಾಭ್ ಅವರೊಡನೆ ನಿರರ್ಗಳತೆಯಿಂದ ಮಾತನಾಡಿದ್ದು ನಾನು ನೋಡಿ ತುಂಬಾನೇ ಪ್ರಭಾವಿತನಾಗಿದ್ದೆ” ಎಂದೂ ದಯಾನಂದ್ ಹೇಳಿದರು. "ಅಣ್ಣಾವ್ರು ಇಂಗ್ಲೀಷ್‌ ಮಾತನಾಡುವುದನ್ನು ನಾನು ನೋಡಿದ್ದು ಅದೇ ಮೊದಲ ಬಾರಿಗೆ” ಎಂದು ಹೇಳಿದರು.

ಬಿಗ್​ ಬಿ ಕಂಡ್ರೆ ಪುನೀತ್​ಗೂ ಅಚ್ಚು ಮೆಚ್ಚು!

ಅಮಿತಾಭ್ ಅವರಿಗೆ ಅಣ್ಣಾವ್ರು “ನನ್ನ ಮಗ ಪುನೀತ್ ನಿಮ್ಮ ದೊಡ್ಡ ಅಭಿಮಾನಿ. ನನ್ನ ಎಲ್ಲಾ ಮಕ್ಕಳು ನಿಮ್ಮ ಅಭಿಮಾನಿಗಳು. ಈಗ ನಿಮ್ಮ ಕೈ ಹೇಗಿದೆ? ನಿಮ್ಮ ಹೊಟ್ಟೆ ಹೇಗಿದೆ? ನೀವು ನಮ್ಮ ಸ್ಥಳಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ. ಕೆ.ವಿ. ರಾಜು ತುಂಬಾ ಒಳ್ಳೆಯ ನಿರ್ದೇಶಕ” ಎಂದು ಹೇಳಿದ್ದರಂತೆ ಎಂದು ದಯಾನಂದ್ ನೆನಪಿಸಿಕೊಂಡರು.
Published by:Vasudeva M
First published: