Drugs Case: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಮಗ ಅರೆಸ್ಟ್, ಲೇಟ್​ ನೈಟ್​ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ!

Drug case: ಈ ಹಿಂದೆ ಸಿದ್ದಾಂತ್ ಕಪೂರ್ ಸೋದರಿ, ನಟಿ ಶ್ರದ್ಧಾ ಕಪೂರ್ ಹೆಸರು ಸಹ ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ಅವರಿಗೆ ನೋಟಿಸ್ ನೀಡಲಾಗಿತ್ತು.

ನಟ ಸಿದ್ಧಾಂತ್ ಕಪೂರ್

ನಟ ಸಿದ್ಧಾಂತ್ ಕಪೂರ್

  • Share this:
ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ (Five Star Hotel) ಮೇಲೆ ಹಲಸೂರು ಪೊಲೀಸರು ದಾಳಿ (Police Raide) ನಡೆಸಿದ್ದಾರೆ. ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಜಿಟಿ ಮಾಲ್ ಮುಂಭಾಗದಲ್ಲಿರುವ "THE PARK" 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆದಿದ್ದು, ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ (Drugs Party) ನಡೆಸುತ್ತಿದ್ದ ಅನುಮಾನ ಹಿನ್ನೆಲೆ ದಾಳಿ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆಇನ್ನು ವಶಕ್ಕೆ ಪಡೆದಿದ್ದ 35 ಜನರಿಗೆ ಮೆಡಿಕಲ್ ಟೆಸ್ಟ್​ ಮಾಡಿಸಲಾಗಿದ್ದು,  ಅದ್ರಲ್ಲಿ 5 ಜನ ಡ್ರಗ್ಸ್ ತೆಗೆದುಕೊಂಡಿರುವುದು ಪತ್ತೆಯಾಗಿದೆ.

ಐದು ಜನರ ಮೇಲೆ ಎಫ್ ಐ ಆರ್

ಈ ಐದು ಜನರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಬಾಲಿವುಡ್ ನಟನ ಮಗ ಕೂಡ ಸಿಕ್ಕಿ ಬಿದ್ದಿದ್ದು, ಡರ್ಗ್ಸ್ ತೆಗೆದುಕೊಂಡಿರುವುದು ಪತ್ತೆಯಾಗಿದೆ ಎನ್ನಲಾಗುತ್ತಿದೆ.  ಹೌದು, ಬಾಲಿವುಡ್  ನಟನ ಮಗ ಸಿದ್ದಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿರುವುದು ಸಾಬೀತಾಗಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ರಕ್ತದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ನಟ ಸಿದ್ದಾಂತ್ ಕಪೂರ್ ಬಾಲಿವುಡ್​ನ ಹಿರಿಯ ನಟ ಶಕ್ತಿ ಕಪೂರ್ ಮಗ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರ.

ಹಲಸೂರು ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಯವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ಮೂರು ಟಿಟಿ ವಾಹನದಲ್ಲಿ ಮೆಡಿಕಲ್ ಪರೀಕ್ಷೆಗೆ (Medical Test) ರವಾನೆ ಮಾಡಲಾಗಿದೆ.

ಬಾಲಿವುಡ್​ನಲ್ಲಿ ಸುದ್ದಿಯಾಗಿತ್ತು ಡ್ರಗ್ಸ್ ಪ್ರಕರಣ

ಈ ಹಿಂದೆ ಸಿದ್ದಾಂತ್ ಕಪೂರ್ ಸೋದರಿ, ನಟಿ ಶ್ರದ್ಧಾ ಕಪೂರ್ ಹೆಸರು ಸಹ ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ಅವರಿಗೆ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ:ಜೈ ಜಗದೀಶ್​ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್, ದೂರು ನೀಡಿದವರೇ ಹೊಡೆಯಲು ಬಂದಿದ್ರು ಎಂದ ನಟ

ಎನ್ ಸಿಬಿ ನೋಟಿಸ್ ಹಿನ್ನೆಲೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇನ್ನು ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ, ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಇನ್ನು ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ ಲಿಂಬಾಚಿಯಾ, ನಟ ಅರ್ಜುನ್ ಕಪೂರ್ ಗೆಳತಿ ಸೋದರ ಸಹ ಬಂಧನಕ್ಕೆ ಒಳಗಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇತ್ತೀಚೆಗಷ್ಟೇ ಕ್ಲಿನ್ ಚಿಟ್ ಸಿಕ್ಕಿದೆ.

ಕಳೆದ ವರ್ಷ ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಮಾಡಿತ್ತು. ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕ್ರೂಸ್ ಹಡಗಿನ ಕಾರ್ಡೆಲಿಯಾ ಮೇಲೆ ದಾಳಿ ನಡೆಸಲಾಗಿತ್ತು. ಡ್ರಗ್ಸ್ ಪಾರ್ಟಿಯ ಖಚಿತ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ಅಧಿಕಾರಿಗಳು ಮತ್ತು ಕೆಲವು ಸಾಕ್ಷಿಗಳ ತಂಡ ರೇಡ್ ಮಾಡಿತ್ತು.

ಇದನ್ನೂ ಓದಿ: ನನ್ನ ಮರ್ಯಾದೆ ಹರಾಜು ಹಾಕಿದ್ರಿ, NCB ಅಧಿಕಾರಿಗಳ ಮುಂದೆ ಆರ್ಯನ್ ಹೇಳಿದ್ದೇನು?

ಆ ವೇಳೆ ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು ₹ 1.33 ಲಕ್ಷ ನಗದನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು.
Published by:Sandhya M
First published: