Singer KK Death: ಕೆಕೆ ಸಾವಿಗೆ ಅವ್ರೇ ಕಾರಣನಾ? ಕೊನೆ ಉಸಿರು ಹೋಗೋ ಮುನ್ನ ಸೂಚನೆ ಕೊಟ್ಟಿದ್ರಂತೆ ಲೆಜೆಂಡ್​ ಸಿಂಗರ್​!

ಕೋಲ್ಕತ್ತಾದಲ್ಲಿ ಕಳೆದ ರಾತ್ರಿ ನಡೆದ ಖ್ಯಾತ ಸಂಗೀತಗಾರ ಕೆಕೆ ಅವರ ಸಂಗೀತ (Music) ಕಾರ್ಯಕ್ರಮದಲ್ಲಿ ಅನಾನುಕೂಲವಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಕೆ

ಕೆಕೆ

  • Share this:
ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು (Singer KK Death) 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರ ಬಳಿಕ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಆದರೆ ಇದೀಗ ಅವರ ಸಾವಿನ ಸುತ್ತ ಅನೇಕ ಅನುಮಾನಗಳು ಉಂಟಾಗಿದ್ದು, ಇಂದು ನಗರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇದರ ನಡುವೆ ಕೋಲ್ಕತ್ತಾದಲ್ಲಿ ಕಳೆದ ರಾತ್ರಿ ನಡೆದ ಸಂಗೀತ (Music) ಕಾರ್ಯಕ್ರಮದಲ್ಲಿ ಅನಾನುಕೂಲವಾಗಿರುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ (Online) ಹಂಚಿಕೊಳ್ಳಲಾಗಿದೆ. ಮಂಗಳವಾರ ರಾತ್ರಿ ಕೋಲ್ಕತ್ತಾದ (Kolkata) ನಜ್ರುಲ್ ಮಂಚದಲ್ಲಿ ನಡೆದ ಕಾರ್ಯಕ್ರಮದಲ್ಲಿನ ಅನಾನೂಕೂಲತೆಯ ದೂರು ನೀಡಿದ ನಂತರ ಕೆಕೆ 53ನೇ ವಯಸ್ಸಿನಲ್ಲಿ ನಿಧನರಾದರು.ಕೆಕೆ ಅವರು ಈ ಕುರಿತು ದೂರು ನೀಡಿದ ವಿಡಿಯೋಗಳು ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.

ಸಂಗೀತ ಕಾರ್ಯಕ್ರಮದಲ್ಲಿ ಅನಾನೂಕೂಲತೆ:

ಇನ್ನು, ಕಳೆದ ರಾತ್ರಿ ಕೋಲ್ಕತ್ತಾದ್ಲಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಕೆಕೆ ಅವರು ಭಾಗಿಯಾಗಿ, ನೆರೆದ ಜನರನ್ನು ರಂಜಿಸಿದ್ದರು. ಆದರೆ ಒಳಾಂಗಣ ಸ್ಥಳದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಕೆಲವು ಪ್ರೇಕ್ಷಕರು ಮತ್ತು ವೇದಿಕೆಯಲ್ಲಿದ್ದವರು ವಿಪರೀತವಾಗಿ ಬೆವರುತ್ತಿದ್ದರು ಮತ್ತು ಉಸಿರುಕಟ್ಟಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಕೆಕೆ ಅವರು ಸಂಘಟಕರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.





ಅಲ್ಲದೇ ವೇದಿಕೆ ಮೇಲಿನ ತನ್ನ ಮೇಲಿನ ಸ್ಪಾಟ್‌ಲೈಟ್‌ಗಳನ್ನು ಮಂದಗೊಳಿಸುವಂತೆ ಅವರು ಸಂಘಟಕರನ್ನು ವಿನಂತಿಸಿದ್ದರು. ಈ ವೇಳೆಯ ವಿಡಿಯೋವೊಂದು ಇದೀಗಸ ಆಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಕೆ ಅವರ ಸಾವಿಗೆ ಸಂಘಟಿಕರ ಬೇಜವಬ್ದಾರಿಯೇ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ: Singer KK Death: ಕೆಕೆ ನೆನೆದು ಕಣ್ಣೀರಿಟ್ಟ ಬಾಲಿವುಡ್​ ಮಂದಿ - ಮೋದಿ ಸೇರಿ ಗಣ್ಯರ ಸಂತಾಪ

ಸಂಘಟಕರಿಗೆ ದೂರು ನೀಡಿದ ಕೆಕೆ:

ಇನ್ನು, ಸಂಗೀತ ಕಾರ್ಯ್ಕರಮದಲ್ಲಿನ ಅವ್ಯವಸ್ಥೆ ಬಗ್ಗೆ ಕೆಕೆ ಸಂಘಟಕರಿಗೆ ತಿಳಸಿದ್ದಾರೆ. ಅಲ್ಲದೇ ಈ ಸಂಬಂಧ ಹರಿದಾಡುತ್ತಿರುವ ವಿಡಿಯೋದಲ್ಲಿ, ಕೆಕೆ ಸೆಕೆ ಹಾಗೂ ಬೆವರಿನಿಂದ ತಮ್ಮ ಮುಖವನ್ನು ಒರೆಸಿಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ಹಿಂಬದಿಯಿಂದ ಒಬ್ಬರು ‘ಜ್ಯಾದಾ ಗರಂ ಹೈ‘ ಎಂದು ಹೇಳುವುದನ್ನು ಕೇಳಬಹುದು. ಇದಾದ ಬಳಿಕೆ ಕೆಕೆ ತಕ್ಷಣ ಅಲ್ಲಿನ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಹೊರನಡೆಯುತ್ತಾರೆ.



ರಾತ್ರಿ 10ಕ್ಕೆ ಆಸ್ಪತ್ರೆಗೆ ದಾಖಲು:

ಸಂಗೀತ ಕಾರ್ಯಕ್ರಮದಿಂದ ನೇರವಾಗಿ ಹೋಟೆಲ್ ತಲುಪಿದ ನಂತರ ಕೆಕೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೆಲ ವರದಿಗಳ ಪ್ರಕಾರ ರಾತ್ರಿ 10 ಗಂಟೆಗೆ ಕೃಷ್ಣಕುಮಾರ್ ಅವರನ್ನು ಆಸ್ಪತ್ರಗೆ ಕರೆತರಲಾಗಿತ್ತು ಎಂದು ವೈದ್ಯರು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಎಲೆಕ್ಟ್ರಿಕ್ ಲೈವ್​ಗಳಿಗೆ ಹೆಸರುವಾಸಿಯಾಗಿದ್ದ ಗಾಯಕ: 

ಅವರು ದೆಹಲಿಯಲ್ಲಿ ಜನಿಸಿದರು ಅವರು ಎಲೆಕ್ಟ್ರಿಕ್ ಲೈವ್ ಶೋಗಳಿಗೆ ಹೆಸರುವಾಸಿಯಾಗಿದ್ದರು. ಅವರ Instagram ಪುಟದಲ್ಲಿ ಎಂಟು ಗಂಟೆಗಳ ಹಿಂದೆ ಕೋಲ್ಕತ್ತಾದಲ್ಲಿ ಅವರ ಸಂಗೀತ ಕಚೇರಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: Singer KK Death: ಸಂಗೀತ ಕಾರ್ಯಕ್ರಮ ನೀಡುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಹೆಸರಾಂತ ಗಾಯಕ ಕೆಕೆ; ಅವರ ಕೊನೆ ವಿಡಿಯೋ ನೋಡಿ

ಕನ್ನಡದಲ್ಲೂ ಹಾಡಿದ್ದ ಕೆಕೆ!:

ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
Published by:shrikrishna bhat
First published: